Renukaswamy Case: ಸಾಕ್ಷಿ ಬೆದರಿಕೆ ಪ್ರಕರಣಕ್ಕೆ ಶಾಕಿಂಗ್ ಟ್ವಿಸ್ಟ್! ಫ್ಯಾನ್ಸ್ ಹಿಂದೆ ಪ್ರಭಾವಿ ವ್ಯಕ್ತಿಗಳ ಹೆಸರು ’ Renukaswamy case latest update on witness | | ACTPnews

ದರ್ಶನ್-ರೇಣುಕಾಸ್ವಾಮಿ


Last Updated:

Renukaswamy Case: ರೇಣುಕಾಸ್ವಾಮಿ ಕೇಸ್​ಗೆ ಸಂಬಂಧಿಸಿದಂತೆ ಸಾಕ್ಷಿ ಬೆದರಿಕೆ ಪ್ರಕರಣದಲ್ಲಿ ಬಿಗ್ ಶಾಕಿಂಗ್ ಟ್ವಿಸ್ಟ್ ಬಂದಿದೆ. ದರ್ಶನ್ ಫ್ಯಾನ್ಸ್ ಹಿಂದೆ ಇರೋ ಕೈಗಳು ಯಾರದ್ದು?

ದರ್ಶನ್-ರೇಣುಕಾಸ್ವಾಮಿ
ದರ್ಶನ್-ರೇಣುಕಾಸ್ವಾಮಿ

ರೇಣುಕಾಸ್ವಾಮಿ ಕೊಲೆ (Renukaswamy Case) ಕೇಸ್​​ನ ಸಾಕ್ಷಿಗೆ ಬೆದರಿಕೆ ಹಾಕಿರುವ ಪ್ರಕರಣ ವಾರದಿಂದ ದೊಡ್ಡ ಚರ್ಚೆಯಾಗಿದೆ. ಇದು ಕೇಸ್​ಗೆ ಸಂಬಂಧಿಸಿದಂತೆ ಹೊಸ ಹಲ್​ಚಲ್ ಸೃಷ್ಟಿಸಿದ್ದು, ದರ್ಶನ್ (Darshan) ಅಭಿಮಾನಿಗಳು ಸಾಕ್ಷಿಗಳಿಗೆ (Witness) ಬೆದರಿಕೆ ಹಾಕಿದ ನಂತರ ಅರೆಸ್ಟ್ ಕೂಡಾ ಮಾಡಲಾಗಿದೆ.

ಬೆದರಿಕೆ ಹಾಕಿದ ದರ್ಶನ್ ಫ್ಯಾನ್ಸ್ ಹಿಂದೆ ಇನ್ಯಾರೋ ಇದ್ದಾರಾ? ಆ ಪ್ರಭಾವಿ, ಶ್ರೀಮಂತ ವ್ಯಕ್ತಿಗಳ ಕೈವಾಡ ಇದೆಯಾ? ಇತ್ತೀಚೆಗೆ ತನಿಖೆಯಲ್ಲಿ ತಿಳಿದು ಬಂದಿರೋದೇನು?

ಫ್ಯಾನ್ಸ್ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡ?

ಬಾರ್ ಒಂದರ ಮಾಲೀಕ ಹಾಗೂ ಸ್ನೇಹಿತನ ಹೆಸರು ಈಗ ಸಾಕ್ಷಿ ಬೆದರಿಕೆ ಪ್ರಕರಣದಲ್ಲಿ ಕೇಳಿ ಬಂದಿದೆ. ತನಿಖೆ ವೇಳೆ ಇಬ್ಬರು ಪ್ರಭಾವಿ ವ್ಯಕ್ತಿಗಳ ಹೆಸರು ಬಯಲಿಗೆ ಬಂದಿದ್ದು, ದರ್ಶನ್ ಫ್ಯಾನ್ಸ್ ಗಳಾದ ಪುನೀತ್, ವೇಣು, ಸುಹಾಸ್​ನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದರು.

ಗೌರವ್ ಶೆಟ್ಟಿ ಮತ್ತು ಕಿರಣ್ ರೆಡ್ಡಿ ಎಂಬುವರ ಜೊತೆ ಆರೋಪಿ ಪುನೀತ್ ಸಂಪರ್ಕ ಹೊಂದಿರುವುದು ತನಿಖೆ ವೇಳೆ ರಿವೀಲ್ ಆಗಿದೆ. ಸಂಜಯ್ ನಗರದ ಬಾರ್ ಮಾಲಿಕನೊಬ್ಬರ ಸ್ನೇಹಿತನಾಗಿರೊ ಗೌರವ್ ಶೆಟ್ಟಿ ಹೆಸರು ಕೇಳಿ ಬಂದಿದೆ.

ಸಂಜಯ್ ನಗರದ ಬಾರ್ ಮಾಲಿಕ ಕೂಡ ಬೆದರಿಕೆಯಲ್ಲಿ ಭಾಗಿಯಾಗಿರೊ ಶಂಕೆ ವ್ಯಕ್ತವಾಗಿದೆ. ವಾಟ್ಸಾಪ್ ಕರೆ ಮೂಲಕ ಪುನೀತ್ ಜೊತೆ ಸಂಪರ್ಕದಲ್ಲಿದ್ದ ಗೌರವ್ ಹಾಗು ಕಿರಣ್ ರೆಡ್ಡಿ ಅವರ ಹೆಸರು ಈಗ ಈ ಕೇಸ್​ನಲ್ಲಿ ಪ್ರಮುಖವಾಗಿದೆ.

ಪುನೀತ್ ಅರೆಸ್ಟ್ ಆಗುತ್ತಿದ್ದಂತೆ ಗೌರವ್ ಹಾಗು ಕಿರಣ್ ಎಸ್ಕೇಪ್ ಆಗಿದ್ದಾರೆ. ಸದ್ಯ ಪ್ರಕರಣದ ತನಿಖೆ ಮುಂದುವರೆಸಿರೊ ಕಾಮಾಕ್ಷಿಪಾಳ್ಯ ಪೊಲೀಸರು ಇಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸರಿಂದ ತನಿಖೆ ಮುಂದುವರಿದಿದೆ.

ಸಾಕ್ಷಿಗಳ ಹೇಳಿಕೆ ದಾಖಲು ವೇಳೆ ಓರ್ವ ಸಾಕ್ಷಿ ತನಗೆ ಕೆಲವರು ಬೆದರಿಕೆ ಹಾಕಿದ ಬಗ್ಗೆ ತಿಳಿಸಿ ದೂರು ಕೊಟ್ಟಿದ್ರು. ಸಿಸಿಟಿವಿ ಡಿವಿಆರ್ ಸೀಜ್ ಸಂಬಂಧ ಸಾಕ್ಷಿ ಸಂದೀಪ್‌ಗೆ ಸುಳ್ಳು ಹೇಳುವಂತೆ ಕೆಲವರು ಬೆದರಿಸಿದ ಆರೋಪ ಕೇಳಿ ಬಂದಿದೆ.

ವರದಿ: ಮಾದೇಶ ಸಿ.ಎನ್. ನ್ಯೂಸ್​18 ಕನ್ನಡ ಪ್ರತಿನಿಧಿ, ಬೆಂಗಳೂರು



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports