Raj B Shetty: ನಾನು ಇಲ್ಲಿ ಕಾಂಪಿಟೇಷನ್ ಮಾಡೋಕೆ ಬಂದಿಲ್ಲ! ಈ ಮಾತು ಹೇಳಿದ್ಯಾಕೆ ರಾಜ್ ಬಿ ಶೆಟ್ಟಿ | | ACTPnews

ನಾನು ಇಲ್ಲಿ ಕಾಂಪಿಟೇಷನ್ ಮಾಡೋಕೆ ಬಂದಿಲ್ಲ; ರಾಜ್ ಬಿ ಶೆಟ್ರು ಹಿಂಗ್ಯಾಕ್ ಹೇಳಿದರು?


Last Updated:

ನಾನು ಯಾರ ಜೊತೆಗೂ ಕಾಂಪಿಟೇಷನ್ ಮಾಡೋಕೆ ಬಂದಿಲ್ಲ. ನಾನೊಬ್ಬ ಟೆಕ್ನಿಷನ್ ಆಗಿದ್ದೇನೆ. ಏನ್ರೀ ಕಾಂಪಿಟೇಷನ್? ಸಿನಿಮಾ ಕಲಾವಿದನಿಗಿಂತಲೂ ದೊಡ್ಡದು ಅಂತಲೆ ರಾಜ್ ಬಿ ಶೆಟ್ಟಿ ಹೇಳಿದ್ದಾರೆ. ಇದನ್ನ ಈಗ ಯಾಕೆ ಹೇಳಿದರು ಅನ್ನುವ ವಿವರ ಇಲ್ಲಿದೆ ಓದಿ.

ನಾನು ಇಲ್ಲಿ ಕಾಂಪಿಟೇಷನ್ ಮಾಡೋಕೆ ಬಂದಿಲ್ಲ; ರಾಜ್ ಬಿ ಶೆಟ್ರು ಹಿಂಗ್ಯಾಕ್ ಹೇಳಿದರು?
ನಾನು ಇಲ್ಲಿ ಕಾಂಪಿಟೇಷನ್ ಮಾಡೋಕೆ ಬಂದಿಲ್ಲ; ರಾಜ್ ಬಿ ಶೆಟ್ರು ಹಿಂಗ್ಯಾಕ್ ಹೇಳಿದರು?

ನಾನು ಏನೂ ಅಲ್ಲ. ನನಗಿಂತಲೂ ದೊಡ್ಡ ಕಲಾವಿದರಿದ್ದಾರೆ. ಮಿತ್ರ (Mitra) ಒಳ್ಳೆ ಕೆಲಸ ಮಾಡಿದ್ದಾರೆ. ಹಿರಿಯ ನಟ ಶ್ರೀಧರ್ (Shridhar) ಅವರು ಅದೆಷ್ಟು ಸಿನಿಮಾ ಮಾಡಿದ್ದಾರೆ. ನಾನು ಏನೂ ಅಲ್ಲ. ಒಂದೇ ಒಂದು ದಿನವೂ ನಾನು ಕಟೌಟ್ ಬೇಕು ಅಂತ ನಿರೀಕ್ಷೆ ಮಾಡಿದವನಲ್ಲ. ಹೆಸರು ಬರಬೇಕು ಅಂತಲೂ ಯೋಚನೆ ಮಾಡಿವನಲ್ಲ. ಕರಾವಳಿ ಚಿತ್ರದಲ್ಲಿ (Karavali Movie) ನಾನು ಅತಿಥಿ ಪಾತ್ರ ಮಾಡಿದ್ದೇನೆ. ಇದು ಪ್ರಮುಖ ಪಾತ್ರವೇ ಆಗಿದೆ. ಆದರೆ, ಇಲ್ಲಿ ನಾನು ಕಾಂಪಿಟೇಷನ್ ಮಾಡೋಕೆ ಬಂದಿಲ್ಲ. ಸಿನಿಮಾ ನಮಗಿಂತಲೂ ದೊಡ್ಡದು ಅಂತಲೇ ರಾಜ್ ಬಿ ಶೆಟ್ಟಿ (Raj B Shetty) ಹೇಳಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.

ನಾವು ಸಿನಿಮಾಗಿಂತಲೂ ದೊಡ್ಡವರಲ್ಲ…

ನಮ್ಮ ಸಿನಿಮಾರಂಗ ಉದ್ಧಾರ ಆಗ್ತಿಲ್ಲ ಅನ್ನುವ ಮಾತುಗಳೇ ಕೇಳಿ ಬರ್ತಿವೆ. ಆದರೆ, ಈ ರೀತಿ ವರ್ತಿಸಿದರೆ ಹೇಗೆ? ಚಿತ್ರರಂಗದ ಉದ್ಧಾರ ಆಗದೇ ಇರೋದಕ್ಕೆ ಇದೂ ಒಂದು ಕಾರಣವೇ ಆಗಿದೆ.

raj b shetty talks about competition in film industry at karavali film trailer release event

ಸಿಟ್ಟಿಲ್ಲ ಅಂದ್ರೆ ಮಾತನಾಡುವೆ

ಚಿತ್ರದಲ್ಲಿ ಪ್ರಜ್ವಲ್ ಅವರೇ ಹೀರೋ ಆಗಿದ್ದಾರೆ. ಅವರೇ ಈ ಚಿತ್ರಕ್ಕೆ ಎಲ್ಲ ಆಗಿದ್ದಾರೆ. ಇಲ್ಲಿ ನಾನು ಒಂದು ಪ್ರಮುಖ ಅತಿಥಿ ಪಾತ್ರವನ್ನೆ ಮಾಡಿದ್ದೇನೆ. ಅಷ್ಟು ಬಿಟ್ಟರೆ, ಇಲ್ಲಿ ಪ್ರಜ್ವಲ್ ಅವರೇ ಎಲ್ಲ ಆಗಿದ್ದಾರೆ.

ಕರಾವಳಿ ಚಿತ್ರದಲ್ಲಿ ಮಹಾವೀರ

ಕರಾವಳಿ ಚಿತ್ರದಲ್ಲಿ ಮಹಾವೀರ ಅನ್ನುವ ರೋಲ್ ಅನ್ನೆ ರಾಜ್ ಬಿ ಶೆಟ್ಟಿ ಮಾಡಿದ್ದಾರೆ. ಈ ಒಂದು ಪಾತ್ರಕ್ಕೆ ವಿಶೇಷ ವಿಗ್ ಕೂಡ ಧರಿಸಿದ್ದಾರೆ.

ಈ ಮೂಲಕ ಇವರ ಲುಕ್ ಕೂಡ ಬದಲಾಗಿದೆ. ಆದರೆ, ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಬಂದ್ಮೇಲೆ ಎಲ್ಲವೂ ಬದಲಾಯಿತು. ಪ್ರಜ್ವಲ್ ದೇವರಾಜ್ ಬೇಸಗೊಂಡರು ಅನ್ನೋದು ಇತ್ತು. ಇದಕ್ಕೆ ರಾಜ್ ಬಿ ಶೆಟ್ಟಿ ಉತ್ತರ ಕೊಟ್ಟಿದ್ದಾರೆ.

raj b shetty talks about competition in film industry at karavali film trailer release event

ಪ್ರಜ್ವಲ್‌ಗೂ ನನಗೂ ಏನು ಇಲ್ಲ
ಪ್ರಜ್ವಲ್‌ಗೂ ನನಗೂ ಏನು ಇಲ್ಲ

ಈ ಒಂದು ಚಿತ್ರದಲ್ಲಿ ಪ್ರಜ್ವಲ್ ಹೀರೋ ಅನ್ನೋದು ನನಗೆ ಗೊತ್ತಿತ್ತು. ನನ್ನ ಪಾತ್ರ ಇದರಲ್ಲಿ ಅತಿಥಿ ಅನ್ನೋದು ತಿಳಿದಿತ್ತು. ಪ್ರಜ್ವಲ್ ಈ ಸಿನಿಮಾದಲ್ಲಿ ಅತ್ಯುತ್ತಮ ಕೆಲಸ ಮಾಡಿದ್ದಾರೆ.

ಇವರಿಗೆ ಒಳ್ಳೆ ಹೆಸರು ಬಂದರೆ ನಾನು ತುಂಬಾನೆ ಸಂತೋಷ ಪಡ್ತೀನಿ. ಹಾಗೆ ನನಗೂ ಅವರಿಗೂ ಯಾವ ರೀತಿಯ ಸಮಸ್ಯೆನೂ ಇಲ್ಲ. ಆದರೆ, ಈಗೀನ ವರ್ತನೆಯಿಂದ ಬೇಸರ ಆಗುತ್ತದೆ. ಈ ಸಮಯದಲ್ಲಿ ಮಾಡೋದು ಸರಿ ಅಲ್ಲ. ಸಿನಿಮಾ ಕಲಾವಿದರಿಗಿಂತಲೂ ದೊಡ್ಡದು ಅಂತಲೇ ರಾಜ್ ಬಿ ಶೆಟ್ಟಿ ಹೇಳಿದ್ದಾರೆ.

ಸಿಟ್ಟಿಲ್ಲ ಅಂದ್ರೆ ಮಾತನಾಡುವೆ

ಕರಾವಳಿ ಚಿತ್ರ ಚೆನ್ನಾಗಿ ಬಂದಿದೆ. ಇದರ ಕ್ವಾಲಿಟಿ ಉತ್ತಮವಾಗಿದೆ. ದೊಡ್ಡಮಟ್ಟದಲ್ಲಿಯೇ ಹೋಗುವ ಚಿತ್ರ ಇದಾಗಿದೆ. ಗುರುದತ್ ಗಾಣಿಗ ಒಳ್ಳೆ ಸಿನಿಮಾ ಮಾಡಿದ್ದಾರೆ.

ಒಂದು ಸಿನಿಮಾ ಮಾಡೋದು ಅಂದ್ರೆ ಸುಮ್ನೆ ಅಲ್ಲ. ಸಾಕಷ್ಟು ಜನ ಈ ಚಿತ್ರಕ್ಕಾಗಿ ದುಡಿದಿದ್ದಾರೆ. ಪ್ರಜ್ವಲ್ ಅವರಿಗೆ ಸಿಟ್ಟಿಲ್ಲ ಅಂದರೆ, ಮನುಷ್ಯತ್ವದಿಂದ ಮಾತಾಡೋಕೆ ರೆಡಿ ಇದ್ದರೆ, ನಾನು ಅವರ ಜೊತೆಗೆ ಮಾತನಾಡೋಕೆ ರೆಡಿ ಇದ್ದೇನೆ ಅಂತಲೂ ಕರಾವಳಿ ಚಿತ್ರದ ಟ್ರೈಲರ್ ರಿಲೀಸ್ ಇವೆಂಟ್ ಅಲ್ಲಿ ರಾಜ್ ಬಿ ಶೆಟ್ಟಿ ಇದನ್ನ ಹೇಳಿಕೊಂಡಿದ್ದಾರೆ.

ಜುಲೈ-24 ರಂದು ಚಿತ್ರ ರಿಲೀಸ್

ಜುಲೈ-24 ರಂದು ಕರಾವಳಿ ಚಿತ್ರ ರಿಲೀಸ್ ಆಗುತ್ತಿದೆ. ಡೈರೆಕ್ಟರ್ ಗುರುದತ್ ಗಾಣಿಗ ಈ ಚಿತ್ರವನ್ನ ನಿರ್ಮಾಣ ಕೂಡ ಮಾಡಿದ್ದಾರೆ. ಪ್ರಜ್ವಲ್ ದೇವರಾಜ್ ಹಾಗೂ ಸಂಪದ ಈ ಚಿತ್ರದಲ್ಲಿದ್ದಾರೆ. ಇನ್ನು ಹಲವು ಕಲಾವಿದರು ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಸಚಿನ್ ಬಸ್ರೂರು ಸಂಗೀತ ಕೊಟ್ಟಿದ್ದಾರೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed