Last Updated:
“ಎಲ್ಪಿಜಿ ದರಗಳು 2000 ರೂ.ಗೆ ಏರಬಹುದಿತ್ತು ಆದರೆ ನಾವು 950 ರೂ.ಗೆ ಸಿಲಿಂಡರ್ಗಳನ್ನು ಪೂರೈಸಿದ್ದೇವೆ” ಎಂದು ಹೇಳಿದರು. ಉಜ್ವಲ್ ಯೋಜನೆಯ ಮೂಲಕ ಬಡವರಿಗೆ ಸಿಲಿಂಡರ್ಗಳು ಸಿಕ್ಕವು ಎಂದು ಹೇಳುವ ಮೂಲಕ ಅವರು ಕೇಂದ್ರದ ಕಲ್ಯಾಣ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದ್ರು.
ರಾಜಸ್ಥಾನ: ಭಾರತದಲ್ಲಿ ಪೆಟ್ರೋಲ್ (petrol) ಅಭಾವ ಇಲ್ಲ ಅಂತ ಪ್ರಧಾನಿ (Prime Minister) ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. ರಾಜಸ್ಥಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೇಂದ್ರ ಸರ್ಕಾರದ ‘ಭಾರತ ಮೊದಲು’ (India First) ಎಂಬ ನೀತಿ ಮತ್ತು ರಾಜತಾಂತ್ರಿಕ ಸಂಪರ್ಕದಿಂದಾಗಿ ಭಾರತವು ಪೆಟ್ರೋಲ್ ಅಥವಾ ಡೀಸೆಲ್ ಕೊರತೆಯನ್ನು ಎದುರಿಸದೇ ಜಾಗತಿಕ ಇಂಧನ ಬಿಕ್ಕಟ್ಟನ್ನು ನಿಭಾಯಿಸಲು ಸಹಾಯವಾಗಿದೆ ಅಭಿಪ್ರಾಯಪಟ್ಟರು.
ಜಾಗತಿಕ ಇಂಧನ ಬಿಕ್ಕಟ್ಟನ್ನು ಉಲ್ಲೇಖಿಸಿದ ಪ್ರಧಾನಿ, “ಕಚ್ಚಾ ತೈಲ ಬೆಲೆಗಳು ಗಗನಕ್ಕೇರಿವೆ. ಆದರೆ ವಿಶ್ವದಾದ್ಯಂತ ಡೀಸೆಲ್ ಬೆಲೆಗಳು ಶೇ. 40 ರಷ್ಟು ಏರಿಕೆಯಾಗಿವೆ ಎಂದು ಹೇಳಿದರು. ಈ ಸವಾಲುಗಳ ಹೊರತಾಗಿಯೂ, ಭಾರತವು ಯಾವುದೇ ಇಂಧನ ಕೊರತೆಯಿಂದ ಸಮಸ್ಯೆಗೆ ಒಳಗಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ರು. ಭಾರತದಲ್ಲಿ ಪೆಟ್ರೋಲ್ ಬಿಕ್ಕಟ್ಟು ಮೇಲುಗೈ ಸಾಧಿಸಲು ನಾವು ಬಿಡಲಿಲ್ಲ… ವದಂತಿಗಳು ಹಬ್ಬಿದವು ಆದರೆ ಅವು ಯಶಸ್ವಿಯಾಗಲು ಸಾಧ್ಯವಾಗಲಿಲ್ಲ” ಎಂದು ಅವರು ವಿರೋಧಿಗಳಿಗೆ ಟಾಂಗ್ ನೀಡಿದ್ರು.
ಡೀಸೆಲ್ ಮತ್ತು ಪೆಟ್ರೋಲ್ ಪೂರೈಕೆಯಲ್ಲಿ ಯಾವುದೇ ಸವಾಲು ಇರಲಿಲ್ಲ ಎಂದು ಪ್ರಧಾನಿ ಹೇಳಿದರು. ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಭಾರತದ ಪಾತ್ರವನ್ನು ಎತ್ತಿ ತೋರಿಸಿದ ಪ್ರಧಾನಿ ಮೋದಿ, ದೇಶೀಯ ಹಿತಾಸಕ್ತಿಗಳನ್ನು ಕಾಪಾಡಿಕೊಂಡು ದೇಶವು ಸಂಸ್ಕರಿಸಿದ ಇಂಧನವನ್ನು ರಫ್ತು ಮಾಡುವುದನ್ನು ಮುಂದುವರೆಸಿದೆ ಎಂದು ಹೇಳಿದರು.
ನಾವು 40 ಕ್ಕೂ ಹೆಚ್ಚು ದೇಶಗಳಿಂದ ಇಂಧನವನ್ನು ರಫ್ತು ಮಾಡಿದ್ದೇವೆ ಮತ್ತು ನಮಗೆ ದೇಶ ಮೊದಲು ಎಂದು ಇಡೀ ಜಗತ್ತಿಗೆ ತಿಳಿಸಿದ್ದೇವೆ ಎಂದು ಮೋದಿ ಹೇಳಿದರು. ರಾಷ್ಟ್ರೀಯ ಹಿತಾಸಕ್ತಿಯ ಮೇಲೆ ಸರ್ಕಾರ ಹೊಂದಿರುವ ಗಮನವನ್ನು ಪುನರುಚ್ಚರಿಸಿದ ಅವರು, ನಾವು 40 ಕ್ಕೂ ಹೆಚ್ಚು ದೇಶಗಳಿಂದ ಇಂಧನವನ್ನು ರಫ್ತು ಮಾಡಿದ್ದೇವೆ ಮತ್ತು ನಮಗೆ ದೇಶ ಮೊದಲು ಮತ್ತು ದೇಶದ ಹಿತಾಸಕ್ತಿ ಎಂದು ಇಡೀ ಜಗತ್ತಿಗೆ ತಿಳಿಸಿದ್ದೇವೆ ಎಂದು ಹೇಳಿದರು.
ದೇಶೀಯ ಎಲ್ಪಿಜಿ ಪೂರೈಕೆಯ ಬಗ್ಗೆ ಮಾತನಾಡಿದ ಪ್ರಧಾನಿ, ಜಾಗತಿಕ ಅಡೆತಡೆಗಳ ಹೊರತಾಗಿಯೂ ಸರ್ಕಾರ ಅಡುಗೆ ಅನಿಲದ ನಿರಂತರ ಲಭ್ಯತೆಗೆ ಕ್ರಮ ಕೈಗೊಂಡಿದೆ. ನಾವು ಎಲ್ಪಿಜಿ ಸರಬರಾಜನ್ನು ಸುಗಮವಾಗಿ ಪೂರೈಸುವುದನ್ನು ಖಚಿತಪಡಿಸಿಕೊಂಡಿದ್ದೇವೆ ಎಂದು ಅವರು ಹೇಳಿದರು. ಅಂತರರಾಷ್ಟ್ರೀಯ ಬೆಲೆಗಳು ಗ್ರಾಹಕರ ಮೇಲಿನ ಹೊರೆಯನ್ನು ಗಮನಾರ್ಹವಾಗಿ ಹೆಚ್ಚಿಸಬಹುದಿತ್ತು ಎಂದು ಹೇಳಿಕೊಂಡ ಪ್ರಧಾನಿ ಮೋದಿ, “ಎಲ್ಪಿಜಿ ದರಗಳು 2000 ರೂ.ಗೆ ಏರಬಹುದಿತ್ತು ಆದರೆ ನಾವು 950 ರೂ.ಗೆ ಸಿಲಿಂಡರ್ಗಳನ್ನು ಪೂರೈಸಿದ್ದೇವೆ” ಎಂದು ಹೇಳಿದರು. ಉಜ್ವಲ್ ಯೋಜನೆಯ ಮೂಲಕ ಬಡವರಿಗೆ ಸಿಲಿಂಡರ್ಗಳು ಸಿಕ್ಕವು ಎಂದು ಹೇಳುವ ಮೂಲಕ ಅವರು ಕೇಂದ್ರದ ಕಲ್ಯಾಣ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದ್ರು.
ರಾಜಸ್ಥಾನದ ಬಲೋತ್ರಾ ಜಿಲ್ಲೆಯ ಪಚಪದ್ರಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಮೊದಲ ಹಸಿರು ಕ್ಷೇತ್ರ ಸಂಯೋಜಿತ ಸಂಸ್ಕರಣಾಗಾರ-ಕಮ್-ಪೆರ್ಟ್ರೋಕೆಮಿಕಲ್ ಸಂಕೀರ್ಣವನ್ನು ಉದ್ಘಾಟಿಸಿದರು, ಇದು ದೇಶದ ಇಂಧನ ಮತ್ತು ಪೆಟ್ರೋಕೆಮಿಕಲ್ ವಲಯದಲ್ಲಿ ಒಂದು ಹೆಗ್ಗುರುತಿನ ಸಾಧನೆಯಾಗಿದೆ.













