Last Updated:
ಕೇಂದ್ರ ಸರ್ಕಾರ EPFO 3.0 ಮೂಲಕ UPI, ATM ಮೂಲಕ 3 ದಿನದಲ್ಲಿ PF ಹಣ ಹಿಂಪಡೆಯುವ ಸೌಲಭ್ಯ, WhatsApp ಕನ್ನಡ AI ಸೇವೆ, ಸ್ಕ್ಯಾಮ್ ಎಚ್ಚರಿಕೆ, KYC ಕಡ್ಡಾಯ ಎಂದು ಘೋಷಿಸಿದೆ
ಬೆಂಗಳೂರು: ದೇಶದ 7 ಕೋಟಿಗೂ ಅಧಿಕ ಉದ್ಯೋಗಿಗಳಿಗೆ (Employees) ಕೇಂದ್ರ ಸರ್ಕಾರವು ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಇನ್ನು ಮುಂದೆ ಭವಿಷ್ಯ ನಿಧಿ (PF) ಹಣಕ್ಕಾಗಿ EPFO ಕಚೇರಿಗಳ (EPFO Office) ಮುಂದೆ ಸಾಲುಗಟ್ಟಿ ನಿಲ್ಲುವ, ಕಾಗದ ಪತ್ರ ಹಿಡಿದು ಅಲೆದಾಡುವ ಅಥವಾ ತಿಂಗಳುಗಟ್ಟಲೆ ಕಾಯುವ ಗೋಳು ತಪ್ಪಲಿದೆ. ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರು ಮಾಧ್ಯಮಗಳಿಗೆ ನೀಡಿರುವ ಮಾಹಿತಿ ಪ್ರಕಾರ, UPI ಪಾವತಿ ಗೇಟ್ವೇ ಮೂಲಕ EPF ಹಣ ಹಿಂಪಡೆಯುವ ಸೌಲಭ್ಯದ ಪರೀಕ್ಷೆ ಪೂರ್ಣಗೊಂಡಿದ್ದು, ಕೇವಲ ಒಂದು UPI PIN ಬಳಸುವ ಮೂಲಕ ಸೆಕೆಂಡುಗಳಲ್ಲಿ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸುವ ಈ EPFO 3.0 ಮಹಾ ಕ್ರಾಂತಿಯ (Revolution) ವ್ಯವಸ್ಥೆಯು ಮೇ 2026ರ ಅಂತ್ಯ ಅಥವಾ ಜೂನ್ ಆರಂಭದಲ್ಲಿ ಬಳಕೆಗೆ ಬರಲಿದೆ.
ಇದರ ಅಡಿಯಲ್ಲಿ ಸಾರ್ವಜನಿಕರು ಶಾಪಿಂಗ್ಗೆ ಬಳಸುವ PhonePe, GPay, BHIM ನಂತಹ UPI ಆಪ್ಗಳನ್ನು ಓಪನ್ ಮಾಡಿ, ಲಭ್ಯವಿರುವ PF ಬ್ಯಾಲೆನ್ಸ್ ಪರಿಶೀಲಿಸಿ, ತಮಗೆ ಬೇಕಾದ ಮೊತ್ತವನ್ನು ಎಂಟರ್ ಮಾಡಿ, UPI PIN ಹಾಕುವ ಮೂಲಕ ಕೇವಲ 3 ದಿನಗಳಲ್ಲಿ ನೇರವಾಗಿ ಬ್ಯಾಂಕ್ ಖಾತೆಗೆ ಹಣವನ್ನು ಪಡೆಯಬಹುದು. ಇದರೊಂದಿಗೆ ವಿಶೇಷ EPF ATM ಕಾರ್ಡ್ ಸೌಲಭ್ಯವೂ ಬರಲಿದ್ದು, ಯಾವುದೇ ATM ಗೆ ಹೋಗಿ ಕಾರ್ಡ್ ತೂರಿಸಿ, PIN ಹಾಕಿ ಹಣವನ್ನು ಕ್ಯಾಶ್ ರೂಪದಲ್ಲಿ ಪಡೆಯಬಹುದಾಗಿದೆ.
ಈ ಹೊಸ ನಿಯಮಗಳ ಪ್ರಕಾರ, ATM ಅಥವಾ UPI ಮೂಲಕ ಸಾಮಾನ್ಯ ಸಂದರ್ಭದಲ್ಲಿ PF ಬ್ಯಾಲೆನ್ಸ್ನ 50% ವರೆಗೆ ಹಾಗೂ ತುರ್ತು ಪರಿಸ್ಥಿತಿಯಲ್ಲಿ 75% ವರೆಗೆ ಹಣವನ್ನು ಹಿಂಪಡೆಯಬಹುದು. ಅಲ್ಲದೆ, ಆಟೋ ಸೆಟಲ್ಮೆಂಟ್ ಮಿತಿಯನ್ನು ₹1 ಲಕ್ಷದಿಂದ ₹5 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, 95% ಕ್ಲೈಮ್ಗಳು ಸ್ವಯಂಚಾಲಿತವಾಗಿ (ಆಟೋಮ್ಯಾಟಿಕ್ ಕ್ಲೈಮ್) ಕೇವಲ 3 ದಿನಗಳಲ್ಲಿ ಬ್ಯಾಂಕ್ ಖಾತೆಗೆ ಜಮಾ ಆಗಲಿವೆ.
ಆದರೆ ಈ ಸೌಲಭ್ಯಗಳ ಜೊತೆಗೆ ಸಾರ್ವಜನಿಕರು ಸ್ಕ್ಯಾಮರ್ಗಳಿಂದ ಸುರಕ್ಷಿತವಾಗಿರಲು ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ವಹಿಸಬೇಕು; EPFO ಎಂದಿಗೂ WhatsApp ಅಥವಾ ಫೋನ್ನಲ್ಲಿ OTP ಕೇಳುವುದಿಲ್ಲ ಹಾಗೂ ನಿಮ್ಮ ಪಾಸ್ವರ್ಡ್, UAN ನಂಬರ್ಗಳನ್ನು ಯಾರಿಗೂ ಶೇರ್ ಮಾಡಬಾರದು. ಹಸಿರು ಟಿಕ್ ಇಲ್ಲದ ನಕಲಿ ನಂಬರ್ಗಳಿಗೆ ಮೆಸೇಜ್ ಮಾಡಬಾರದು ಮತ್ತು ಯಾವುದೇ ಫೇಕ್ ಲಿಂಕ್ಗಳನ್ನು ಕ್ಲಿಕ್ ಮಾಡಬಾರದು.
ಈಗಾಗಲೇ ಬಳಕೆಯಲ್ಲಿರುವ ಸೇವೆಗಳ ವರದಿ
ಮೇ 2026ರ ಅಂತ್ಯ ಅಥವಾ ಜೂನ್ 2026ರ ಆರಂಭದಲ್ಲಿ ಲೈವ್ ಆಗಲಿರುವ ಈ ಮಹಾ ಯೋಜನೆಯ ಲಾಭವನ್ನು ಪಡೆಯಲು ಸಾರ್ವಜನಿಕರು ಈಗಲೇ ತಮ್ಮ UAN ಸಕ್ರಿಯಗೊಳಿಸಿ, ಆಧಾರ್ ಕಾರ್ಡ್, PAN ಕಾರ್ಡ್, ಬ್ಯಾಂಕ್ ಖಾತೆ ಮತ್ತು IFSC ಕೋಡ್ಗಳನ್ನು ಲಿಂಕ್ ಮಾಡುವುದರ ಜೊತೆಗೆ ಮುಖ ದೃಢೀಕರಣವನ್ನು (FAT) ಪೂರ್ಣಗೊಳಿಸಿ KYC ಅಪ್ಡೇಟ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ, ಇಲ್ಲದಿದ್ದರೆ ಈ ಸೌಲಭ್ಯದಿಂದ ವಂಚಿತರಾಗಬೇಕಾಗುತ್ತದೆ. ಪ್ರಸ್ತುತ ಚಾಲ್ತಿಯಲ್ಲಿರುವ ಸೇವೆಗಳಾದ 9966044425 ಗೆ ಮಿಸ್ಡ್ ಕಾಲ್ ನೀಡುವುದು, 7738299899 ಸಂಖ್ಯೆಗೆ ‘EPFOHO UAN’ ಎಂದು SMS ಕಳುಹಿಸುವುದು, UMANG ಆಪ್ ಬಳಸುವುದು ಅಥವಾ EPFO ಅಧಿಕೃತ ವೆಬ್ಸೈಟ್ ಭೇಟಿ ನೀಡುವುದನ್ನು ಮುಂದುವರಿಸಬಹುದು. ಕಾರ್ಮಿಕ ಸಚಿವ ಮಾಂಡವಿಯಾ ಅವರ ಪ್ರಕಾರ, FY25 ರಲ್ಲಿ 6.01 ಕೋಟಿ ಇದ್ದ ಕ್ಲೈಮ್ಗಳ ಇತ್ಯರ್ಥವು FY26 ರಲ್ಲಿ ಭಾರಿ ಏರಿಕೆ ಕಂಡು 8.31 ಕೋಟಿಗೆ ತಲುಪಿದ್ದು, ಈ ಕ್ರಾಂತಿಕಾರಿ ವ್ಯವಸ್ಥೆಯು ದೇಶದ ಕೋಟ್ಯಂತರ ಜನರ ಜೀವನವನ್ನು ಮತ್ತಷ್ಟು ಸುಲಭಗೊಳಿಸಲಿದೆ.
Bangalore [Bangalore],Bangalore,Karnataka













