ಎ ಫಾರ್ ಆನಂದ್ ಆದ್ಮೇಲೆ…
(ಚಿತ್ರ ಕೃಪೆ: ಶ್ರೀನಿ ಇನ್ಸ್ಟಾಗ್ರಾಮ್)
ನಿಜ, ಎ ಫಾರ್ ಆನಂದ್ ಟೈಟಲ್ ಅನ್ನ ಕೇಳಿದಾಗಲೇ ಶಿವಣ್ಣ ತುಂಬಾನೆ ಖುಷಿಪಟ್ಟಿದ್ದಾರೆ. ಈ ಟೈಟಲ್ ಅನ್ನ ಡೈರೆಕ್ಟರ್ ಶ್ರೀನಿನೇ ಕೊಟ್ಟಿದ್ದಾರೆ. ಚಿತ್ರದ ಐಡಿಯಾ ಅಂತ ಬಂದಾಗ ಇದು ಬೇರೆ ಯಾರೋದ್ದೋ ಅಲ್ಲ. ಗೀತಾ ಶಿವರಾಜ್ ಕುಮಾರ್ ಅವರೇ ಈ ಐಡಿಯಾ ಕೊಟ್ಟಿದ್ದಾರೆ ನೋಡಿ.
ಚಿತ್ರದ ಟೈಟಲ್ ಏನು ಅಂತ ಶಿವಣ್ಣ ಕೇಳಿದರು. ಆಗಲೇ ಶ್ರೀನಿ ಹೇಳಿಯೇ ಬಿಟ್ಟರು. ಎ ಫಾರ್ ಆನಂದ್ ಅಂತಲೇ ತಿಳಿಸಿದರು. ಎ ಫಾರ್ ಆನಂದ್ ಅನ್ನೋದರಲ್ಲಿ ಎರಡು ಅರ್ಥ ಇದೆ.
ಆನಂದ್ ಅಂದ್ರೆ ಅದು ಶಿವರಾಜ್ ಕುಮಾರ್ ಅವರ ಮೊದಲ ಚಿತ್ರವೇ ಆಗಿದೆ. ಎ ಫಾರ್ ಆನಂದ್ ಅಂದ್ರೆ ಇದು ಮಕ್ಕಳ ಚಿತ್ರ ಅಂತಲೂ ಗೊತ್ತಾಗುತ್ತದೆ. ಹಾಗಾಗಿಯೇ ಈ ಟೈಟಲ್ ಕೇಳಿದಾಕ್ಷಣವೇ ಶಿವಣ್ಣ ಅವರಿಗೆ ಸೂಪರ್ ಅನಿಸಿದೆ ನೋಡಿ.
ಶಿವರಾಜ್ ಕುಮಾರ್ ಅವರು ಡೈರೆಕ್ಟರ್ ಶ್ರೀನಿಗೆ ಅವರಿಗೆ ಒಂದು ಮಾತು ಹೇಳಿದರು. ಒಂದು ಯಾಡಿಯಾ ಇದೆ. ಅದನ್ನ ನಾವೇ ಪ್ರೊಡ್ಯೂಸರ್ ಮಾಡ್ಬೇಕು ಅಂತಾ ಇದ್ದೇವೆ.
ಆದರೆ, ಚಿತ್ರಕ್ಕೆ ನೀನೇ ಡೈರೆಕ್ಟರ್ ಆಗ್ಬೇಕು ಅಂತಲೂ ಹೇಳಿದರು. ಈ ಒಂದು ಮಾತುಕತೆ ಘೋಸ್ಟ್ ಚಿತ್ರದ ಸಮಯದಲ್ಲಿಯೇ ಆಗಿದೆ. ಆಗಲೇ ಈ ಒಂದು ಐಡಿಯಾ ಡೆವೆಲಪ್ ಆಗೋಕೆ ಶುರು ಆಗಿದೆ ನೋಡಿ.
ಎ ಫಾರ್ ಆನಂದ್ ಚಿತ್ರದ ಶೂಟಿಂಗ್ ಇನ್ನು ಶುರು ಆಗಿಲ್ಲ. ನಮ್ಮ ಚಿತ್ರ ಈ ರೀತಿಯ ಕಂಟೆಂಟ್ ಹೊಂದಿರುತ್ತದೆ ಅನ್ನೋದನ್ನ ಹೇಳೋಕೆ ಒಂದು ಪ್ರೋಮೋ ಮಾಡಿದ್ದಾರೆ.
ಇದರಲ್ಲಿ ಗೀತಾ ಶಿವರಾಜ್ ಕುಮಾರ್ ಅಭಿನಯಿಸಿದ್ದಾರೆ. ಆದರೆ, ಪ್ರೋಮೋದಲ್ಲಿ ನಟಿಸಲು ಗೀತಾ ಶಿವರಾಜ್ ಕುಮಾರ್ ಮೊದಲು ಒಪ್ಪಲ್ಲೇ ಇಲ್ಲ.
ಆಗಸ್ಟ್ ತಿಂಗಳಿನಿಂದ ಶೂಟಿಂಗ್ ಶುರು
(ಚಿತ್ರ ಕೃಪೆ: ಶ್ರೀನಿ ಇನ್ಸ್ಟಾಗ್ರಾಮ್)
ನಿಮ್ಮ ನಿರ್ಮಾಣದ ಚಿತ್ರದಲ್ಲಿ ನೀವು ನಟಿಸದೇ ಇದ್ದರೆ ಹೇಗೆ ಅಂತಲು ಶ್ರೀನಿ ಕೇಳಿದ್ದಾರೆ. ಇದೆಲ್ಲ ಚರ್ಚೆ ಆದ್ಮೇಲೆ ಗೀತಾ ಶಿವರಾಜ್ ಕುಮಾರ್ ಅವರು ನಟಿಸಲು ಒಪ್ಪಿದ್ದಾರೆ. ಹಾಗೆ ಈ ಚಿತ್ರದ ಶೂಟಿಂಗ್ ಆಗಸ್ಟ್ ತಿಂಗಳಿನಿಂದಲೇ ಶುರು ಆಗುತ್ತಿದೆ.
ಎ ಫಾರ್ ಆನಂದ್ ಚಿತ್ರ ಆದ್ಮೇಲೆ ದಳವಾಯಿ ಚಿತ್ರ ಶುರು ಆಗುತ್ತಿದೆ. ಶಿವಣ್ಣ ಕೂಡ ಈ ಚಿತ್ರಕ್ಕಾಗಿ ಒಂದಷ್ಟು ಐಡಿಯಾಗಳನ್ನ ಕೊಟ್ಟಿದ್ದಾರೆ. ಅದನ್ನು ಡೈರೆಕ್ಟರ್ ಶ್ರೀನಿ ಡೆವೆಲಪ್ ಮಾಡುತ್ತಿದ್ದಾರೆ.
ಆ ರೀತಿಯ ಗೆಟ್ಅಪ್ ಅಲ್ಲಿಯೇ ಶಿವಣ್ಣ ಇಲ್ಲಿ ಬರ್ತಾರೆ. ಇದನ್ನ ನೋಡಿದಾಗ ನಮಗೂ ಅನಿಸಿಯೇ ಬಿಡ್ತು. ಈ ಒಂದು ಲುಕ್ ಇಟ್ಟುಕೊಂಡೇ ಒಂದು ಚಿತ್ರ ಮಾಡಬಹದು ಅಂತಲೂ ಅನಿಸಿದೆ ಅಂತಲೇ ಡೈರೆಕ್ಟರ್ ಶ್ರೀನಿ ಹೇಳಿಕೊಂಡಿದ್ದಾರೆ. ಅಂದ್ಹಾಗೆ ಈ ಎಲ್ಲ ವಿಷಯವನ್ನ Daily ಮಾಧ್ಯಮ ಯುಟ್ಯೂಬ್ ಚಾನೆಲ್ ಸಂದರ್ಶನದಲ್ಲಿಯೇ ಡೈರೆಕ್ಟರ್ ಶ್ರೀನಿ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.













