Dam Water Level: ಮಳೆ ಅಬ್ಬರ, ಕೆಆರ್‌ಎಸ್, ತುಂಗಭದ್ರಾ ಸೇರಿ ಪ್ರಮುಖ ಡ್ಯಾಂಗಳ ಭರ್ತಿಗೆ ಕೌಂಟ್‍ಡೌನ್ ಶುರು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಜಲಾಶಯದ ನೀರಿನ ಮಟ್ಟ


Last Updated:

ಕರ್ನಾಟಕದಲ್ಲಿ ಮಳೆಯ ಅಬ್ಬರದಿಂದ ಕೆಆರ್‍ಎಸ್, ಕಬಿನಿ, ತುಂಗಭದ್ರಾ ಸೇರಿದಂತೆ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಏರಿಕೆಯಾಗಿದೆ. ಕೆಆರ್‍ಎಸ್ ಒಂದೇ ವಾರದಲ್ಲಿ 10 ಅಡಿ ಏರಿದೆ.

ಜಲಾಶಯದ ನೀರಿನ ಮಟ್ಟ
ಜಲಾಶಯದ ನೀರಿನ ಮಟ್ಟ

ಬೆಂಗಳೂರು: ಕರ್ನಾಟಕದಲ್ಲಿ ಮಳೆಯ (Rain) ಅಬ್ಬರ ಜೋರಾಗಿದೆ. ಕೊಡಗಿನ (Kodagu) ಬೆಟ್ಟ-ಗುಡ್ಡಗಳಲ್ಲಿ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ರಾಜ್ಯದ ಪ್ರಮುಖ ಜಲಾಶಯಗಳ ( Reservoirs) ಒಡಲು ತುಂಬತೊಡಗಿದೆ. ಒಂದೆಡೆ ಕೃಷಿ ಚಟುವಟಿಕೆಗಳಿಗೆ ಜೀವಕಳೆ ಬಂದಿದ್ದರೆ, ಇನ್ನೊಂದೆಡೆ ಜಲಾಶಯಗಳ ನೀರಿನ ಮಟ್ಟ (Water Level) ಏರಿಕೆಯಾಗುತ್ತಿರುವುದು ರಾಜ್ಯದ ಜನರ ಪಾಲಿಗೆ ಸಿಹಿ ಸುದ್ದಿಯಾಗಿದೆ.

ಕೆಆರ್‍ಎಸ್ ಡ್ಯಾಂ, ಒಂದೇ ವಾರದಲ್ಲಿ 10 ಅಡಿ ಏರಿಕೆ

ಮಂಡ್ಯದ ಜೀವನಾಡಿ ಕೆಆರ್‍ಎಸ್ ಜಲಾಶಯಕ್ಕೆ ಮತ್ತೆ ಜೀವಕಳೆ ಬಂದಿದೆ. ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಡ್ಯಾಂಗೆ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ. ಒಂದೇ ವಾರದಲ್ಲಿ ಬರೋಬ್ಬರಿ 10 ಅಡಿ ನೀರು ಹರಿದು ಬಂದಿದ್ದು, ನೀರಿನ ಮಟ್ಟ 90 ಅಡಿಗಳ ಗಡಿ ದಾಟಿದೆ. ಇದು ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.

ಗರಿಷ್ಠ ಮಟ್ಟ: 124.80 ಅಡಿ

ಪ್ರಸ್ತುತ ಮಟ್ಟ: 90.60 ಅಡಿ

ಒಳಹರಿವು: 15,212 ಕ್ಯೂಸೆಕ್

ಕಬಿನಿ

ಇಲ್ಲಿ ಒಳಹರಿವು 14,574 ಕ್ಯೂಸೆಕ್ ಇದ್ದು, 9153 ಕ್ಯೂಸೆಕ್ ನೀರು ಸಂಗ್ರಹವಾಗಿದೆ.

ತುಂಗಭದ್ರಾ ಜಲಾಶಯ, ಹೆಚ್ಚಿದ ಒಳಹರಿವು

ಕೊಪ್ಪಳದ ತುಂಗಭದ್ರಾ ಜಲಾಶಯಕ್ಕೂ ಜಲಕಳೆ ಬಂದಿದ್ದು, ನೀರಿನ ಒಳಹರಿವು 39,245 ಕ್ಯೂಸೆಕ್‍ಗೆ ಏರಿಕೆಯಾಗಿದೆ. ಜಲಾಶಯದ ಒಟ್ಟು ಸಾಮಥ್ರ್ಯ 105.788 ಟಿಎಂಸಿ ಆಗಿದ್ದು, ಸದ್ಯ 20.573 ಟಿಎಂಸಿ ನೀರು ಸಂಗ್ರಹವಾಗಿದೆ. ಮುಂದಿನ ದಿನಗಳಲ್ಲಿ ಮಳೆ ಹೀಗೆಯೇ ಮುಂದುವರಿದರೆ ಡ್ಯಾಂ ಭರ್ತಿಯಾಗುವ ವಿಶ್ವಾಸದಲ್ಲಿ ಅಧಿಕಾರಿಗಳಿದ್ದಾರೆ.

ಪ್ರಸ್ತುತ ನೀರಿನ ಮಟ್ಟ: 1597.56 ಅಡಿ

ಒಳಹರಿವು: 39,245 ಕ್ಯೂಸೆಕ್

ನವೀಲುತೀರ್ಥ ಡ್ಯಾಂ ಸ್ಥಿತಿ

ನವೀಲುತೀರ್ಥ ಜಲಾಶಯದಲ್ಲೂ ನೀರಿನ ಮಟ್ಟ ನಿಧಾನವಾಗಿ ಏರುತ್ತಿದ್ದು, ಸದ್ಯ 11.594 ಟಿಎಂಸಿ ನೀರು ಸಂಗ್ರಹವಿದೆ. ಒಳಹರಿವು 7,126 ಕ್ಯೂಸೆಕ್ ಇದ್ದು, ರೈತರು ಮಳೆಗಾಲದ ಭರವಸೆಯೊಂದಿಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.
ಹೇಮಾವತಿ & ಹಾರಂಗಿ

ಹಾರಂಗಿ ಡ್ಯಾಂ ಶೇ. 51 ರಷ್ಟು ತುಂಬಿದ್ದರೆ, ಹೇಮಾವತಿಯಲ್ಲಿ 20.10 ಟಿಎಂಸಿ (ಶೇ. 54) ನೀರಿದ್ದು, ಭರ್ಜರಿ 15,647 ಕ್ಯೂಸೆಕ್ ಒಳಹರಿವು ದಾಖಲಾಗಿದೆ.

ಆಲಮಟ್ಟಿ

ಈ ಡ್ಯಾಂಗೆ ಬರೋಬ್ಬರಿ 1.3 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ಸದ್ಯ 44.70 ಟಿಎಂಸಿ (ಶೇ. 36) ನೀರು ಸಂಗ್ರಹವಾಗಿದೆ.

ಮುಂದೇನಾಗಲಿದೆ?

ಮುಂಗಾರು ಮಳೆ ಚುರುಕು ಪಡೆದಿರುವುದರಿಂದ ಜಲಾಶಯಗಳ ನೀರಿನ ಮಟ್ಟದಲ್ಲಿ ಮತ್ತಷ್ಟು ಏರಿಕೆ ಕಾಣುವ ನಿರೀಕ್ಷೆಯಿದೆ. ಕಳೆದ ಕೆಲವು ದಿನಗಳಿಂದ ಬರದ ಕಾರ್ಮೋಡಗಳು ಕರಗುತ್ತಿದ್ದು, ಜಲಾಶಯಗಳು ಭರ್ತಿಯಾಗುವ ದಿನ ಹತ್ತಿರವಾಗುತ್ತಿದೆ. ರಾಜ್ಯದ ರೈತರಿಗೆ ಇದು ನಿಜಕ್ಕೂ ಹಬ್ಬದ ಸುದ್ದಿಯೇ ಸರಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed