Last Updated:
ರಿಷಬ್ ಶೆಟ್ರು ಸಿನಿಮಾದಲ್ಲಿ ಮಾತ್ರ ಹೀರೋ ಅಲ್ಲ. ರಿಯಲ್ ಲೈಫ್ ಅಲ್ಲೂ ಹೀರೋ ನೋಡಿ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರ ಮಾಡಿದರು, ಗೆಲುವು ಕಂಡರು. ಹಾಗೆ ತಮ್ಮೂರಿನ ಸರ್ಕಾರಿ ಶಾಲೆಯ ಬಡ ಮಕ್ಕಳ ನೆರವಿಗೂ ನಿಂತಿದ್ದಾರೆ. ಆ ಒಂದು ಒಳ್ಳೆ ಕೆಲಸದ ವಿವರ ಇಲ್ಲಿದೆ ಓದಿ.
ರಿಷಬ್ ಶೆಟ್ರು (Rishab Shetty) ತೆರೆ ಮೇಲೆ ಅಷ್ಟೆ ಹೀರೋ ಅಲ್ಲ. ತೆರೆ ಹಿಂದಿನೂ ಹೀರೋ ಬಿಡಿ. ಅದು ಮನೆಗೆ ಅಷ್ಟೆ ಸೀಮಿತವಾಗಿಲ್ಲ. ಮನೆ ಮಕ್ಕಳು ಅಂತಲೂ ಇವರು ಉಳಿದಿಲ್ಲ. ತಮ್ಮೂರಿನ ಶಾಲೆಯನ್ನು ಉದ್ಧಾರ ಮಾಡಿದ್ದಾರೆ. ಆ ಶಾಲೆಯ ಮಕ್ಕಳಲ್ಲಿ ಬಡ ಮಕ್ಕಳಿಗೆ ಎರಡು ವರ್ಷದ ಸ್ಕಾಲರ್ಶಿಪ್ (Scholarship) ಕೂಡ ಕೊಟ್ಟಿದ್ದಾರೆ. ಅದನ್ನ ಪಡೆದ ಮಕ್ಕಳ ಮೊಗದಲ್ಲಿ ಇರೋ ಆ ಖುಷಿನೇ ಬೇರೆ ಇದೆ. ಪೋಷಕರ (Parents) ಮೊಗದಲ್ಲಿ ಮಂದಹಾಸ ಮೂಡಿದೆ. ಅವಶ್ಯ ಇರೋರಿಗೆ ಈ ಸ್ಕಾಲರ್ಶಿಪ್ (Scholarship) ಕೊಡಲಾಗಿದೆ. ಈ ಎಲ್ಲದರ ಒಂದು ಬ್ಯೂಟಿಫುಲ್ ವಿಡಿಯೋ ಕೂಡ ಹೊರ ಬಂದಿದೆ. ಅದರ ವಿವರ ಇಲ್ಲಿದೆ ಓದಿ.
ಮಕ್ಕಳ ಪೋಷಕರ ಸಂತಸ
ಈ ಒಂದು ಫೌಂಡೇಶನ್ ಮೂಲಕವೇ ಶಾಲೆಯ ಬಡ ಮಕ್ಕಳಿಗೆ ನೆರವಾಗಿದ್ದಾರೆ. ಎರಡು ವರ್ಷದ ಸ್ಕಾಲರ್ಶಿಪ್ ಕೂಡ ಕೊಡುತ್ತಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಒಂದು ಸ್ಕಾಲರ್ಶಿಪ್ ತುಂಬಾನೆ ಸಹಾಯವಾಗಿದೆ.
ರಿಷಬ್ ಶೆಟ್ರ ಕೊಡುವ ಸ್ಕಾಲರ್ಶಿಪ್ ಪಡೆದ ಮಕ್ಕಳ ಪೋಷಕರು ತುಂಬಾನೆ ಖುಷಿ ಆಗಿದ್ದಾರೆ. ರಿಷಬ್ ಶೆಟ್ರ ಸಹಾಯವನ್ನು ನೆನೆದು ಎಮೋಷನಲ್ ಆಗಿರೋದು ಇದೆ.
ಈ ಒಂದು ಒಳ್ಳೆ ಕೆಲಸದ ಮೂಲಕ ರಿಷಬ್ ಶೆಟ್ರು ಎಲ್ಲರೂ ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂತ ಚಿತ್ರ ಮಾಡಿ ಬರೀ ದುಡ್ಡು ಮಾಡಿಕೊಂಡಿಲ್ಲ. ಬದಲಾಗಿ, ಸರ್ಕಾರಿ ಶಾಲೆಗಳನ್ನ ಉಳಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಆ ಸಾಲಿನಲ್ಲಿ ಉಡುಪಿ ಜಿಲ್ಲೆಯ ಕೆರಾಡಿಯ ಶಾಲೆ ಕೂಡ ಒಂದಾಗಿದೆ.
ಕೆರಾಡಿ ಶಾಲೆ
ರಿಷಬ್ ಶೆಟ್ರ ಈ ಒಂದು ಒಳ್ಳೆ ಕೆಲಸದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲೂ ಶೇರ್ ಆಗಿದೆ. ರಿಷಬ್ ಶೆಟ್ಟಿ ಪೌಂಡೇಶನ್ ಪೇಜ್ ಅಲ್ಲೂ ಶೇರ್ ಆಗಿದೆ. ರಿಷಬ್ ಶೆಟ್ರ ಜನ್ಮ ದಿನದಂದು ಇದು ಶೇರ್ ಆಗಿದೆ ನೋಡಿ.
ರಿಷಬ್ ಶೆಟ್ರು ಜುಲೈ-7 ರಂದು 43ನೇ ಜನ್ಮ ದಿನವನ್ನ ಆಚರಣೆ ಮಾಡಿದ್ದಾರೆ. ಒಂದು ದಿನ ಮೊದಲೇ ಅಂದ್ರೆ, ಜುಲೈ-6 ರಂದು ಬೆಂಗಳೂರಿನ ಸಿನಿಮಾ ಪತ್ರಕರ್ತರ ಜೊತೆಗೂ ಕೇಕ್ ಕಟ್ ಮಾಡಿ ಆಚರಣೆ ಮಾಡಿಕೊಂಡಿದ್ದಾರೆ.
ಈ ವೇಳೆ ಪತ್ರಕರ್ತರ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದಾರೆ. ಕನ್ನಡ ಸಿನಿಮಾರಂಗದ ಸ್ಥಿತಿಯ ಬಗ್ಗೆನೂ ಮಾತನಾಡಿದ್ದಾರೆ. ಒಳ್ಳೆ ಸಿನಿಮಾಗಳನ್ನ ಮಾಡೋದು ಅವಶ್ಯ ಇದೆ ಅಂತಲೂ ಹೇಳಿದ್ದಾರೆ. ಇನ್ನು ಸಾಕಷ್ಟು ವಿಚಾರಗಳನ್ನು ಮಾತನಾಡಿದ್ದಾರೆ ಅಂತಲೂ ಹೇಳಬಹುದು.
Bangalore [Bangalore],Bangalore,Karnataka













