Last Updated:
Meena-Thara: ಖ್ಯಾತ ನಟಿ ಮೀನಾ ಅವರು ಸ್ಯಾಂಡಲ್ವುಡ್ ನಟಿ ತಾರಾ ಅವರ ಮನೆಗೆ ಬಂದಿದ್ದಾರೆ. ದಿಢೀರ್ ಆಗಿ ನಟಿಯರು ಭೇಟಿಯಾಗಿದ್ದಾರೆ.
ಸ್ಯಾಂಡಲ್ವುಡ್ನ (Sandalwood) ಖ್ಯಾತ ನಟಿ ತಾರಾ (Thara) ಅವರ ಮನೆಗೆ ದೃಶ್ಯಂ ಸಿನಿಮಾ ಖ್ಯಾತಿಯ ಬಹುಭಾಷಾ ನಟಿ ಮೀನಾ (Meena) ಅವರು ಭೇಟಿ ಕೊಟ್ಟಿದ್ದಾರೆ. ಅವರ ಭೇಟಿಯ (Meet) ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ (Viral) ಆಗುತ್ತಿದೆ.
ತಾರಮ್ಮನ ಮನೆಗೆ ಸಿಂಪಲ್ ಆಗಿ ಬಂದಿದ್ದ ಮೀನಾ ಅವರು ಏನಕ್ಕಾಗಿ ಭೇಟಿ ಕೊಟ್ಟಿದ್ದರು ಎನ್ನುವುದು ರಿವೀಲ್ ಆಗಿಲ್ಲ. ಇದು ಫ್ರೆಂಡ್ಲಿ ಮೀಟ್ ಎನ್ನಲಾಗುತ್ತಿದೆ. ಮೀನಾ ಅವರು ಬ್ಲೂ ಕಲರ್ ಪಲಾಜೋ ಸೆಟ್ ಧರಿಸಿಕೊಂಡು ಹ್ಯಾಂಡ್ ಬ್ಯಾಗ್ ಹಿಡಿದುಕೊಂಡಿದ್ದರು.
ಮೀನಾ ಅವರು ದಿಢೀರ್ ಆಗಿ ತಾರಾ ಅವರ ಮನೆಗೆ ಬಂದಿದ್ದು ಅವರ ಭೇಟಿಯ ಫೋಟೋಸ್ ಸುಂದರವಾಗಿ ಕಂಡು ಬಂದಿದೆ. ನಟಿ ಮೀನಾ ಅವರಿಗೆ ತಾರಾ ಅವರು ಅರಶಿನ ಕುಂಕುಮ ಕೊಡುತ್ತಿರುವ ವಿಡಿಯೋ ಕೂಡಾ ಹರಿದಾಡಿದೆ.
ಖ್ಯಾತ ಹಿರಿಯ ನಟಿ ತಾರಾ ಅನುರಾಧ ಅವರ ಬೆಂಗಳೂರಿನ ಜೆ.ಪಿ. ನಗರದ ಮನೆಗೆ ಖ್ಯಾತ ಬಹುಭಾಷಾ ನಟಿ ಮೀನಾ ಹಾಗೂ ಸಾಂಘವಿ ಅವರು ಆಕಸ್ಮಿಕವಾಗಿ ಭೇಟಿ ನೀಡಿದ್ದರು. ಈ ಮೂವರೂ ಹಳೆ ನೆನಪುಗಳನ್ನು ಹಂಚಿಕೊಂಡು, ಪರಸ್ಪರ ಖುಷಿಯಾದ ಸಮಯ ಕಳೆದಿದ್ದಾರೆ.
ನಟಿ ಮೀನಾ ಅವರು ಕೊನೆಯ ಬಾರಿಗೆ ದೃಶ್ಯಂ 3ನಲ್ಲಿ ಕಾಣಿಸಿಕೊಂಡಿದ್ದರು. ಮೋಹನ್ಲಾಲ್ ಅಭಿನಯದ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳ ಮೂರು ಭಾಗದಲ್ಲಿಯೂ ನಟಿ ಲಾಲೆಟ್ಟನ್ ಜೊತೆ ನಟಿಸಿದ್ದಾರೆ. ತಾರಾ ಅವರು ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಭಾಗವಹಿಸುತ್ತಾರೆ. ಅವರ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ.
Bangalore,Karnataka
Jul 14, 2026 12:28 PM IST














