Breakup: ಬಾಲಿವುಡ್​ನ ಖ್ಯಾತ ನಟಿಗೆ ಹಾರ್ಟ್​ಬ್ರೇಕ್! ರಿಲೇಷನ್​​ಶಿಪ್ ಎಂಡ್? ಬ್ರೇಕಪ್ ಆಗಿದ್ದೇಕೆ? | Kriti sanon breakup rumours are viral what happened | | ACTPnews

ಕೃತಿ ಸನೋನ್


Last Updated:

Kriti Sanon: ನಟಿ ಕೃತಿ ಸನೋನ್ ಲವ್ ಬ್ರೇಕಪ್ ಆಯ್ತಾ? ಕಾಕ್ಟೇಲ್ 2 ನಟಿಯ ಬಗ್ಗೆ ಕೇಳಿ ಬರ್ತಿರೋದು ನಿಜಾನಾ? ಆಗಿದ್ದೇನು?

ಕೃತಿ ಸನೋನ್
ಕೃತಿ ಸನೋನ್

ಇತ್ತೀಚೆಗಷ್ಟೇ ಕಾಕ್ಟೇಲ್ 2 (Cocktail 2) ಸಿನಿಮಾದ ಮೂಲಕ ಶಾಹಿದ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ಜೊತೆ ಬಿಗ್ ಸ್ಕ್ರೀನ್​ಗೆ ಬಂದ ನಟಿಗೆ ಬ್ರೇಕಪ್  (Breakup) ಆಯ್ತಾ? ಬಾಲಿವುಡ್ ನಟಿ ಕೃತಿ ಸನೋನ್ ಅವರು ಉದ್ಯಮಿ ಕಬೀರ್ ಬಹಿಯಾ ಅವರೊಂದಿಗಿನ ಸಂಬಂಧದ ಬಗ್ಗೆ ಕೆಲವು ಸಮಯದಿಂದ ಸುದ್ದಿಯಲ್ಲಿದ್ದಾರೆ.

 ಬಾಲಿವುಡ್ ನಟಿ ಕೃತಿ ಸನೋನ್ ಅವರು ಉದ್ಯಮಿ ಕಬೀರ್ ಬಹಿಯಾ ಅವರೊಂದಿಗಿನ ಸಂಬಂಧದ ಬಗ್ಗೆ ಕೆಲವು ಸಮಯದಿಂದ ಸುದ್ದಿಯಲ್ಲಿದ್ದಾರೆ.

ಇಬ್ಬರೂ ತಮ್ಮ ಸಂಬಂಧವನ್ನು ಅಧಿಕೃತವಾಗಿ ಒಪ್ಪಿಕೊಂಡಿಲ್ಲ ಅಥವಾ ನಿರಾಕರಿಸಿಲ್ಲವಾದರೂ, ಅವರು ಒಟ್ಟಿಗೆ ವೆಕೇಷನ್ ಕಳೆಯುತ್ತಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ವೈರಲ್ ಆಗುತ್ತಿವೆ.

ಇದಲ್ಲದೆ, ಕಬೀರ್ ಇತ್ತೀಚೆಗೆ ಕೃತಿ ಅವರ ಸಹೋದರಿ ನೂಪುರ್ ಸನೋನ್ ಅವರ ವಿವಾಹದಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರು ತುಂಬಾ ಆಪ್ತ ಕುಟುಂಬ ಸದಸ್ಯರೊಂದಿಗೆ ಕಾಣಿಸಿಕೊಂಡರು. ಆದರೆ ಈಗ, ಕಬೀರ್ ಬಹಿಯಾ ಒಬ್ಬ ಹುಡುಗಿಯ ಜೊತೆಗಿರುವ ಫೋಟೋ ಸಾಮಾಜಿಕ ಮಾಧ್ಯಮ ವೇದಿಕೆ ರೆಡ್ಡಿಟ್‌ನಲ್ಲಿ ಕಾಣಿಸಿಕೊಂಡಿದ್ದು, ಸೋಷಿಯಲ್ ಮಿಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

ಫೋಟೋ ವೈರಲ್ ಆದ ತಕ್ಷಣ, ಕೃತಿ ಮತ್ತು ಕಬೀರ್ ಬೇರ್ಪಟ್ಟಿದ್ದಾರೆ ಎಂಬ ಊಹಾಪೋಹಗಳು ಪ್ರಾರಂಭವಾದವು. ಈ ವದಂತಿಗಳು ಮತ್ತು ಹೇಳಿಕೆಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ತೋರುತ್ತಿದೆ. ಅವು ಕೇವಲ ವದಂತಿಯಾಗಿ ವೈರಲ್ ಆದವು.

ಕೃತಿ ಸನೋನ್ ಮತ್ತು ಕಬೀರ್ ಬಹಿಯಾ ಬೇರ್ಪಟ್ಟಿದ್ದಾರೆಯೇ?

ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಕಬೀರ್ ಅವರ ಈ ವೈರಲ್ ಫೋಟೋವನ್ನು ಕೃತಿ ಸನೋನ್ ಅವರ ಇತ್ತೀಚಿನ ಚಿತ್ರ “ಕಾಕ್ಟೇಲ್ 2” ಸಿನಿಮಾದ ಕಂಟೆಂಟ್​ಗೆ ನೇರವಾಗಿ ಲಿಂಕ್ ಮಾಡಿದ್ದಾರೆ. ಇವೆಲ್ಲವೂ ಜನರು ಇಬ್ಬರೂ ನಿಜವಾಗಿಯೂ ಬೇರ್ಪಟ್ಟಿದ್ದಾರೆ ಎಂದು ನಂಬುವಂತೆ ಮಾಡಿದೆ.

ಕಬೀರ್ ಅವರ ಅತ್ಯಂತ ನಿಕಟ ವ್ಯಕ್ತಿಯೊಬ್ಬರು ಈ ಹೇಳಿಕೆಗಳನ್ನು ಸಂಪೂರ್ಣವಾಗಿ ಆಧಾರರಹಿತ ಮತ್ತು ಅಸಂಬದ್ಧವೆಂದು ತಳ್ಳಿಹಾಕಿದ್ದಾರೆ. ETimes ನಲ್ಲಿನ ವರದಿಯ ಪ್ರಕಾರ, ಆಪ್ತ ಮೂಲವೊಂದು ಈ ವದಂತಿಗಳಿಗೆ ಅಂತ್ಯ ಹಾಡಿದ್ದು, “ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗುತ್ತಿರುವ ಕಬೀರ್ ಮತ್ತು ಹುಡುಗಿಯ ಫೋಟೋವನ್ನು ತಪ್ಪು ರೀತಿಯಲ್ಲಿ ಚಿತ್ರಿಸಲಾಗುತ್ತಿದೆ. ಆ ಹುಡುಗಿ ಕಬೀರ್ ಅವರ ಫ್ಯಾಮಿಲಿ ಫ್ರೆಂಡ್, ಅವರು ಅವಳನ್ನು ಸಹೋದರಿಯಂತೆ ಪರಿಗಣಿಸುತ್ತಾರೆ ಎನ್ನಲಾಗಿದೆ.

ಸತ್ಯವನ್ನು ತಿಳಿಯದೆ ಜನರು ಇಷ್ಟು ಬೇಗ ಜಡ್ಜ್ ಮಾಡಿ ಕಟ್ಟುಕಥೆಗಳನ್ನು ಹರಡಬಾರದು ಎನ್ನಲಾಗಿದೆ. ಕೃತಿ ಮತ್ತು ಕಬೀರ್ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.ಅವರ ಪ್ರೇಮ ಸಂಬಂಧದ ವದಂತಿಗಳು ಯಾವಾಗಲೂ ಹರಡುತ್ತಲೇ ಇರುತ್ತವೆ.

ಗ್ರೀಸ್‌ನಲ್ಲಿ ಒಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವುದರಿಂದ ಹಿಡಿದು ಡಿನ್ನರ್ ಮತ್ತು ಫ್ಯಾಮಿಲಿ ಫಂಕ್ಷನ್​ಗಳಲ್ಲಿ ಕೂಡಾ ಅವರು ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಸಾಮಾಜಿಕ ಮಾಧ್ಯಮದಿಂದ ನಿಜ ಜೀವನದವರೆಗೆ, ಅವರ ರಿಲೇಷನ್​ಶಿಪ್ ಬಗ್ಗೆ ಅಭಿಮಾನಿಗಳನ್ನು ಯಾವಾಗಲೂ ಕುತೂಹಲದಲ್ಲಿರುತ್ತಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed