Golden Star Ganesh: ಮಳೆ ಹುಡಗನ ಫ್ಯಾನ್ಸ್​ಗೆ ಗುಡ್​ನ್ಯೂಸ್! ಒಂದೇ ತಿಂಗಳಲ್ಲಿ 2 ಸಿನಿಮಾ ರಿಲೀಸ್ | golden star ganesh brindavihari pinaka movie official release | | ACTPnews

Golden Star Ganesh: ಮಳೆ ಹುಡಗನ ಫ್ಯಾನ್ಸ್​ಗೆ ಗುಡ್​ನ್ಯೂಸ್! ಒಂದೇ ತಿಂಗಳಲ್ಲಿ 2 ಸಿನಿಮಾ ರಿಲೀಸ್ | golden star ganesh brindavihari pinaka movie official release |


ಅಕ್ಟೋಬರ್-2 ಪಿನಾಕ ರಿಲೀಸ್

ಗಣೇಶ್ ಅಭಿನಯದ ಈ ಚಿತ್ರ ವಿಶೇಷವಾಗಿದೆ. ಈ ಚಿತ್ರದಲ್ಲಿ ಗಣೇಶ್ ಬೇರೆ ರೀತಿಯ ಪಾತ್ರ ಮಾಡಿದ್ದಾರೆ. ಇಲ್ಲಿವರೆಗೂ ಇಂತಹ ಪಾತ್ರವನ್ನ ಗಣೇಶ್ ಮಾಡಿಯೇ ಇಲ್ಲ.

ಆದರೆ, ಡೈರೆಕ್ಟರ್ ಧನಂಜಯ್ ಈ ಒಂದು ರೋಲ್ ಅನ್ನ ಸಖತ್ ಆಗಿಯೆ ಡಿಸೈನ್ ಮಾಡಿದ್ದಾರೆ. ಪಿನಾಕ ಚಿತ್ರದ ಪೋಸ್ಟರ್ ನೋಡಿದ್ರೇನೆ ನಿಮಗೆ ಗೊತ್ತಾಗುತ್ತದೆ. ಚಿತ್ರದ ರೋಲ್ ಹೇಗಿದೆ ಅನ್ನೋತು ತಿಳಿಯುತ್ತದೆ.

ಪಿನಾಕ ಹೊಸ ಪೋಸ್ಟರ್ ರಿಲೀಸ್

ಪಿನಾಕ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಗಣೇಶ್ ಜನ್ಮ ದಿನದಂದು ಈ ಪೋಸ್ಟರ್ ಹೊರ ಬಂದಿದೆ. ಇದರಲ್ಲಿ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಪಿನಾಕ ಚಿತ್ರ ಅಕ್ಟೋಬರ್-2 ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತದೆ ಅಂತ ಇದರಲ್ಲಿ ಅನೌನ್ಸ್ ಮಾಡಲಾಗಿದೆ.

ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಹುಟ್ಟುದ ಶುಭಾಶಯಗಳು ಅಂತಲೂ ಈ ಪೋಸ್ಟರ್ ಅಲ್ಲಿ ವಿಶ್ ಮಾಡಲಾಗಿದೆ. ಹಾಗೆ ಈ ಪೋಸ್ಟರ್ ಅಲ್ಲಿ ಒಂದು ಇಂಟ್ರಸ್ಟಿಂಗ್ ವಿಷಯವೂ ಇದೆ. ಗಣೇಶ್ ಕೈಯಲ್ಲಿ ಒಂದು ವಸ್ತು ಇದೆ. ಇದನ್ನ ಭೂತಗನ್ನಡಿ ಮೂಲಕವೇ ಗಣೇಶ್ ಚೆಕ್ ಮಾಡುತ್ತಿದ್ದಾರೆ ಅಂತಲೇ ಹೇಳಬಹುದು.

ಅಕ್ಟೋಬರ್-16 ಕ್ಕೆ ಬೃಂದಾವಿಹಾರಿ

ಬೃಂದಾವಿಹಾರಿ ಚಿತ್ರ ಕೂಡ ಅಕ್ಟೋಬರ್ ತಿಂಗಳಲ್ಲಿಯೇ ರಿಲೀಸ್ ಆಗುತ್ತಿದೆ. ಆದರೆ, ಹೆಚ್ಚು ಕಡಿಮೆ ಎರಡು ವಾರದ ಅಂತರ ಇದೆ. ಪಿನಾಕ ಅಕ್ಟೋಬರ್-2 ರಂದು ತೆರೆ ಕಾಣುತ್ತಿದೆ. ಬೃಂದಾವಿಹಾರಿ ಅಕ್ಟೋಬರ್-16ಕ್ಕೆ ರಿಲೀಸ್ ಆಗುತ್ತಿದೆ.

ಈ ಎರಡೂ ಸಿನಿಮಾಗಳ ಜಾನರ್ ಮತ್ತು ಕಂಟೆಂಟ್ ವಿಭಿನ್ನವಾಗಿಯೇ ಇವೆ. ಈ ಹಿಂದಿನ ಗಣೇಶ್ ಅವರ ಕೃಷ್ಣಂ ಪ್ರಣಯ ಸಖಿ ಚಿತ್ರವನ್ನ ಡೈರೆಕ್ಟ್ ಮಾಡಿರೋ ಶ್ರೀನಿವಾಸ್ ರಾಜು ಅವರೇ ಈ ಬೃಂದಾವಿಹಾರಿ ಚಿತ್ರ ಮಾಡಿದ್ದಾರೆ. ಇಲ್ಲೂ ಹೊಸದೊಂದು ವಿಷಯ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ ಅಂತಲೂ ಹೇಳಬಹುದು.

ಪಿನಾಕ ಚಿತ್ರದ ಡೈರೆಕ್ಟರ್

ಪಿನಾಕ ಚಿತ್ರವನ್ನ ಧನಂಜಯ್ ಡೈರೆಕ್ಷನ್ ಮಾಡುತ್ತಿದ್ದಾರೆ. ಇವರು ಮೂಲತಃ ಡ್ಯಾನ್ಸ್ ಮಾಸ್ಟರ್ ಆಗಿದ್ದಾರೆ. ಒಳ್ಳೆ ಹೆಸರು ಕೂಡ ಮಾಡಿದ್ದಾರೆ. ಪಿನಾಕ ಚಿತ್ರವನ್ನ ಇವರೇ ಡೈರೆಕ್ಷನ್ ಮಾಡುತ್ತಿದ್ದಾರೆ.

ಗಣೇಶ್ ಒಪ್ಪಿರೋ ಇತರ ಚಿತ್ರಗಳು

ಗಣೇಶ್ ಒಪ್ಪಿರೋ ನಾಲ್ಕು ಚಿತ್ರಗಳಲ್ಲಿ ಪಿನಾಕ, ಬೃಂದಾವಿಹಾರಿ ರಿಲೀಸ್‌ಗೆ ಸಜ್ಜಾಗುತ್ತಿವೆ. ಅಧಿಕೃತವಾಗಿಯೇ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿವೆ.

ಇನ್ನೆರಡು ಸಿನಿಮಾ ಅಂತ ಬಂದ್ರೆ, ನಿಮ್ಮ ಸುಖಾಗಮನ ಬಯಸುವ ಚಿತ್ರವು ಇದೆ. ಇದನ್ನ ರಾಮೇನಹಳ್ಳಿ ಜಗನ್ನಾಥ್ ಡೈರೆಕ್ಷನ್ ಮಾಡುತ್ತಿದ್ದಾರೆ.

-ರೇವನ್ ಪಿ.ಜೇವೂರ್



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed