Last Updated:
‘ನಮ್ಮ ಶಿಕ್ಷಣ ವ್ಯವಸ್ಥೆಯನ್ನು ನಿರಂತರವಾಗಿ ಬಲಪಡಿಸಲು ನಾವೆಲ್ಲರೂ ಒಗ್ಗೂಡಿ ಒಟ್ಟಾಗಿ ಕೆಲಸ ಮಾಡಬಹುದು ಎಂದು ನಾನು ಭಾವಿಸುತ್ತೇನೆ, ಇದರಿಂದಾಗಿ ಅದು ಮುಂದಿನ ಪೀಳಿಗೆಗೆ ಅವಕಾಶ, ನಾವೀನ್ಯತೆ ಮತ್ತು ಭರವಸೆಯ ಮೂಲವಾಗಿ ಉಳಿಯುತ್ತದೆ’ ಎಂದು ಅಭಿನವ್ ಬಿಂದ್ರಾ ಹೇಳಿದರು.
ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ (NEET Question Paper Leak) ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ (Dharmendra Pradhan Resign) ನೀಡಬೇಕು ಎಂದು ಆಗ್ರಹಿಸಿ ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ (CJP protest) ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದೆ.
ದೇಶಾದ್ಯಂತ ಹಲವಾರು ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಾರಣವಾದ ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳ ವಿರುದ್ಧ ತೀವ್ರ ಪ್ರತಿಭಟನೆಗಳು ನಡೆಯುತ್ತಿರುವ ನಡುವೆ, ಭಾರತದ ಮೊದಲ ವೈಯಕ್ತಿಕ ಒಲಿಂಪಿಕ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ಗುರುವಾರ ‘ಆತ್ಮವಿಶ್ವಾಸವನ್ನು ಪ್ರೇರೇಪಿಸುವ; ಶಿಕ್ಷಣ ವ್ಯವಸ್ಥೆಗೆ ಕರೆ ನೀಡಿದ್ದಾರೆ. ಆ ಮೂಲಕ ವಿದ್ಯಾರ್ಥಿಗಳ ಪರ ಧ್ವನಿಯೆತ್ತಿದ್ದಾರೆ.
I have never considered myself a political person. But I do believe that some issues belong to all of us, regardless of where we stand. Education is one of them.
The measure of a nation is found not only in its economy or its achievements, but in the opportunities it creates for…
— Abhinav A. Bindra OLY (@Abhinav_Bindra) July 23, 2026
ಈ ಸಂಬಂಧ ಸಾಮಾಜಿಕ ಜಾಲತಾಣ ಖಾತೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ದೇಶದ ಕ್ರೀಡಾಪಟು ಶಾರ್ಪ್ ಶೂಟರ್ ಅಭಿನವ್ ಬಿಂದ್ರಾ, ‘ನಾನು ನನ್ನನ್ನು ಎಂದಿಗೂ ರಾಜಕೀಯ ವ್ಯಕ್ತಿ ಎಂದು ಪರಿಗಣಿಸಿಲ್ಲ. ಆದರೆ ನಾವು ಎಲ್ಲೇ ನಿಂತಿದ್ದರೂ ಕೆಲವು ಸಮಸ್ಯೆಗಳು ನಮ್ಮೆಲ್ಲರಿಗೂ ಸೇರಿವೆ ಎಂದು ನಾನು ನಂಬುತ್ತೇನೆ. ಅವುಗಳಲ್ಲಿ ಶಿಕ್ಷಣವು ಕೂಡ ಒಂದು’ ಎಂದು ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಒಂದು ರಾಷ್ಟ್ರದ ಅಳತೆಯು ಅದರ ಆರ್ಥಿಕತೆ ಅಥವಾ ಅದರ ಸಾಧನೆಗಳಲ್ಲಿ ಮಾತ್ರವಲ್ಲ, ಅದು ಅದರ ಯುವಜನರಿಗೆ ಸೃಷ್ಟಿಸುವ ಅವಕಾಶಗಳಲ್ಲಿಯೂ ಕಂಡುಬರುತ್ತದೆ. ಆತ್ಮವಿಶ್ವಾಸವನ್ನು ಪ್ರೇರೇಪಿಸುವ, ಅರ್ಹತೆಗೆ ಪ್ರತಿಫಲ ನೀಡುವ ಮತ್ತು ಕುತೂಹಲವನ್ನು ಪೋಷಿಸುವ ಶಿಕ್ಷಣ ವ್ಯವಸ್ಥೆಯು ರಾಷ್ಟ್ರದ ದೊಡ್ಡ ಸಾಮರ್ಥ್ಯಗಳಲ್ಲಿ ಒಂದಾಗಿದೆ’ ಎಂದು ಬಿಂದ್ರಾ ಹೇಳಿದ್ದಾರೆ.
ಮುಂದುವರಿದು, ‘ನಮ್ಮ ಶಿಕ್ಷಣ ವ್ಯವಸ್ಥೆಯನ್ನು ನಿರಂತರವಾಗಿ ಬಲಪಡಿಸಲು ನಾವೆಲ್ಲರೂ ಒಗ್ಗೂಡಿ ಒಟ್ಟಾಗಿ ಕೆಲಸ ಮಾಡಬಹುದು ಎಂದು ನಾನು ಭಾವಿಸುತ್ತೇನೆ, ಇದರಿಂದಾಗಿ ಅದು ಮುಂದಿನ ಪೀಳಿಗೆಗೆ ಅವಕಾಶ, ನಾವೀನ್ಯತೆ ಮತ್ತು ಭರವಸೆಯ ಮೂಲವಾಗಿ ಉಳಿಯುತ್ತದೆ’ ಎಂದು ಅಭಿನವ್ ಬಿಂದ್ರಾ ಹೇಳಿದರು.
ಜುಲೈ 20 ರಂದು ಸಾವಿರಾರು ವಿದ್ಯಾರ್ಥಿಗಳು ನೀಟ್ ಅಕ್ರಮದ ವಿರುದ್ಧ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಲು ಸಂಸತ್ತಿನ ಕಡೆಗೆ ಮೆರವಣಿಗೆ ನಡೆಸಲು ಪ್ರಯತ್ನಿಸಿದರು, ಆದರೆ ದೆಹಲಿ ಪೊಲೀಸರ ಅಶ್ರುವಾಯು ಮತ್ತು ಲಾಠಿ ಚಾರ್ಜ್ ಸೇರಿದಂತೆ ಬಲಪ್ರಯೋಗದಿಂದ ವಿದ್ಯಾರ್ಥಿಗಳ ಹೋರಾಟ ವಿಫಲವಾಯಿತು. ಆದರೆ ಛಲಬಿಡದ ವಿದ್ಯಾರ್ಥಿಗಳು ಹೋರಾಟವನ್ನು ಮುನ್ನಡೆಸಿದ್ದಾರೆ.
New Delhi,Delhi














