Last Updated:
ಬಿಜೆಪಿ ಶಾಸಕ ರಾಜು ಕುಮಾರ್ ಸಿಂಗ್ ಅವರಿಗೆ ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ನಾಲ್ಕು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.
ದೆಹಲಿ: ಬಿಜೆಪಿ ಶಾಸಕನಿಗೆ (BJP MLA) ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಸೆಲೆಬ್ರೇಟರಿ ಫೈರಿಂಗ್ ಪ್ರಕರಣಕ್ಕೆ (Celebratory Firing Case) ಸಂಬಂಧಪಟ್ಟಂತೆ ಬಿಹಾರದ (Bihar) ಸಾಹೇಬ್ಗಂಜ್ ಕ್ಷೇತ್ರದ ಬಿಜೆಪಿ ಶಾಸಕ ರಾಜು ಕುಮಾರ್ ಸಿಂಗ್ (Raju Kumar Singh) ಅವರಿಗೆ ದೆಹಲಿಯ ರೂಸ್ ಅವೆನ್ಯೂ ಕೋರ್ಟ್ (Rouse Avenue District Court Complex) ನಾಲ್ಕು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಜೈಲು ಶಿಕ್ಷೆಯ ಜೊತೆಗೆ 25 ಲಕ್ಷ ರೂಪಾಯಿ ದಂಡ ಕೂಡ ವಿಧಿಸಲಾಗಿದೆ.
2018ರ ಡಿಸೆಂಬರ್ 31ರಂದು ದೆಹಲಿಯ ಫಾರ್ಮ್ಹೌಸ್ನಲ್ಲಿ ನಡೆದ ಹೊಸ ವರ್ಷದ ಪಾರ್ಟಿ ಸಂದರ್ಭದಲ್ಲಿ ಬಿಜೆಪಿ ಶಾಸಕ ರಾಜು ಕುಮಾರ್ ಸಿಂಗ್ ತಮ್ಮ ಗನ್ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಗಾಳಿಯಲ್ಲಿ ಹಾರಿದ ಗುಂಡು ತಗುಲಿ ಡಾ. ಅರ್ಚನಾ ಗುಪ್ತಾ ಎಂಬ 45 ವರ್ಷದ ಮಹಿಳೆ ಗಾಯಗೊಂಡು, ನಂತರ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು. ಅಂದು ಈ ಘಟನೆ ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿತ್ತು.













