Indian Football: ಜಪಾನ್ ನಲ್ಲಿ ಭಾರತದ ಚಾಂಪಿಯನ್ ಫುಟ್ಬಾಲ್ ತಂಡಗಳ ಸೆಣೆಸಾಟ! ಬಿಎಫ್‌ಸಿ ರಿಸರ್ವ್ಸ್ ಮುಖ್ಯ ಕೋಚ್ ರೆನೆಡಿ ಸಿಂಗ್ ಹೇಳಿದ್ದೇನು? | ಕ್ರೀಡಾ ಸುದ್ದಿ | ACTPnews

ಬೆಂಗಳೂರು ಎಫ್​ಸಿ ಅಂಡರ್ 21 ತಂಡ- ರಿಸರ್ವ್ ಕೋಚ್ ರೆನೆಡಿ ಸಿಂಗ್


Last Updated:

ಯುವ ಪ್ರತಿಭೆಗಳ ಬೆಳವಣಿಗಾಗಿ ರಿಲಯನ್ಸ್ ಫೌಂಡೇಷನ್ ನಿರಂತರವಾಗಿ ಮಾಡುತ್ತಿರುವ ಹೂಡಿಕೆಯ ಭಾಗವೇ ಈ ಪ್ರವಾಸವಾಗಿದೆ. ಜುಲೈ 11 ರಿಂದ 23 ರವರೆಗೆ ಜಪಾನ್‌ನ ಫುಕುವೋಕಾದಲ್ಲಿ ಭಾರತದ ಮೂರು ಕ್ಲಬ್‌ಗಳು ಜಪಾನ್‌ನ ಪ್ರಮುಖ ಯುವ ತಂಡಗಳಾದ ಅವಿಸ್ಪಾ ಫುಕುವೋಕಾ ಯು18, ಸಾಗನ್ ತೋಸು ಯು18, ಗಿರಾವಾಂಜ್ ಕಿಟಾಕ್ಯುಶು ಯು18 ಮತ್ತು ಎಫ್‌ಸಿ ಬಲೈನ್ ಶಿಮೋನೊಸೆಕಿ ಯು21 ವಿರುದ್ಧ ಸೆಣಸಾಡಲಿವೆ.

ಬೆಂಗಳೂರು ಎಫ್​ಸಿ ಅಂಡರ್ 21 ತಂಡ- ರಿಸರ್ವ್ ಕೋಚ್ ರೆನೆಡಿ ಸಿಂಗ್
ಬೆಂಗಳೂರು ಎಫ್​ಸಿ ಅಂಡರ್ 21 ತಂಡ- ರಿಸರ್ವ್ ಕೋಚ್ ರೆನೆಡಿ ಸಿಂಗ್

ಮುಂಬೈ: ರಿಲಯನ್ಸ್ ಫೌಂಡೇಷನ್ ತನ್ನ ಮಾತಿನಂತೆಯೇ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಭಾರತೀಯ ರಾಷ್ಟ್ರೀಯ ಫುಟ್ ಬಾಲ್ ತಂಡದ ಪ್ರತಿಭೆಗಳ ಗಣಿಯನ್ನು ಬಲಪಡಿಸುವ ದಿಕ್ಕಿನಲ್ಲಿ ಇದೀಗ ರಿಲಯನ್ಸ್ ಫೌಂಡೇಷನ್ ಆರ್ಎಫ್ ಡಿಎಲ್ (ರಿಲಯನ್ಸ್ ಫೌಂಡೇಶನ್ ಡೆವಲಪ್‌ಮೆಂಟ್ ಲೀಗ್)ನ ಅಗ್ರ ಮೂರು ತಂಡಗಳಿಗೆ ಜಪಾನ್ ಅಂತರರಾಷ್ಟ್ರೀಯ ಪ್ರವಾಸ ಘೋಷಣೆ ಮಾಡಿದೆ. ಅಂದ ಹಾಗೆ ಈ ಆರ್ಎಫ್ ಡಿಎಲ್ ಎಂಬುದು ಭಾರತದ ಪ್ರಮುಖ ಯು-21 (U-21) ಯುವ ಫುಟ್‌ಬಾಲ್ ಸ್ಪರ್ಧೆ. 2025–26ರ ಋತುವಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಬೆಂಗಳೂರು ಎಫ್‌ಸಿ (Bengaluru FC), ಎಫ್‌ಸಿ ಗೋವಾ (FC Goa) ಮತ್ತು ಪಂಜಾಬ್ ಎಫ್‌ಸಿ (Punjab FC) ತಂಡಗಳು ಜಪಾನ್‌ನ ಪ್ರಮುಖ ತಂಡಗಳ ವಿರುದ್ಧ ಸ್ಪರ್ಧಿಸುವ ಅವಕಾಶವನ್ನು ಪಡೆದುಕೊಂಡಿವೆ.

ಯುವ ಪ್ರತಿಭೆಗಳ ಬೆಳವಣಿಗಾಗಿ ರಿಲಯನ್ಸ್ ಫೌಂಡೇಷನ್ ನಿರಂತರವಾಗಿ ಮಾಡುತ್ತಿರುವ ಹೂಡಿಕೆಯ ಭಾಗವೇ ಈ ಪ್ರವಾಸವಾಗಿದೆ. ಜುಲೈ 11 ರಿಂದ 23 ರವರೆಗೆ ಜಪಾನ್‌ನ ಫುಕುವೋಕಾದಲ್ಲಿ ಭಾರತದ ಮೂರು ಕ್ಲಬ್‌ಗಳು ಜಪಾನ್‌ನ ಪ್ರಮುಖ ಯುವ ತಂಡಗಳಾದ ಅವಿಸ್ಪಾ ಫುಕುವೋಕಾ ಯು18, ಸಾಗನ್ ತೋಸು ಯು18, ಗಿರಾವಾಂಜ್ ಕಿಟಾಕ್ಯುಶು ಯು18 ಮತ್ತು ಎಫ್‌ಸಿ ಬಲೈನ್ ಶಿಮೋನೊಸೆಕಿ ಯು21 ವಿರುದ್ಧ ಸೆಣಸಾಡಲಿವೆ.

ಭಾರತದ ಅತ್ಯಂತ ಭರವಸೆಯ ಯುವ ಫುಟ್‌ಬಾಲ್ ಆಟಗಾರರಿಗೆ ತೀವ್ರವಾದ ಸ್ಪರ್ಧೆ, ವಿಭಿನ್ನ ಆಟದ ಶೈಲಿಗಳು ಮತ್ತು ಏಷ್ಯಾದ ಅತ್ಯಂತ ಯಶಸ್ವಿ ಫುಟ್‌ಬಾಲ್ ಡೆವಲಪ್‌ಮೆಂಟ್ ಎಕೋ ಸಿಸ್ಟಮ್ ಪರಿಚಯಿಸುವ ಉದ್ದೇಶದಿಂದ ಈ ಪಂದ್ಯಗಳನ್ನು ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ: Arnav Paparkar: 36 ವರ್ಷಗಳ ಬಳಿಕ ವಿಂಬಲ್ಡನ್ ಕ್ವಾರ್ಟರ್ ಫೈನಲ್​​ಗೆ ಎಂಟ್ರಿ! 18ನೇ ವಯಸ್ಸಿಗೆ ಚರಿತ್ರೆ ಸೃಷ್ಟಿಸಿದ ಈ ಭಾರತೀಯ ಯಾರು ಗೊತ್ತಾ?

ಈ ಪ್ರವಾಸದ ಬಗ್ಗೆ ಭಾರತದ ರಾಷ್ಟ್ರೀಯ ತಂಡದ ಮಾಜಿ ನಾಯಕ ಮತ್ತು ಸದ್ಯ ಬಿಎಫ್‌ಸಿ ರಿಸರ್ವ್ಸ್ ಮುಖ್ಯ ಕೋಚ್ ರೆನೆಡಿ ಸಿಂಗ್ ಜಪಾನ್ ಪ್ರವಾಸದ ಮಹತ್ವದ ಬಗ್ಗೆ ಮಾತನಾಡುತ್ತಾ, “ಈ ರೀತಿಯ ವೇದಿಕೆಯನ್ನು ಸೃಷ್ಟಿಸಿದ್ದಕ್ಕೆ ಆರ್‌ಎಫ್‌ಡಿಎಲ್‌ಗೆ (RFDL) ಧನ್ಯವಾದಗಳು. ನಮ್ಮನ್ನು ನಾವು ಪರೀಕ್ಷೆಗೆ ಒಡ್ಡಿಕೊಳ್ಳಲು ಇದು ಅತ್ಯಂತ ಉತ್ತಮವಾದ ವೇದಿಕೆ ಎಂದು ನಾನು ಭಾವಿಸುತ್ತೇನೆ. ಹೌದು, ನಾವು ಇಲ್ಲಿ 23 ಪಂದ್ಯಗಳನ್ನು ಆಡಿದ್ದೇವೆ ಮತ್ತು ಉತ್ತಮವಾಗಿ ಪ್ರದರ್ಶನ ನೀಡಿದ್ದೇವೆ. ನಾವು ಭಾರತದ ಚಾಂಪಿಯನ್ ಆಗಿದ್ದೇವೆ. ಆದರೆ ನಮಗೆ ಗೊತ್ತು. ಜಪಾನಿಯರು ಸದ್ಯಕ್ಕೆ ಯಾವ ರೀತಿಯ ಫುಟ್‌ಬಾಲ್ ಆಡುತ್ತಿದ್ದಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಅವರು ಪ್ರಪಂಚದಲ್ಲೇ ಅತ್ಯುತ್ತಮ ತಂಡಗಳಲ್ಲಿ ಒಂದಾಗಿದ್ದಾರೆ. ಅವರು ಈಗಾಗಲೇ ಹಲವು ದೊಡ್ಡ ತಂಡಗಳನ್ನು ಸೋಲಿಸಿದ್ದಾರೆ.

“ನಾವು ಅಲ್ಲಿ ಆಡಲಿರುವ ಎದುರಾಳಿ ತಂಡಗಳ ಹಿಂದಿನ ಪಂದ್ಯಗಳನ್ನು ನೋಡಿದ್ದೇವೆ. ಅವರ ಯು-18, ಯು-19 ತಂಡಗಳು ಪಿಎಸ್‌ಜಿ ಯು-18 ಅಥವಾ ಐಎಕ್ಸ್ ಯು-18 ನಂಥ ಬಲಿಷ್ಠ ತಂಡಗಳನ್ನು ಸೋಲಿಸಿವೆ. ಹಾಗಾಗಿ ಇದು ನಮಗೆ ದೊಡ್ಡ ಪರೀಕ್ಷೆಯಾಗಲಿದೆ. ಆದರೂ ಇಲ್ಲಿ ಉತ್ತಮವಾಗಿ ಆಡಿದ ನಂತರ ನಮಗೆ, ನಮ್ಮ ಕೋಚ್‌ಗಳಿಗೆ ಮತ್ತು ಆಟಗಾರರಿಗೆ ಇದು ಒಂದು ಅತ್ಯಂತ ದೊಡ್ಡ ಪರೀಕ್ಷೆಯಾಗಿದೆ. ನಾವು ಇದರಿಂದ ಕಲಿಯಬಹುದು ಮತ್ತು ನಮ್ಮನ್ನು ಉತ್ತಮಪಡಿಸಿಕೊಳ್ಳಬಹುದು. ನಾವು ಉತ್ತಮ ಪೈಪೋಟಿ ನೀಡಬೇಕಾಗಿದೆ ಮತ್ತು ಇದರಿಂದ ನಾವು ಸದ್ಯ ಎಲ್ಲಿದ್ದೇವೆ ಎಂಬುದು ನಮಗೆ ತಿಳಿಯುತ್ತದೆ.

“ಆದ್ದರಿಂದ, ಆರ್‌ಎಫ್‌ಡಿಎಲ್ ಇಂತಹ ವೇದಿಕೆಗಳನ್ನು ಒದಗಿಸುವುದನ್ನು ಮುಂದುವರಿಸಬೇಕು ಎಂದು ನಾನು ಭಾವಿಸುತ್ತೇನೆ, ಇದರಿಂದಾಗಿ ಭಾರತದ ಯುವ ಆಟಗಾರರಿಗೆ ತಮ್ಮ ಕೌಶಲಗಳನ್ನು ಪ್ರದರ್ಶಿಸಲು ಉತ್ತಮ ಅವಕಾಶ ಸಿಗುತ್ತದೆ,” ಎಂದರು.

ಇದನ್ನೂ ಓದಿ: Cristiano Ronaldo Tears: ವಿಶ್ವಕಪ್‌ಗೆ ಫುಟ್ಬಾಲ್ ಲೆಜೆಂಡ್ ಕಣ್ಣೀರಿನ ವಿದಾಯ! ಮಗುವಂತೆ ಬಿಕ್ಕಿ ಬಿಕ್ಕಿ ಅತ್ತ ಕ್ರಿಸ್ಟಿಯಾನೊ ರೊನಾಲ್ಡೊ!

ಕೋಚ್‌ಗಳಿಗೂ ತರಬೇತಿ: ಆಟಗಾರರ ಬೆಳವಣಿಗೆ ಜೊತೆಗೆ ಕೋಚ್‌ಗಳ ಬೆಳವಣಿಗೆಯೂ ಅಷ್ಟೇ ಮುಖ್ಯ ಎಂಬುದನ್ನು ಗುರುತಿಸಿರುವ ಈ ಕಾರ್ಯಕ್ರಮವು, ಪ್ರವಾಸದಲ್ಲಿ ಭಾಗವಹಿಸುವ ಕ್ಲಬ್‌ಗಳ ಆರು ಮಂದಿ ಕೋಚ್‌ಗಳಿಗಾಗಿ ‘ಅವಿಸ್ಪಾ ಫುಕುವೋಕಾ’ದಲ್ಲಿ ಮೂರು ದಿನಗಳ ವಿಶೇಷ ಕೋಚಿಂಗ್ ಮಾಡ್ಯೂಲ್ ಅನ್ನು ಸಹ ಒಳಗೊಂಡಿದೆ. ಇದರಲ್ಲಿ ವೈಯಕ್ತಿಕ ಅಭಿವೃದ್ಧಿ ಯೋಜನೆಗಳು, ಆಟಗಾರರ ಪ್ರಗತಿ ಮತ್ತು ಹೈ-ಪರ್ಫಾರ್ಮೆನ್ಸ್ ಪರಿಸರದ ಕುರಿತು ಸೆಷನ್‌ಗಳು ಇರಲಿವೆ. ಕೇವಲ ಮೂರೇ ವರ್ಷಗಳಲ್ಲಿ ಜೆ2 ಲೀಗ್‌ನಿಂದ ಎಎಫ್‌ಸಿ ಚಾಂಪಿಯನ್ಸ್ ಲೀಗ್ ಎಲೈಟ್ ಫೈನಲ್‌ಗೆ ಲಗ್ಗೆ ಇಟ್ಟಿರುವ ‘ಎಫ್‌ಸಿ ಮಾಚಿಡಾ ಝೆಲ್ವಿಯಾ’ ಕ್ಲಬ್‌ನ ಫುಟ್‌ಬಾಲ್ ಡೈರೆಕ್ಟರ್ ಜೊತೆಗಿನ ಸಂವಾದವೂ ಇದರಲ್ಲಿ ಒಳಗೊಂಡಿದೆ.

ಫುಟ್‌ಬಾಲ್ ಮಾತ್ರವಲ್ಲದೆ, ಆಟಗಾರರು ಮತ್ತು ಕೋಚ್‌ಗಳ ಸಮಗ್ರ ಬೆಳವಣಿಗೆಗೆ ಒತ್ತು ನೀಡುವ ರಿಲಯನ್ಸ್ ಫೌಂಡೇಷನ್‌ನ ತತ್ವದಂತೆ, ಈ ನಿಯೋಗ ನಾಗಾಸಾಕಿ ಪೀಸ್ ಸ್ಟೇಡಿಯಂ, ಅಟಾಮಿಕ್ ಬಾಂಬ್ ಮ್ಯೂಸಿಯಂ ಮತ್ತು ದಜೈಫು ಟೆನ್ಮಂಗು ಶ್ರೈನ್‌ನಂತಹ ಸಾಂಸ್ಕೃತಿಕ ಸ್ಥಳಗಳಿಗೂ ಭೇಟಿ ನೀಡಲಿದೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Indian Football: ಜಪಾನ್ ನಲ್ಲಿ ಭಾರತದ ಚಾಂಪಿಯನ್ ಫುಟ್ಬಾಲ್ ತಂಡಗಳ ಸೆಣೆಸಾಟ! ಬಿಎಫ್‌ಸಿ ರಿಸರ್ವ್ಸ್ ಮುಖ್ಯ ಕೋಚ್ ರೆನೆಡಿ ಸಿಂಗ್ ಹೇಳಿದ್ದೇನು?



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports