Sparsha Movie: ಕಿಚ್ಚನ ‘ಸ್ಪರ್ಶ’ ಚಿತ್ರಕ್ಕೆ 26 ವರ್ಷ; ಆ ದಿನ ಏನೆಲ್ಲ ಆಗಿತ್ತು ಗೊತ್ತಾ? | | ACTPnews

ಕಿಚ್ಚನ 'ಸ್ಪರ್ಶ' ಚಿತ್ರಕ್ಕೆ ಇಂದಿಗೆ 26 ವರ್ಷ ಪೂರ್ಣ!


Last Updated:

ಕಿಚ್ಚ ಸುದೀಪ್ ಅಭಿನಯದ ಸ್ಪರ್ಶ ಚಿತ್ರ ಬಂದು 26 ವರ್ಷ ಆಗಿದೆ. ಈ ಚಿತ್ರ ರಿಲೀಸ್‌ ಆದಾಗ ಏನೆಲ್ಲ ಆಗಿತ್ತು. ಕಲೆಕ್ಷನ್ ಮೇಲೆ ಯಾಕೆ ಎಫೆಕ್ಟ್ ಆಗಿತ್ತು. ಈ ಎಲ್ಲ ವಿಷಯದ ವಿವರ ಇಲ್ಲಿದೆ ಓದಿ.

ಕಿಚ್ಚನ 'ಸ್ಪರ್ಶ' ಚಿತ್ರಕ್ಕೆ ಇಂದಿಗೆ 26 ವರ್ಷ ಪೂರ್ಣ!
ಕಿಚ್ಚನ ‘ಸ್ಪರ್ಶ’ ಚಿತ್ರಕ್ಕೆ ಇಂದಿಗೆ 26 ವರ್ಷ ಪೂರ್ಣ!

ಸ್ಪರ್ಶ್ ಚಿತ್ರ (Sparsha Movie) ಕಳೆದ 26 ವರ್ಷದ ಹಿಂದೆ ಬಂದಿತ್ತು. ರಾಜಕುಮಾರ್ ಅಪಹರಣ (Rajkumar Abduction) ಆದಾಗ ಈ ಚಿತ್ರದ ಕಲೆಕ್ಷನ್ ಮೇಲೂ ಎಫೆಕ್ಟ್ ಆಗಿತ್ತು. ಕಾರಣ, ಇಡೀ ರಾಜ್ಯದಲ್ಲಿ ಬಂದ್ ಕರೆ ಕೂಡ ಕೊಟ್ಟಿದ್ದರು. ಪರಿಸ್ಥಿತಿ ತಣ್ಣಗಾದ ಮೇಲೆ ಈ ಚಿತ್ರ100 ದಿನ ಪೂರೈಸಿದೆ. ಕಿಚ್ಚ ಸುದೀಪ್ (Sudeepa) ಅವರ ಚಿತ್ರ ಜೀವನದಲ್ಲಿ ಈ ಸಿನಿಮಾ ಅಷ್ಟೆ ವಿಶೇಷವಾಗಿದೆ. ಪ್ರತ್ಯರ್ಥ, (Prathyartha) ತಾಯವ್ವ ಚಿತ್ರ ಆದ್ಮೇಲೆ ಈ ಚಿತ್ರ ಬಂದಿತ್ತು. ಈ ಸಿನಿಮಾದ ಹಾಡುಗಳು ಕೂಡ ಹಿಟ್ ಆಗಿದ್ದವು. ಈ ಚಿತ್ರ ಬಂದು 2026 ಜುಲೈ-23 ಕ್ಕೆ 26 ವರ್ಷ ಆಗುತ್ತದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಸ್ಪರ್ಶ ಸಿನಿಮಾ

ಸ್ಪರ್ಶ ಚಿತ್ರ ಒಂದು ರೋಮ್ಯಾಂಟಿಕ್ ಸಿನಿಮಾನೇ ಆಗಿದೆ. ಈ ಚಿತ್ರದಲ್ಲಿ ಸುಧಾರಾಣಿ ನಟಿಸಿದ್ದರು. ನಟಿ ರೇಖಾ ಅವರೂ ಇದ್ದರು. ಸುದೀಪ್ ಈ ಚಿತ್ರದಲ್ಲಿ ಕ್ಲೀನ್‌ ಶೇವ್ ಲುಕ್ ಅಲ್ಲಿಯೇ ಅಭಿನಯಿಸಿದ್ದಾರೆ.
kichcha sudeep rekha sparsha movie completes 26 years

ಆ ದಿನ ಏನೆಲ್ಲ ಆಗಿತ್ತು ಗೊತ್ತಾ?

ಈ ಚಿತ್ರದ ಚಂದಕ್ಕಿಂತ ಚೆಂದ ನೀನೇ ಸುಂದರ ಹಾಡು ಹಿಟ್ ಆಗಿತ್ತು. ಪಂಕಜ್ ಉದಾಸ್ ಇದನ್ನ ಹಾಡಿದ್ದರು. ಈ ಚಿತ್ರದಲ್ಲಿ ಇಟಗಿ ಈರಣ್ಣ ಅವರು ಬರೆದ ಕನ್ನಡ ಶಾಯರಿಗಳನ್ನ ಇಲ್ಲಿ ಸುದೀಪ್ ಹೇಳಿದ್ದರು. ಇವು ಕೂಡ ಅಷ್ಟೆ ಗಮನ ಸೆಳೆದಿದ್ದವು.

ಜುಲೈ-23 ರಂದು ರಿಲೀಸ್

ಸ್ಪರ್ಶ ಚಿತ್ರ ಜುಲೈ-23,2000 ರಲ್ಲಿ ರಿಲೀಸ್ ಆಗಿತ್ತು. 26 ವರ್ಷದ ಹಿಂದೆ ಬಂದ ಈ ಸಿನಿಮಾ ವಿಮರ್ಶಕರಿಂದಲೂ ಮೆಚ್ಚುಗೆ ಪಡೆದುಕೊಂಡಿತ್ತು.

ಚಿತ್ರ ನೋಡಿ ಬಂದ ಜನ ಕೂಡ ಇದನ್ನ ಒಪ್ಪಿಕೊಂಡಿದ್ದರು. ಆದರೆ, ಈ ಚಿತ್ರ ರಿಲೀಸ್ ಆದ ಸಮಯದಲ್ಲಿ ಅಣ್ಣಾವ್ರರನ್ನ ಕಾಡುಗಳ್ಳ ವೀರಪ್ಪನ್ ಅಪಹರಣ ಮಾಡಿದ್ದ, ಇದರಿಂದ ಕರ್ನಾಟದಲ್ಲಿ ಬಂದ್ ಕರೆ ಕೂಡ ಕೊಡಲಾಗಿತ್ತು. ಇದರಿಂದ ಸ್ಪರ್ಶ ಚಿತ್ರದ ಶೋಗಳು ಕ್ಯಾನ್ಸಲ್ ಆದವು. ಹಾಗಾಗಿಯೇ ಕಲೆಕ್ಷನ್ ಮೇಲೆ ಭಾರೀ ಎಫೆಕ್ಟ್ ಆಗಿತ್ತು.

kichcha sudeep rekha sparsha movie completes 26 years

100 ದಿನ ಯಶಸ್ವಿ ಓಟ
100 ದಿನ ಯಶಸ್ವಿ ಓಟ

ಪರಿಸ್ಥಿತಿ ತಿಳಿಗೊಂಡ್ಮೇಲೆ ಸ್ಪರ್ಶ ಚಿತ್ರದ ಶೋಗಳು ಮತ್ತೆ ಶುರು ಆದವು. ಹಾಗೆ ಮುಂದೆ ಈ ಚಿತ್ರ 100 ದಿನ ಯಶಸ್ವಿ ಆಗಿಯೇ ಪೂರೈಸ್ತು ನೋಡಿ.

ಅಂತಹ ಈ ಚಿತ್ರವನ್ನ ಸುನಿಲ್ ಕುಮಾರ್ ದೇಸಾಯಿ ಡೈರೆಕ್ಷನ್ ಮಾಡಿದ್ದರು. ಕತೆ ಚಿತ್ರಕತೆಯನ್ನು ಮಾಡಿದ್ದರು. ಸರೋವರ್ ಸಂಜೀವ್ ರಾವ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದರು.

ಹಂಸಲೇಖ ಸಂಗೀತ

ಸ್ಪರ್ಶ ಚಿತ್ರಕ್ಕೆ ಹಂಸಲೇಖ ಸಂಗೀತ ಕೊಟ್ಟಿದ್ದರು. ಇವರ ಸಂಗೀತದಲ್ಲಿ 8 ಹಾಡುಗಳು ಬಂದಿದ್ದವು. ಬಹುತೇಕ ಎಲ್ಲ ಹಾಡುಗಳೂ ಚೆನ್ನಾಗಿದ್ದವು.

ಇವುಗಳಲ್ಲಿ ಚಂದಕಿಂತ ಚಂದ ಹಾಡು ಜನರಿಗೆ ಹೆಚ್ಚು ಇಷ್ಟ ಆಗಿತ್ತು. ಬಾಲಿವಡ್ ಗಾಯಕ ಪಂಕಜ್ ಉದಾಸ್ ಇದನ್ನ ಹಾಡಿದ್ದರು. ಈ ಚಿತ್ರ ಬಂದು 26 ವರ್ಷ ಆಗಿದೆ. ಇದನ್ನ ಸುದೀಪ್ ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಈ ಚಿತ್ರಗಳ ದೃಶ್ಯ ಇರೋ ಒಂದು ವಿಡಿಯೋ ಕೂಡ ಶೇರ್ ಆಗಿದೆ. ಈ ಮೂಲಕ ಫ್ಯಾನ್ಸ್ ತಮ್ಮದೇ ರೀತಿಯಲ್ಲಿಯೇ ಸೆಲೆಬ್ರೇಟ್ ಮಾಡಿದ್ದಾರೆ ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed