Darshan: ಕೆಲವೇ ದಿನಗಳಲ್ಲಿ ಅಭಿಮಾನಿಗಳ ಮುಂದೆ ಬರಲಿದ್ದಾರೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌! | | ACTPnews

ದರ್ಶನ್


Last Updated:

ನಟ ದರ್ಶನ್ ಅಭಿನಯದ ಸೂಪರ್ ಹಿಟ್ ಸಿನಿಮಾ ರೀ ರಿಲೀಸ್‌ ಆಗುತ್ತಿದೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ. ಹೀಗಾಗಿ ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಿನಿಮಾವನ್ನು ಮತ್ತೆ ತೆರೆಮೇಲೆ ಕಾಣಲು ಬಹಳಷ್ಟು ಉತ್ಸುಕರಾಗಿದ್ದಾರೆ.

ದರ್ಶನ್
ದರ್ಶನ್

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿ ಆಗಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಜೈಲು ಸೇರಿ ಬರೋಬ್ಬರಿ ಒಂದು ವರ್ಷ ಕಳೆದಿದೆ. ಸದ್ಯಕ್ಕೆ ಬೇಲ್ ಸಿಗುವುದು ಕಷ್ಟ ಎನ್ನಲಾಗ್ತಿದೆ. ಇಂತಹ ಸಮಯದಲ್ಲೇ ನಟ ದರ್ಶನ್ ಅಭಿನಯದ ಸೂಪರ್ ಹಿಟ್ ಸಿನಿಮಾ ರೀ ರಿಲೀಸ್‌ ಆಗುತ್ತಿದೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ. ಹೀಗಾಗಿ ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಿನಿಮಾವನ್ನು ಮತ್ತೆ ತೆರೆಮೇಲೆ ಕಾಣಲು ಬಹಳಷ್ಟು ಉತ್ಸುಕರಾಗಿದ್ದಾರೆ.

ಹೌದು ನಟ ದರ್ಶನ್ ಜೈಲಿನಲ್ಲಿದ್ರೂ ಕೂಡಾ ಹೊರಗಿರುವ ಅಭಿಮಾನಿಗಳಿಗೆ ತಮ್ಮ ಡಿ ಬಾಸ್ ನ ಬಗೆಗಿನ ಕ್ರೇಜ್ ಮಾತ್ರ ಸ್ವಲ್ಪವು ಕಡಿಮೆಯಾಗಿಲ್ಲ. ನಮ್ಮ ಬಾಸ್ ಎಲ್ಲಿದ್ರು ಬಾಸೇ. ಅದಷ್ಟು ಬೇಗ ಜೈಲಿನಿಂದ ಬಂದು ಮತ್ತೆ ಬಾಕ್ಸ್ ಅಫಿಸ್ ಸುಲ್ತಾನ್ ಆಗ್ತಾರೆ ಅಂತಾ ನಿರೀಕ್ಷೆಯಲ್ಲಿದ್ದಾರೆ. ಹೀಗಿರುವಾಗ ಇದೀಗ ದರ್ಶನ್ ಅಭಿಮಾನಿಗಳಿಗೆ ಖುಷಿ ವಿಚಾರವೊಂದು ಹೊರಬಿದ್ದಿದೆ. ನಟ ದರ್ಶನ್ ಗೆ ಅಪಾರ ಹೆಸರು ತಂದು ಕೊಟ್ಟ ಕಲಾಸಿಪಾಳ್ಯ ಸಿನಿಮಾ ಮತ್ತೆ ತೆರೆ ಮೇಲೆ ಬರಲಿದೆ.

ಇದೇ ರೀತಿಯ ಪರಿಸ್ಥಿತಿಯಲ್ಲಿ 2011ರಲ್ಲಿ ತೆರೆಕಂಡ ಸಾರಥಿ ಚಿತ್ರ, ದರ್ಶನ್ ಜೈಲಿನಲ್ಲಿದ್ದಾಗಲೇ ರಿಲೀಸ್ ಆಗಿ ಬಹಳಷ್ಟು ಯಶಸ್ಸನ್ನು ಕಂಡಿತ್ತು.ಇದೀಗ ಮತ್ತೆ ಅದೇ ರೀತಿಯ ಘಟನೆ ಮರುಕಳಿಸುತ್ತಾ ಎಂಬುದನ್ನು ನೋಡಬೇಕಿದೆ. ಯಾಕಂದ್ರೆ 2004ರಲ್ಲಿ ಬಿಡುಗಡೆಯಾದ ಕಲಾಸಿಪಾಳ್ಯ ಸಿನಿಮಾ ದರ್ಶನ್ ಅವರ ನಟನಾ ವೃತ್ತಿಯಲ್ಲಿ ಮಹತ್ವದ ಮೈಲುಗಲ್ಲಾಗಿತ್ತು. ಹೀಗಾಗಿ ಈ ಚಿತ್ರವನ್ನು ಮತ್ತೆ ಮರು ಬಿಡುಗಡೆ ಮಾಡಲು ಸಿದ್ಧತೆಗಳು ಜೋರಾಗಿಯೇ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Priyanka Upendra Movie: ಸೆಪ್ಟೆಂಬರ್-21 ರಿಲೀಸ್, ಡಿಫರೆಂಟ್ ರೋಲ್​​ನಲ್ಲಿ ಪ್ರಿಯಾಂಕಾ ಉಪೇಂದ್ರ

ಕನ್ನಡ ಚಿತ್ರರಂಗದಲ್ಲಿ ಆಕ್ಷನ್ ಕ್ರೈಂ ಜಾನರ್‌ಗೆ ಹೊಸ ಹೆಸರು ತಂದು ಕೊಟ್ಟ ಸಿನಿಮಾ ಕಲಾಸಿಪಾಳ್ಯ. ಈ ಚಿತ್ರವನ್ನು ಖ್ಯಾತ ನಿರ್ದೇಶಕ ಓಂ ಪ್ರಕಾಶ್ ರಾವ್ ನಿರ್ದೇಶಿಸಿದ್ದಾರೆ . ಹಾಗೆಯೇ ಈ ಚಿತ್ರವನ್ನು ನಿರ್ಮಿಸಿದವರು ಪ್ರಸಿದ್ಧ ನಿರ್ಮಾಣ ಸಂಸ್ಥೆಯಾಗಿರುವ ರಾಮು ಫಿಲಂಸ್ . ನಾಯಕ ಪಾತ್ರದಲ್ಲಿ ದರ್ಶನ್ ಜೊತೆ ಜನಪ್ರಿಯ ನಟಿ ರಕ್ಷಿತಾ ನಾಯಕಿ ನಟಿಯಾಗಿ ಅಭಿನಯಿಸಿದ್ದರು. ಜೊತೆಗೆ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದವರು ವೆಂಕಟ್ ನಾರಾಯಣ್ ಮತ್ತು ಹಿನ್ನಲೆ ಸಂಗೀತದ ಜೊತೆಗೆ ಕೆಲವು ಹಾಡುಗಳಿಗೆ ಸಾಧು ಕೋಕಿಲ ಕೊಡುಗೆ ನೀಡಿದ್ದಾರೆ.

2004ರಲ್ಲಿ ತೆರೆಗೆ ಬಂದ ಕಲಾಸಿಪಾಳ್ಯ ಸಿನಿಮಾ ಎಲ್ಲಾ ಸೆಂಟರ್‌ಗಳಲ್ಲಿ 35 ವಾರಗಳ ಕಾಲ ಯಶಸ್ವಿಯಾಗಿ ಓಡಿದ್ದು, ಆ ಕಾಲಕ್ಕೆ ಸುಮಾರು 18 ರಿಂದ 22 ಕೋಟಿಯವರೆಗೆ ಕಲೆಕ್ಷನ್ ಮಾಡಿತ್ತು. ಆ ಸಮಯದ ಕನ್ನಡ ಚಿತ್ರರಂಗದಲ್ಲಿ ಇದು ಭಾರೀ ಸಾಧನೆ ಎಂದು ಪರಿಗಣಿಸಲಾಗಿತ್ತು. ದರ್ಶನ್ ಅವರ ಆಕ್ಷನ್ ಇಮೇಜ್‌ಗೆ ಬಲ ತುಂಬಿದ ಚಿತ್ರ ಇದಾಗಿತ್ತು.

ಇನ್ನು ದರ್ಶನ್ ಅಭಿಮಾನಿಗಳ ಬಳಗದಲ್ಲಿ ಈಗಾಗಲೇ ಸಾಮಾಜಿಕ ಜಾಲತಾಣಗಳ ಮೂಲಕ ಮರು ಬಿಡುಗಡೆಯ ಬೇಡಿಕೆ ಜೋರಾಗಿದೆ. ದರ್ಶನ್ ಜೈಲಿನಲ್ಲಿದ್ದರೂ ಅವರ ಸ್ಟಾರ್ ಇಮೇಜ್‌ನ ಮೇಲೆ ಯಾವುದೇ ನೆಗೆಟಿವ್ ಪರಿಣಾಮ ಕಂಡುಬಂದಿಲ್ಲ. ಬದಲಿಗೆ ಅಭಿಮಾನಿಗಳ ಒಗ್ಗಟ್ಟು ಇನ್ನಷ್ಟು ಹೆಚ್ಚಾಗಿದೆ ಅಂತಲೇ ಹೇಳಬಹುದು



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports