Karavali Movie: ಪ್ರಜ್ವಲ್‌ ದೇವರಾಜ್‌ಗೆ ಬಾಕಿ ಹಣ ಕ್ಲಿಯರ್; ವಿವಾದ ಎಂಡ್ ಆಗೋ ಸಾಧ್ಯತೆ ! | | ACTPnews

ಪ್ರಜ್ವಲ್‌ ದೇವರಾಜ್‌ಗೆ ಬಾಕಿ ಹಣ ಕ್ಲೀಯರ್; ವಿವಾದ ಎಂಡ್ ಆಗೋ ಸಾಧ್ಯತೆ!


Last Updated:

ಕರಾವಳಿ ಚಿತ್ರದ ಡಬ್ಬಿಂಗ್ ವಿವಾದ ಮುಗಿಯೋ ಹಾಗೆ ಕಾಣಿಸುತ್ತಿದೆ. ಪ್ರಜ್ವಲ್‌ಗೆ ಕೊಡ್ಬೇಕಿರೋ ದುಡ್ಡನ್ನ ನಿರ್ಮಾಪಕ ನಿರ್ದೇಶಕ ಗುರುದತ್ತ ಗಾಣಿಗ ಕೊಟ್ಟಿದ್ದಾರೆ. ಈ ವಿಷಯವನ್ನ ಲೆಟರ್ ಹೆಡ್ ಮೂಲಕವೇ ಅಧಿಕೃತವಾಗಿಯೇ ಹೇಳಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ

 ಪ್ರಜ್ವಲ್‌ ದೇವರಾಜ್‌ಗೆ ಬಾಕಿ ಹಣ ಕ್ಲೀಯರ್; ವಿವಾದ ಎಂಡ್ ಆಗೋ ಸಾಧ್ಯತೆ!
ಪ್ರಜ್ವಲ್‌ ದೇವರಾಜ್‌ಗೆ ಬಾಕಿ ಹಣ ಕ್ಲೀಯರ್; ವಿವಾದ ಎಂಡ್ ಆಗೋ ಸಾಧ್ಯತೆ!

ಕರಾವಳಿ ಚಿತ್ರದ (Karavali Movie) ನಾಯಕ ನಟ ಪ್ರಜ್ವಲ್ ದೇವರಾಜ್ (Prajwal Devaraj) ಅವರಿಗೆ ಬಾಕಿ ಇರೋ ದುಡ್ಡನ್ನ ನಿರ್ಮಾಪಕರು ಕೊಟ್ಟಿದ್ದಾರೆ. ಈ ಮೂಲಕ ಈ ಒಂದು ಡಬ್ಬಿಂಗ್ ವಿವಾದ ಜುಲೈ-10 ರಂದು ಮುಗಿಯೋ ಸಾಧ್ಯತೆ ಇದೆ. ಪ್ರಜ್ವಲ್ ದೇವರಾಜ್ (Prajwal Devaraj) ಧ್ವನಿಯಲ್ಲಿಯೇ ಈ ಚಿತ್ರ ರಿಲೀಸ್ (Movie Release) ಆಗೋ ಸಾಧ್ಯತೆನೂ ಇದೆ. ಸದ್ಯಕ್ಕೆ ಈ ಒಂದು ಚಿತ್ರದ ಈ ಅಪ್‌ಡೇಟ್ ಇನ್ನಷ್ಟು ವಿವರ ಇಲ್ಲಿದೆ ಓದಿ.

ಪ್ರಜ್ವಲ್‌ ಬಾಕಿ ದುಡ್ಡು ಪೇಡ್

ಕರಾವಳಿ ಚಿತ್ರದ ನಾಯಕ ನಟ ಪ್ರಜ್ವಲ್ ಅವರಿಗೆ ಕೊಡಬೇಕಿದ್ದ ದುಡ್ಡು ಕೊಡಲಾಗಿದೆ. ಚಿತ್ರದ ನಿರ್ಮಾಪಕ ನಿರ್ದೇಶಕ ಗುರುದತ್ತ ಗಾಣಿಗ ಈ ವಿಷಯವನ್ನ ಅಧಿಕೃತವಾಗಿಯೇ ಹೇಳಿಕೊಂಡಿದ್ದಾರೆ.
karavali movie gurudatha ganiga prajwal dubbing controversy latest updates

ಪ್ರಜ್ವಲ್‌ ಬಾಕಿ ದುಡ್ಡು ಪೇಡ್ (ಚಿತ್ರ ಕೃಪೆ: ಗುರುದತ್ತ ಗಾಣಿಗ ಇನ್‌ಸ್ಟಾಗ್ರಾಮ್)

ತಮ್ಮ ಚಿತ್ರ ನಿರ್ಮಾಣ ಸಂಸ್ಥೆಯ ಲೆಟರ್ ಹೆಡ್ ಮೇಲೆ ಈ ವಿಚಾರ ಹೇಳಿಕೊಂಡಿದ್ದಾರೆ. ಇದರೊಟ್ಟಿಗೆ ಇಲ್ಲಿವರೆಗೂ ಇದ್ದ ದುಡ್ಡಿನ ವಿಚಾರ ಗುರುದತ್ತ ಗಾಣಿಗ ಪ್ರಕಾರ ಕ್ಲೀಯರ್ ಆದಂತೆ ಆಗಿದೆ.

ಘಟನೆ ಮರು ದಿನವೇ ಪಾವತಿ

ಜುಲೈ-7 ರಂದು ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಇದರ ರಿಲೀಸ್ ಇವೆಂಟ್ ಅಲ್ಲಿ ಪ್ರಜ್ವಲ್ ಫ್ಯಾನ್ಸ್ ಗಲಾಟೆ ಮಾಡಿರೋದು ಇದೆ. ಚಿತ್ರದ ಟ್ರೈಲರ್ ಅಲ್ಲಿ ಪ್ರಜ್ವಲ್ ದೇವರಾಜ್ ಧ್ವನಿ ಇಲ್ಲ ಅಂತಲೇ ಇವರು ಗಲಾಟೆ ಮಾಡಿದ್ದರು.

ಡೈರೆಕ್ಟರ್ ಗುರುದತ್ತ ಗಾಣಿಗ ಈ ಗಲಾಟೆ ಆದ ಮರು ದಿನವೇ ಬಾಕಿ ಇರೋ ದುಡ್ಡುನ್ನ ಪಾವತಿಸಿದ್ದಾರೆ. ಆದರೂ ನಿರ್ಮಾಣ ಸಂಸ್ಥೆ, ನಿರ್ದೇಶಕರು ಹಾಗೂ ಸಿನಿಮಾ ವಿರುದ್ಧ ಇಲ್ಲ ಸಲ್ಲದ ವಿಚಾರಗಳನ್ನ ಅಪರಿಚಿತ ಖಾತೆಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಹರಡುತ್ತಿದ್ದಾರೆ. ಅಂತವರ ವಿರುದ್ಧ ತನಿಖೆ ನಡೆಸಬೇಕು ಅಂತ ಗುರುದತ್ತ ಗಾಣಿಗ ದೂರು ಕೊಟ್ಟಿದ್ದಾರೆ.

ಆ ದಿನ ಗಲಾಟೆ ಮಾಡಿದವರ…

ಹೌದು, ಟ್ರೈಲರ್ ರಿಲೀಸ್ ಇವೆಂಟ್ ಅಲ್ಲಿ ಗಲಾಟೆ ಮಾಡಿರೋ ಅಪರಿಚಿತರ ವಿರುದ್ಧವೂ ಗುರುದತ್ತ ಗಾಣಿಗ ದೂರು ಕೊಟ್ಟಿದ್ದಾರೆ.

karavali movie gurudatha ganiga prajwal dubbing controversy latest updates

ಡಬ್ಬಿಂಗ್ ಮಾಡ್ತಾರಾ

(ಚಿತ್ರ ಕೃಪೆ: ಗುರುದತ್ತ ಗಾಣಿಗ ಇನ್‌ಸ್ಟಾಗ್ರಾಮ್)

ಹಾಗೆ ಪ್ರಜ್ವಲ್ ದೇವರಾಜ್ ಅವರಿಗೆ ಕೊಡಬೇಕಿರೋ ಬಾಕಿ ದುಡ್ಡನ್ನು ಕೊಟ್ಟಿದ್ದಾರೆ. 1 ಕೋಟಿ 25 ಲಕ್ಷ ಸಂಭಾವನೆಯಲ್ಲಿ ಒಂದು ಕೋಟಿ ಕೊಟ್ಟಿದ್ದಾರೆ. ಆದರೆ, ಬಾಕಿ 25 ಕೊಡಬೇಕು ಅಂತಲೇ ಇತ್ತು. ಅದನ್ನ ಕೊಟ್ಟಿದ್ದೇವೆ ಅಂತಲೂ ಸ್ವತಃ ಗುರುದತ್ತ ಗಾಣಿಗ ಟ್ರೈಲರ್ ರಿಲೀಸ್ ಇವೆಂಟ್ ಅಲ್ಲಯೇ ಹೇಳಿಕೊಂಡಿದ್ದಾರೆ.

ಡಬ್ಬಿಂಗ್ ಮಾಡ್ತಾರಾ

ಈ ಒಂದು ದುಡ್ಡು ಪಾವತಿಸಿದ ಬಳಿಕ ಡಬ್ಬಿಂಗ್ ಮ್ಯಾಟರ್ ಮುಗಿಯೋ ಸಾಧ್ಯತೆನೂ ಇದೆ. ಪ್ರಜ್ವಲ್ ಮತ್ತು ಕರಾವಳಿ ಚಿತ್ರದ ನಡುವೆ ಇರೋ ಸಮಸ್ಯೆಗೆ ಕೊನೆ ಬೀಳುವ ಸಾಧ್ಯತೆನೂ ಇದೆ.

ಪ್ರಜ್ವಲ್ ಹೇಗೆ ಗೊತ್ತೇ

ಪ್ರಜ್ವಲ್ ದೇವರಾಜ್ ಜೊತೆಗೆ ಎರಡು ಚಿತ್ರ ಮಾಡಿದ್ದೇನೆ. ಒಂದು ಚಿತ್ರಕ್ಕೆ ಸಂಬಂಧಿಸಿದಂತೆ ಅಷ್ಟೆ ಪ್ರೀತಿಯಿಂದಲೇ ಕೆಲಸ ಮಾಡುತ್ತಾರೆ. ಒಪ್ಪಿಕೊಂಡ ಎಲ್ಲ ಕೆಲಸವನ್ನು ಪ್ರಜ್ವಲ್ ಮಾಡುತ್ತಾರೆ.

ಆದರೆ, ಅವರ ಬಗ್ಗೆ ಏನೇನೋ ಹೇಳಲಾಗುತ್ತಿದೆ. ಅದನ್ನ ಯಾರೂ ನಂಬಲೇ ಬೇಡಿ. ಅವರ ಮೇಲೆ ನಂಬಿಕೆ ಇಡಿ ಅಂತಲೇ ಮೇಘನಾ ರಾಜ್ ಕೇಳಿಕೊಂಡಿದ್ದಾರೆ ಅಂತಲೇ ಹೇಳಬಹುದು.

ಪ್ರಜ್ವಲ್ ದೇವರಾಜ್ ಸ್ನೇಹಿತ ಪನ್ನಗಾ ಭರಣ ಕೂಡ ಗೆಳೆಯನ ಬಗ್ಗೆ ಮಾತನಾಡಿದ್ದಾರೆ. ಪ್ರಜ್ವಲ್‌ ದೇವರಾಜ್‌ಗೆ ಅನ್ಯಾಯ ಆಗುತ್ತಿದೆ ಅಂತಲೂ ಹೇಳಿದ್ದಾರೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed