Last Updated:
ಬೆಂಗಳೂರು ವಿಮಾನ ನಿಲ್ದಾಣ ಮಾರ್ಗದಲ್ಲಿ NHAI ನಿಂದ ಸಿಗ್ನಲ್ ರಹಿತ ಕಾರಿಡಾರ್ ನಿರ್ಮಾಣ. ಸಾದಹಳ್ಳಿ ಗೇಟ್ ಅಂಡರ್ ಪಾಸ್ ಕಾಮಗಾರಿ ಮುಂದಿನ ವಾರದಿಂದ ಆರಂಭವಾಗಲಿದೆ.
ಬೆಂಗಳೂರು ದೇಶದಲ್ಲೇ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರಗಳಲ್ಲಿ (Bengaluru City) ಒಂದಾಗಿದೆ. ಬೆಂಗಳೂರು ಐಟಿ ರಂಗಕ್ಕೆ (IT Industries) ಮಾತ್ರವಲ್ಲದೆ ಹಲವು ಮೊದಲುಗಳಿಗೆ ಕಾರಣವಾಗಿದೆ. ಈ ಕಾರಣದಿಂದಲೇ ಇಲ್ಲಿಗೆ ದೇಶದ ವಿವಿಧ ಮೂಲೆ ಮೂಲೆಗಳಿಂದ ಜನರು ಆಗಮಿಸುತ್ತಾರೆ. ಇದರಿಂದ ನಗರದ ಬೆಳವಣಿಗೆ ವೇಗ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಅಷ್ಟೇ ವೇಗವಾಗಿ ಟ್ರಾಫಿಕ್ ಸಮಸ್ಯೆ (Traffic Problem) ಕೂಡ ಹೆಚ್ಚಾಗಿದೆ. ಬೆಂಗಳೂರು ಟ್ರಾಫಿಕ್ ಬಗ್ಗೆ ಹಲವು ಬಾರಿ ಚರ್ಚೆ ಆಗಿದ್ದರೂ, ನಗರದಲ್ಲಿ ಒಂದು ಕಿಲೋ ಮೀಟರ್ ಪ್ರಯಾಣ ಮಾಡಬೇಕು ಎಂದರೂ ನೀವು ಹೆಚ್ಚು ಸಮಯ ವ್ಯಯಿಸಬೇಕಾಗುತ್ತದೆ. ಟ್ರಾಫಿಕ್ ಸಮಸ್ಯೆಯಿಂದ ಆಫೀಸ್ಗೆ ಲೇಟ್ ಆಗಿ ಹೋಗೋದು, ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳಿಗೆ ತಡವಾಗಿ ಹೋಗಿ ಜರ್ನಿಯನ್ನ ಮಿಸ್ ಮಾಡಿಕೊಳ್ಳುವುದು ಸರ್ವೇ ಸಾಮಾನ್ಯ ಸಂಗತಿಯಾಗಿದೆ (Signal Free Corridor). ಇತ್ತೀಚೆಗೆ ಇನ್ಫೋಸಿಸ್ ಸಹ-ಸಂಸ್ಥಾಪಕ ಕೂಡ ಬೆಂಗಳೂರು ಟ್ರಾಫಿಕ್ ಕಷ್ಟಗಳ ಬಗ್ಗೆ ಹೇಳಿಕೊಂಡಿದ್ದರು.
ವಿಮಾನ ನಿಲ್ದಾಣದ ಮಾರ್ಗದ ಹೆದ್ದಾರಿಯಲ್ಲಿ 22 ಕಿಲೋ ಮೀಟರ್ ದೂರ, ಅಂದರೆ ಹೆಬ್ಬಾಳದಿಂದ ಸಾದಹಳ್ಳಿ ಜಂಕ್ಷನ್ ನಡುವೆ ಸಾದಹಳ್ಳಿ ಗೇಟ್ ಬಳಿ ಮಾತ್ರ ಸಿಗ್ನಲ್ ಹೊಂದಿದೆ. ಉಳಿದ ಕಾರಿಡಾರ್ ನಲ್ಲಿ ಫ್ಲೈಓವರ್ ಮತ್ತು ಎಲಿವೇಟೆಡ್ ಕಾರಿಡಾರ್ ಮೂಲಕ ಸಿಗ್ನಲ್ ಮುಕ್ತ ಮಾರ್ಗವನ್ನು ನಿರ್ಮಾಣ ಮಾಡಲಾಗಿದೆ. ಸದ್ಯ 30 ಕೋಟಿ ರೂಪಾಯಿ ಹೆಚ್ಚಳದಲ್ಲಿ ನಿರ್ಮಾಣ ಆಗಲಿರುವ 06 ಲೈನ್ ಗಳ ಸದಾಹಳ್ಳಿ ಅಂಡರ್ ಪಾಸ್ಗೆ ಈ ಹಿಂದೆ ತಡೆಗಳು ದೂರವಾಗಿದೆ. ಇದರೊಂದಿಗೆ ವಿಮಾನ ನಿಲ್ದಾಣಕ್ಕೆ ಪ್ರಯಾಣ ಮಾಡಲು ಯಾವುದೇ ತಡೆ ಇಲ್ಲದೆ, ಮುಂದಿನ ವಾರದಿಂದ ಟ್ರಾಫಿಕ್ ಮಾರ್ಗಗಳಲ್ಲಿ ಬದಲಾವಣೆ ಮಾಡುವುದಾಗಿ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.
ಅಂಡರ್ ಪಾಸ್ ನಿರ್ಮಾಣಕ್ಕೆ ಇದೇ ಸೆಪ್ಟೆಂಬರ್ ನಲ್ಲಿ ಭೂಮಿ ಅಗೆಯುವ ಕಾಮಗಾರಿ ಆರಂಭ ಆಗಲಿದ್ದು, ಈ ಯೋಜನೆಯ ನಿರ್ಮಾಣವನ್ನು ವಿದ್ಯಾ ಇನ್ಫ್ರಾಬುಲ್ಟ್ ಪ್ರೈವೇಟ್ ಲಿಮಿಟೆಡ್ ಮಾಡಲಿದೆ. ಯೋಜನೆಗೆ ಅಗತ್ಯವಿರುವ ಡಿಸೈನ್ ಕೆಲಸಗಳು ಈಗಾಗಲೇ ಪೂರ್ಣಗೊಂಡಿದ್ದು, ಜುಲೈ, ಆಗಸ್ಟ್ ತಿಂಗಳಿನಲ್ಲಿ ಮಳೆ ಹೆಚ್ಚಾಗಿರುವ ಕಾರಣ, ಹವಾಮಾನವನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ಅಂಡರ್ ಪಾಸ್ ಕಟ್ ಅಂಡ್ ಕವರ್ ಪದ್ಧತಿಯಲ್ಲಿ ನಿರ್ಮಾಣ ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಂಡರ್ ಪಾಸ್ ನಿರ್ಮಾಣಕ್ಕೂ ಮುನ್ನ ಇಲ್ಲಿ ಫ್ಲೈಓವರ್ ನಿರ್ಮಾಣ ಮಾಡಲು ನಿರ್ಧರಿಸಲಾಗಿತ್ತು. ಆದರೆ ಭೂ ಒತ್ತುವರಿ ಕಷ್ಟವಾದ ಕಾರಣ ಅಂಡರ್ ಪಾಸ್ ನಿರ್ಮಾಣ ಮಾಡಲಾಗುತ್ತಿದೆ.
Bangalore [Bangalore],Bangalore,Karnataka













