Rocky Flintoff: ದ್ರಾವಿಡ್ ಮಗನ ಬೆನ್ನಲ್ಲೇ ಅಂಡರ್ 19 ಕ್ರಿಕೆಟ್​​ಗೆ ಎಂಟ್ರಿಕೊಟ್ಟ ಮತ್ತೊಬ್ಬ ಲೆಜೆಂಡರಿ ಕ್ರಿಕೆಟರ್ ಪುತ್ರ | ಕ್ರೀಡಾ ಸುದ್ದಿ | ACTPnews

ರಾಕಿ ಫ್ಲಿಂಟಾಫ್


Last Updated:

ಇಂಗ್ಲೆಂಡ್‌ನ ಲೆಜೆಂಡರಿ ಆಲ್‌ರೌಂಡರ್ ಆಂಡ್ರ್ಯೂ ಫ್ಲಿಂಟಾಫ್ ಅವರ ಪುತ್ರ ರಾಕಿ ಫ್ಲಿಂಟಾಫ್ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಇಂಗ್ಲೆಂಡ್ ಕ್ರಿಕೆಟ್‌ನಲ್ಲಿ ಸುದ್ದಿಯಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಯೂತ್ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್‌ನ ಅಂಡರ್-19 ತಂಡದಲ್ಲಿ ರಾಕಿ ಆಯ್ಕೆಯಾಗಿದ್ದಾರೆ.

ರಾಕಿ ಫ್ಲಿಂಟಾಫ್
ರಾಕಿ ಫ್ಲಿಂಟಾಫ್

ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ (Arjun Tendulkar) ಅವರಿಗೆ ಈ ವರ್ಷದ ಐಪಿಎಲ್‌ನಲ್ಲಿ ಆಡಲು ಹೆಚ್ಚಿನ ಅವಕಾಶ ಸಿಗಲಿಲ್ಲ, ಆದರೆ ಲಖನೌದಿಂದ ಸಿಕ್ಕ ಅವಕಾಶವನ್ನು ಅವರು ಸದುಪಯೋಗಪಡಿಸಿಕೊಂಡು ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದರು. ಸಚಿನ್ ಅವರ ಮಗನ ನಂತರ, ಈಗ ರಾಹುಲ್ ದ್ರಾವಿಡ್ ಅವರ ಮಗ ಕೂಡ 19 ವರ್ಷದೊಳಗಿನವರ ಕ್ರಿಕೆಟ್ ಆಡುತ್ತಿದ್ದಾರೆ. ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್ (Anvay Dravid) ಶ್ರೀಲಂಕಾ ಅಂಡರ್ -19 ತಂಡದ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಸಿಲಬಸ್ ಅರ್ಧಶತಕ ಗಳಿಸಿದರು. ಸಚಿನ್ ಮತ್ತು ರಾಹುಲ್ ದ್ರಾವಿಡ್ ನಂತರ, ಈಗ ಮತ್ತೊಬ್ಬ ಲೆಜೆಂಡ್ ಆಟಗಾರನ ಮಗ 19 ವರ್ಷದೊಳಗಿನವರ ಕ್ರಿಕೆಟ್ ಆಡುತ್ತಿದ್ದಾರೆ.

ಇಂಗ್ಲೆಂಡ್‌ನ ಲೆಜೆಂಡರಿ ಆಲ್‌ರೌಂಡರ್ ಆಂಡ್ರ್ಯೂ ಫ್ಲಿಂಟಾಫ್ ಅವರ ಪುತ್ರ ರಾಕಿ ಫ್ಲಿಂಟಾಫ್ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಇಂಗ್ಲೆಂಡ್ ಕ್ರಿಕೆಟ್‌ನಲ್ಲಿ ಸುದ್ದಿಯಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಯೂತ್ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್‌ನ ಅಂಡರ್-19 ತಂಡದಲ್ಲಿ ರಾಕಿ ಆಯ್ಕೆಯಾಗಿದ್ದಾರೆ.

ಬಲಗೈ ಬ್ಯಾಟ್ಸ್‌ಮನ್ ಆಗಿರುವ ರಾಕಿ, ಇದುವರೆಗೆ 5 ಪ್ರಥಮ ದರ್ಜೆ ಮತ್ತು 8 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ. ಇದಲ್ಲದೆ, ಅವರು ಇಂಗ್ಲೆಂಡ್ ಲಯನ್ಸ್ ಮತ್ತು ಲಂಕಾಷೈರ್‌ನ ಎರಡನೇ ಇಲೆವೆನ್ ತಂಡದ ಭಾಗವಾಗಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ODI ಸರಣಿಯಲ್ಲಿ ರಾಕಿ ಅವರ ಪ್ರದರ್ಶನ ಅತ್ಯುತ್ತಮವಾಗಿತ್ತು. ಅವರು ಮೂರು ಪಂದ್ಯಗಳಲ್ಲಿ 29, ಔಟಾಗದೆ 79 ಮತ್ತು 55 ರನ್ ಗಳಿಸಿದ್ದರು. ಇಂಗ್ಲೆಂಡ್ ಲಯನ್ಸ್ ಪರ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಕೂಡ ಎಂಬ ದಾಖಲೆಯೂ ರಾಕಿ ಹೆಸರಲ್ಲಿದೆ.

ಏಕದಿನ ಸರಣಿಯಲ್ಲಿ ಮಿಂಚಿದ್ದ ರಾಕಿ

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಲ್ಲಿ ರಾಕಿ ಫ್ಲಿಂಟಾಫ್ ಎರಡನೇ ಸ್ಥಾನ ಪಡೆದಿದ್ದಾರೆ. ಅವರು 81.5 ಸರಾಸರಿಯಲ್ಲಿ ಒಟ್ಟು 163 ರನ್ ಗಳಿಸಿದ್ದಾರೆ. ಇದರಲ್ಲಿ 2 ಅರ್ಧಶತಕಗಳು ಸೇರಿವೆ. ಮುಂದಿನ ಸರಣಿಯಲ್ಲಿ ರಾಕಿ ಮೈದಾನಕ್ಕೆ ಇಳಿದರೆ, ಅವರು ಯೂತ್ ಟೆಸ್ಟ್ ಸರಣಿಯ ಭಾಗವಾಗುವುದು ಸತತ ಮೂರನೇ ಸೀಸನ್ ಆಗಿರುತ್ತದೆ. ಅವರು ಈ ಹಿಂದೆ 2025 ರಲ್ಲಿ ಭಾರತದ ವಿರುದ್ಧ 93 ರನ್ ಗಳಿಸಿದ್ದರು ಮತ್ತು ಅದಕ್ಕೂ ಹಿಂದಿನ ಸೀಸನ್‌ನಲ್ಲಿ ಶ್ರೀಲಂಕಾ ವಿರುದ್ಧ ರಾಕಿ 106 ರನ್ ಗಳಿಸಿದ್ದರು.

ರೋಲ್ಫ್ ಆಲ್ಬರ್ಟ್ ಗೆ ನಾಯಕತ್ವ

ದಕ್ಷಿಣ ಆಫ್ರಿಕಾ ವಿರುದ್ಧದ ಯೂತ್ ಟೆಸ್ಟ್ ಸರಣಿಗೆ ಇಂಗ್ಲೆಂಡ್ 15 ಜನರ ತಂಡವನ್ನು ಪ್ರಕಟಿಸಿದ್ದು, ಸರ್ರೆ ತಂಡದ ರೋಲ್ಫ್ ಆಲ್ಬರ್ಟ್ ನಾಯಕತ್ವ ವಹಿಸಿದ್ದಾರೆ. ಆಲ್ಬರ್ಟ್ ನಾಯಕತ್ವದಲ್ಲಿ ಇಂಗ್ಲೆಂಡ್ ODI ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು. ಸೋಮವಾರ ನಡೆದ ಅಂತಿಮ ODI ಪಂದ್ಯದಲ್ಲಿ ಇಂಗ್ಲೆಂಡ್ ದಕ್ಷಿಣ ಆಫ್ರಿಕಾವನ್ನು 76 ರನ್‌ಗಳಿಂದ ಸೋಲಿಸಿ ಸರಣಿ ವಶಪಡಿಸಿಕೊಂಡಿತ್ತು.

ಇಂಗ್ಲೆಂಡ್ ಅಂಡರ್ 19 ತಂಡ

ರೋಲ್ಫ್ ಆಲ್ಬರ್ಟ್ (ನಾಯಕ), ವಿಲ್ ಬೆನ್ಸಿನ್, ಜೆಕಬ್ ಬ್ಲೇಡ್ಸ್, ರಾಬಿ ಬೌಮನ್, ಬೆನ್ ಡಾಕಿನ್ಸ್, ಕ್ಯಾಲೆಬ್ ಫಾಕ್ನರ್, ಅಲಿ ಫಾರೂಕ್, ರಾಕಿ ಫ್ಲಿಂಟಾಫ್, ಅಲೆಕ್ಸ್ ಫ್ರೆಂಚ್, ಚಾರ್ಲಿ ಹಾರ್ಮಿಸನ್, ಮ್ಯಾನಿ ಲಮ್ಸ್‌ಡೆನ್, ಜೇಮ್ಸ್ ಮಿಂಟೊ, ಜ್ಯಾಕ್ ನೆಲ್ಸನ್, ಬ್ರಾಡ್ಲಿ ಸಿಲ್ವೆಸ್ಟರ್, ಚಾರ್ಲಿ ಟೇಲರ್



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed