Last Updated:
ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ಬೆನ್ ಸ್ಟೋಕ್ಸ್ ನಿವೃತ್ತಿ ಹೊಂದುತ್ತಿದ್ದಾರೆ ಎಂದು ಘೋಷಣೆ ಮಾಡಿದೆ.
ಇಂಗ್ಲೆಂಡ್ ಕ್ರಿಕೆಟ್ ಟೆಸ್ಟ್ ತಂಡದ ಬೆನ್ ಸ್ಟೋಕ್ಸ್ ನಿವೃತ್ತಿ ಘೋಷಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ವೇಳೆ ಬೆನ್ ಸ್ಟೋಕ್ಸ್ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು ತಮ್ಮ 15 ವರ್ಷಗಳ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ಗುಡ್ ಬೈ ಹೇಳಿದ್ದಾರೆ. ಸ್ಟೋಕ್ಸ್ ಈಗಾಗಲೇ ಏಕದಿನ ಮತ್ತು ಟಿ20 ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು, ಇದೀಗ ಟೆಸ್ಟ್ ಕ್ರಿಕೆಟ್ಗೂ ನಿವೃತ್ತಿ ಘೋಷಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ, ಬೆನ್ ಸ್ಟೋಕ್ಸ್ ನಾಯಕತ್ವದಲ್ಲಿ ಇಂಗ್ಲೆಂಡ್ ಆಶಸ್‌ನಲ್ಲಿ ಆಡಿತ್ತು, ಆದರೆ ಇಂಗ್ಲೆಂಡ್ ಆಸ್ಟ್ರೇಲಿಯಾ ವಿರುದ್ಧ 4-1 ಅಂತರದ ಹೀನಾಯ ಸೋಲು ಅನುಭವಿಸಿತು. ಅಂದಿನಿಂದ, ಸ್ಟೋಕ್ಸ್ ಅವರ ನಾಯಕತ್ವದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಆದ್ರೆ, ನೈಟ್‌ಕ್ಲಬ್‌ನಲ್ಲಿ ವಿವಾದದ ನಂತರ, ಬೆನ್ ಸ್ಟೋಕ್ಸ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ 2019 ರ ರೋಮಾಂಚಕ ಫೈನಲ್‌ನಲ್ಲಿ ಅಜೇಯ 84 ರನ್ ಬಾರಿಸುವ ಮೂಲಕ ಬೆನ್ ಸ್ಟೊಕ್ಸ್, ಇಂಗ್ಲೆಂಡ್ ಮೊದಲ ODI ವಿಶ್ವಕಪ್ ಪ್ರಶಸ್ತಿಗೆ ಗೆಲುವಿದೆ ಕಾರಣವಾಗಿದ್ದರು. ಆರು ವಾರಗಳ ನಂತರ, ಹೆಡಿಂಗ್ಲಿಯಲ್ಲಿ ಅವರ ಅದ್ಭುತ ಅಜೇಯ 135 ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್‌ನ ಶ್ರೇಷ್ಠ ಆಶಸ್ ಗೆಲುವುಗಳಲ್ಲಿ ಒಂದಕ್ಕೆ ಸ್ಫೂರ್ತಿ ನೀಡಿತು. 2022 ರ T20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಗೆಲುವಿನಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಸ್ಟೋಕ್ಸ್ ತಮ್ಮ ವೃತ್ತಿಜೀವನದಲ್ಲಿ 122 ಟೆಸ್ಟ್ ಪಂದ್ಯಗಳನ್ನು, 114 ODI ಪಂದ್ಯಗಳನ್ನು ಮತ್ತು 43 T20I ಗಳನ್ನು ಆಡಿದ್ದಾರೆ.













