Last Updated:
ಮದುವೆ, ಕುಟುಂಬ ಮತ್ತು ಮಗುವಿನ ಆರೈಕೆಗೆ ಸ್ವಲ್ಪಕಾಲ ಚಿತ್ರರಂಗದಿಂದ ದೂರ ಉಳಿದಿದ್ದ ಕಾಜಲ್ ಅಗರ್ವಾಲ್ ಈಗ ಮತ್ತೆ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ. ದಕ್ಷಿಣ ಭಾರತದ ಜೊತೆಗೆ ಹಿಂದಿ ಸಿನಿಮಾಗಳಲ್ಲಿಯೂ ಅವಕಾಶಗಳನ್ನು ಪಡೆದುಕೊಳ್ಳುತ್ತಿರುವ ಅವರು ಹಲವು ಬಿಗ್ ಬಜೆಟ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿರುವ ಕಾಜಲ್ ಅಗರ್ವಾಲ್ (Kajal Aggarwal) ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರ ಹೊಸ ಸಿನಿಮಾ ಅಥವಾ ವೃತ್ತಿಜೀವನದ ಸಾಧನೆಗಾಗಿ ಅಲ್ಲ. ಹಲವು ವರ್ಷಗಳ ಹಿಂದೆ ಶೂಟಿಂಗ್ ವೇಳೆ ನಡೆದ ಆಘಾತಕಾರಿ ಘಟನೆಯೊಂದನ್ನು ಅವರು ಮೊದಲ ಬಾರಿಗೆ ಬಹಿರಂಗವಾಗಿ ಹಂಚಿಕೊಂಡಿದ್ದು, ಅದು ಚಿತ್ರರಂಗದಲ್ಲಿ ಚರ್ಚೆಗೆ ಕಾರಣವಾಗಿದೆ.
ಮದುವೆ, ಕುಟುಂಬ ಮತ್ತು ಮಗುವಿನ ಆರೈಕೆಗೆ ಸ್ವಲ್ಪಕಾಲ ಚಿತ್ರರಂಗದಿಂದ ದೂರ ಉಳಿದಿದ್ದ ಕಾಜಲ್ ಅಗರ್ವಾಲ್ ಈಗ ಮತ್ತೆ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ. ದಕ್ಷಿಣ ಭಾರತದ ಜೊತೆಗೆ ಹಿಂದಿ ಸಿನಿಮಾಗಳಲ್ಲಿಯೂ ಅವಕಾಶಗಳನ್ನು ಪಡೆದುಕೊಳ್ಳುತ್ತಿರುವ ಅವರು ಹಲವು ಬಿಗ್ ಬಜೆಟ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ವೃತ್ತಿಜೀವನದಲ್ಲಿ ಮರೆಯಲಾಗದ ಕಹಿ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ.
ಸಿನಿಮಾ ಚಿತ್ರೀಕರಣದ ವೇಳೆ ಕಲಾವಿದರಿಗೆ ಕ್ಯಾರಾವ್ಯಾನ್ ಅತ್ಯಂತ ಖಾಸಗಿ ಸ್ಥಳವಾಗಿರುತ್ತದೆ. ವಿಶ್ರಾಂತಿ ಪಡೆಯಲು, ಉಡುಪು ಬದಲಾಯಿಸಲು ಮತ್ತು ಮುಂದಿನ ದೃಶ್ಯಕ್ಕೆ ಸಿದ್ಧರಾಗಲು ಇದೇ ಸ್ಥಳವನ್ನು ಬಳಸಲಾಗುತ್ತದೆ. ಇಂತಹ ಖಾಸಗಿ ಸ್ಥಳದಲ್ಲೇ ನಡೆದ ಘಟನೆ ಕಾಜಲ್ ಅವರನ್ನು ಬೆಚ್ಚಿಬೀಳುವಂತೆ ಮಾಡಿತ್ತು.
ದಿಢೀರನೆ ಕ್ಯಾರಾವ್ಯಾನ್ಗೆ ಪ್ರವೇಶಿಸಿದ ವ್ಯಕ್ತಿಯ ವರ್ತನೆ ಇನ್ನಷ್ಟು ಅಚ್ಚರಿ ಮೂಡಿಸಿತು ಎಂದು ಕಾಜಲ್ ತಿಳಿಸಿದ್ದಾರೆ. ಅವರ ಎದುರಲ್ಲೇ ಆತ ತನ್ನ ಶರ್ಟ್ ಬಿಚ್ಚಿ ಎದೆಯ ಮೇಲಿದ್ದ ಟ್ಯಾಟೂವನ್ನು ತೋರಿಸಿದ್ದಾನೆ. ಆ ಟ್ಯಾಟೂದಲ್ಲಿ ಕಾಜಲ್ ಅಗರ್ವಾಲ್ ಅವರ ಹೆಸರೇ ಇತ್ತು.
ಈ ಘಟನೆ ನಡೆದ ಕ್ಷಣದಲ್ಲಿ ತಮಗೆ ಏನು ಮಾಡಬೇಕೆಂದು ತಿಳಿಯದೆ ಕೆಲವು ಕ್ಷಣ ಸ್ತಬ್ಧರಾಗಿದ್ದೆ ಎಂದು ಅವರು ನೆನಪಿಸಿಕೊಂಡಿದ್ದಾರೆ. ಅಭಿಮಾನ ಎಂಬ ಹೆಸರಿನಲ್ಲಿ ಇಂತಹ ನಡೆ ಯಾವತ್ತೂ ಸಮರ್ಥನೀಯವಲ್ಲ. ಮಹಿಳೆಯ ಖಾಸಗಿತನವನ್ನು ಗೌರವಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಅವರು ಹೇಳಿದ್ದಾರೆ.
ಆಘಾತಕಾರಿ ಪರಿಸ್ಥಿತಿ ಎದುರಾದರೂ ಕಾಜಲ್ ಅಗರ್ವಾಲ್ ಆತುರದ ನಿರ್ಧಾರ ತೆಗೆದುಕೊಳ್ಳಲಿಲ್ಲ. ಶಾಂತವಾಗಿ ಆ ವ್ಯಕ್ತಿಗೆ ತನ್ನ ನಡೆ ತಪ್ಪಾಗಿದೆ ಎಂದು ತಿಳಿಸಿ ಎಚ್ಚರಿಕೆ ನೀಡಿದ್ದಾಗಿ ಅವರು ಹೇಳಿದ್ದಾರೆ. ಪ್ರತಿಯೊಬ್ಬರ ಖಾಸಗಿತನವನ್ನು ಗೌರವಿಸಬೇಕು ಮತ್ತು ಮಹಿಳೆಯರು ಸುರಕ್ಷಿತವಾಗಿ ಕೆಲಸ ಮಾಡುವ ವಾತಾವರಣ ನಿರ್ಮಾಣವಾಗಬೇಕು ಎಂಬುದೇ ತಮ್ಮ ಆಶಯ ಎಂದು ತಿಳಿಸಿದ್ದಾರೆ.
ಕಾಜಲ್ ಅಗರ್ವಾಲ್ ಹಂಚಿಕೊಂಡ ಈ ಘಟನೆ ಮತ್ತೆ ಚಿತ್ರರಂಗದಲ್ಲಿ ಮಹಿಳಾ ಕಲಾವಿದರ ಸುರಕ್ಷತೆಯ ಪ್ರಶ್ನೆಯನ್ನು ಮುನ್ನೆಲೆಗೆ ತಂದಿದೆ. ಶೂಟಿಂಗ್ ಸ್ಥಳಗಳಲ್ಲಿ ಕಲಾವಿದರ ಖಾಸಗಿತನವನ್ನು ಕಾಪಾಡಲು ಕಟ್ಟುನಿಟ್ಟಿನ ನಿಯಮಗಳು ಅಗತ್ಯ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
Bangalore [Bangalore],Bangalore,Karnataka














