Last Updated:
ರಾಕಿಂಗ್ ಸ್ಟಾರ್ ಯಶ್ ‘ಟಾಕ್ಸಿಕ್’ ಚಿತ್ರದ ಹೊಸ ನ್ಯೂಸ್ ಕೊಟ್ಟಿದ್ದಾರೆ. ಜುಲೈ-1 ರಂದು ಇದು ಟೀಸರ್ ರೂಪದಲ್ಲಿಯೇ ಹೊರಗೆ ಬರ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಟಾಕ್ಸಿಕ್ ಚಿತ್ರದ (Toxic Movie) ಬಿಗ್ ನ್ಯೂಸ್ (Big News) ಹೊರ ಬಂದಿದೆ. ಚಿತ್ರದ ಒಂದು ವಿಶೇಷ ಟೀಸರ್ ರಿಲೀಸ್ (Teaser Release) ಆಗುತ್ತಿದೆ. ಚಿತ್ರದಲ್ಲಿರೋ ನಟಿಯರ ಒಂದು ಟೀಸರ್ ಇದಾಗಿದೆ ಅನ್ನುವ ಸುದ್ದಿನೂ ಇದೆ. ಇದರ ಮಾಹಿತಿಯನ್ನ ಸ್ವತಃ ರಾಕಿಂಗ್ ಸ್ಟಾರ್ ಯಶ್ (Rocking Star Yash) ವಿಭಿನ್ನವಾಗಿಯೇ ಕೊಟ್ಟಿದ್ದಾರೆ. ಇನ್ಸ್ಟಾಗ್ರಾಮ್ನ ತಮ್ಮ ಪೇಜ್ನ ಸ್ಟೇಟಸ್ ಅಲ್ಲಿಯೇ ಇದನ್ನ ಹೇಳಿಕೊಂಡಿದ್ದಾರೆ. “Calm down ladies, take your time to come” ಅಂತಲೂ ಬರೆದಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಆಗಸ್ಟ್-26 ಕ್ಕೆ ರಿಲೀಸ್
ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ನಯನ ತಾರಾ, ರುಕ್ಮಿಣಿ ವಸಂತ್ ಸೇರಿದಂತೆ ಹುಮಾ ಖುರೇಷಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನು ಹಲವು ಕಲಾವಿದೆಯರೂ ಇದ್ದಾರೆ. ಈ ಪಾತ್ರಗಳ ಪರಿಚಯವನ್ನ ಮಾಡುವ ಟೀಸರ್ ಇದಾಗಿದೆ ಅನ್ನುವ ಸುದ್ದಿ ಇದೆ.
ಟಾಕ್ಸಿಕ್ ಚಿತ್ರದ ಟೀಸರ್ ರಿಲೀಸ್ ಆಗುತ್ತಿದೆ. ಜುಲೈ-1 ರಂದು ಬೆಳಗ್ಗೆ 11.33 ಕ್ಕೆ ಈ ಟೀಸರ್ ರಿಲೀಸ್ ಆಗುತ್ತಿದೆ. ಈ ವಿಷಯವನ್ನ ಯಶ್ ತಮ್ಮ ಇನ್ಸ್ಟಾಗ್ರಾಮ್ನ ಸ್ಟೇಟಸ್ ಅಲ್ಲಿಯೇ ಬರೆದುಕೊಂಡಿದ್ದಾರೆ.
“Calm down ladies, take your time to come”….ಅಂತಲೂ ಬರೆದಿದ್ದಾರೆ. ಈ ಒಂದು ಮ್ಯಾಟರ್ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮೀಡಿಯಾಗಳಿಗೂ ಈ ವಿಷಯ ಅಧಿಕೃತವಾಗಿಯೇ ಶೇರ್ ಆಗಿದೆ.
ಹುಮಾ ಖುರೇಷಿ ಚಿತ್ರದ 8 ನಿಮಿಷದ ವಿಡಿಯೋ ನೋಡಿದ್ದಾರೆ. ಇದು ಚಿತ್ರದ ಪ್ರಮುಖ ವಿಷಯಗಳ ಕಟ್ಸ್ ಮಾತ್ರವೇ ಆಗಿದೆ. ಆದರೆ, ಇದು ಅಷ್ಟೆ ಅದ್ಭುತವಾಗಿಯೇ ಬಂದಿದೆ.
ಬೆಳಗ್ಗೆ 11.33 ಕ್ಕೆ ಟೀಸರ್ ರಿಲೀಸ್
(ಚಿತ್ರ ಕೃಪೆ: ಯಶ್ ಇನ್ಸ್ಟಾಗ್ರಾಮ್)
ತಮ್ಮ ಚಿತ್ರದ ಜೀವನದಲ್ಲಿ ಬಂದ ಸಿನಿಮಾಗಳಲ್ಲಿ ಇದು ಅದ್ಭುತವಾಗಿಯೇ ಇದೆ ಅಂತಲೇ ಹೇಳಿಕೊಂಡಿದ್ದಾರೆ. ಆ ರೀತಿನೇ ಈ ಚಿತ್ರದ ದೃಶ್ಯಗಳಿವೆ ಅಂತಲೇ ಹುಮಾ ಖುರೇಷಿ ಒತ್ತಿ ಹೇಳಿಕೊಂಡಿದ್ದಾರೆ.
ಹುಮಾ ಖುರೇಷಿ ಅವರಿಗೆ ಯಶ್ ಬಗ್ಗೆ ಗೊತ್ತಿದೆ. ಒಬ್ಬ ಸ್ಟಾರ್ ನಟ ಅನ್ನೋದನ್ನು ತಿಳಿದುಕೊಂಡಿದ್ದಾರೆ. ಆದರೆ, ಟಾಕ್ಸಿಕ್ ಚಿತ್ರ ಮಾಡ್ತಾನೇ ಅಭಿಮಾನಿನೇ ಆಗಿದ್ದಾರೆ.
ಟಾಕ್ಸಿಕ್ ಚಿತ್ರದ ರಿಲೀಸ್ ಡೇಟ್ ಹೆಚ್ಚು ಕಡಿಮೆ ಮೂರು ಸಲ ಚೇಂಜ್ ಆಗಿದೆ. ನಾಲ್ಕನೇ ಬಾರಿಗೆ ಫಿಕ್ಸ್ ಆಗಿದೆ. ಆಗಸ್ಟ್-26ಕ್ಕೆ ಈ ಸಿನಿಮಾ ತೆರೆ ಕಾಣುತ್ತಿದೆ.
ಬಹು ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಇದು ತಯಾರಾಗಿದೆ. ಗೀತು ಮೋಹನ್ ದಾಸ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಕತೆಯ ವಿಚಾರದಲ್ಲಿ ಯಶ್ ಕೂಡ ಜೊತೆಗಿದ್ದಾರೆ.
ಟಾಕ್ಸಿಕ್ ಚಿತ್ರಕ್ಕೆ ರವಿ ಬಸ್ರೂರು ಹಿನ್ನೆಲೆ ಸಂಗೀತ ಕೊಟ್ಟಿದ್ದಾರೆ. ಗೀತು ಮೋಹನ್ ದಾಸ್ ಪತಿ ರಾಜೀವ್ ರವಿ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದಾರೆ.
Bangalore [Bangalore],Bangalore,Karnataka
Jun 30, 2026 11:52 AM IST













