Nenapirali Prem: ಕೆಂಪೇಗೌಡರ ಲುಕ್​ನಲ್ಲಿ ಲವ್ಲಿ ಸ್ಟಾರ್; ಕೆಂಪಾಂಬುಧಿ ಸಿನಿಮಾದ ಮತ್ತೊಂದು ಲುಕ್ ಔಟ್! | | ACTPnews

Nenapirali Prem Kempaambudhi Movie Kempegowda New Look Out


ಲವ್ಲಿ ಸ್ಟಾರ್ ರಾಜನ ಲುಕ್

ಲವ್ಲಿ ಸ್ಟಾರ್ ಪ್ರೇಮ್ ಅವರು ಕನ್ನಡದ ಹ್ಯಾಂಡ್ಸ್‌ಮ್ ಹೀರೋ ಅನ್ನೋದು ಗೊತ್ತೇ ಇದೆ. ಆದರೆ, ರಾಜನಾಗಿ ಕಾಣಸಿಕೊಂಡಿರೋದು ಇಲ್ಲ ಅಂತ ಹೇಳಬಹುದು.
ಲವ್ಲಿ ಸ್ಟಾರ್ ರಾಜನ ಲುಕ್

ಆದರೆ, ರಮೇಶ್ ಬೇಗಾರ್ ಅವರು ಲವ್ಲಿ ಸ್ಟಾರ್ ಪ್ರೇಮ್ ಅವರಿಗೆ ಕೆಂಪೇಗೌಡರ ಪಾತ್ರವನ್ನೆ ಡಿಸೈನ್ ಮಾಡಿದ್ದಾರೆ. ಆದರೆ, ಈ ಚಿತ್ರಕ್ಕೆ ಜಾಣಗೆರೆ ವೆಂಕಟರಾಮಯ್ಯನವರು ಬರೆದ ಕಾದಂಬರಿ ಆಧಾರ ಇವೆ. ಇದನ್ನ ಆಧರಿಸಿಯೇ ಇಡೀ ಚಿತ್ರ ರೆಡಿ ಆಗಿದೆ.

ಕೆಂಪೇಗೌಡರನ್ನ ನೋಡಿದಂಗ್ಹೆ

ನೆನಪಿರಲಿ ಪ್ರೇಮ್ ಅವರು ಇಲ್ಲಿ ಈಗಾಗಲೇ ಹೇಳಿದಂತೆ ಕೆಂಪೇಗೌಡರ ಪಾತ್ರ ಮಾಡಿದ್ದಾರೆ. ಈ ಪಾತ್ರದಲ್ಲಿ ನಿಜಕ್ಕೂ ಪ್ರೇಮ್ ತುಂಬಾನೆ ಚೆನ್ನಾಗಿ ಕಾಣಿಸುತ್ತಿದ್ದಾರೆ.

ಈಗೀನ ಫೋಟೋ ವಿಶೇಷ ಏನು

ಕೆಂಪಾಂಬುಧಿ ಚಿತ್ರದ ಫೋಟೋ ವಿಶೇಷವಾಗಿಯೇ ಇವೆ. ಇದರಲ್ಲಿ ಪ್ರೇಮ್ ಸಿಟ್ಟಿನಿಂದಲೇ ನೋಡುತ್ತಿದ್ದಾರೆ. ಆದರೆ, ಇಲ್ಲಿ ಯುದ್ಧಕ್ಕೆ ಸಜ್ಜಾದ ರೀತಿ ಏನೂ ಇಲ್ಲ ನೋಡಿ.

ಇದು ಅರಮನೆಯಲ್ಲಿ ಪ್ರಜೆಗಳ ಭೇಟಿ ಆಗುವ ಸಮಯದ ರೀತಿನೇ ಕಾಣಿಸುತ್ತಿದೆ. ಇದರಲ್ಲಿಯೇ ಕೆಲವು ವೇರಿಯೇಷನ್ಸ್ ಇವೆ. ಅದನ್ನ ಈ ಕೆಲವು ಫೋಟೋಗಳಲ್ಲಿಯೇ ನೋಡಬಹುದು.

ವೀರ್‌ ಸಮರ್ಥ್ ಸಂಗೀತ

ಈ ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ ಕೊಟ್ಟಿದ್ದಾರೆ. ಕರ್ಮಷಿಲ್ ಚಿತ್ರಗಳಿಗೆ ಸಂಗೀತ ಕೊಡುವ ವೀರ್ ಸಮರ್ಥ್ ನಾಡ ಪ್ರಭುಗಳ ಈ ಚಿತ್ರಕ್ಕೆ ಮ್ಯೂಸಿಕ್ ಮಾಡಿದ್ದಾರೆ.

Nenapirali Prem Kempaambudhi Movie Kempegowda New Look Out

ಈಗೀನ ಫೋಟೋ ವಿಶೇಷ ಏನು

ಶಶೀರ್ ಶೃಂಗೇರಿ ಈ ಸಿನಿಮಾದ ಕ್ಯಾಮರಾವರ್ಕ್ ಮಾಡಿದ್ದಾರೆ. ಅಭಿಷೇಕ್ ಹೆಬ್ಬಾರ್ ಕಲಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಟೀಸರ್ ಪ್ರಾಮಿಸಿಂಗ್ ಆಗಿದೆ. ನಾಡಪ್ರಭುಗಳ ಕತೆ ಅಂದ್ಮೇಲೆ ಬೆಂಗಳೂರನ್ನ ಹೇಗೆಲ್ಲ ಕಟ್ಟಿದ್ದಾರೆ ಅನ್ನುವುದನ್ನ ಇದು ಕೊಟ್ಟಿಕೊಡುತ್ತಿದೆ.

ಕೆಂಪೇಗೌಡರು ದೂರದೃಷ್ಟಿ ಆಡಳಿತಗಾರರು

ಕೆಂಪೇಗೌಡರು ದೂರದೃಷ್ಟಿ ಅದ್ಭುತವಾಗಿಯೇ ಇತ್ತು. ಅದಕ್ಕೆನೇ ನೀರಿನ ಮೂಲಗಳಿಗಾಗಿಯೇ ಕೆರೆಕಟ್ಟೆಗಳನ್ನ ಕಟ್ಟಿದರು. ಪರಿಸರದ ಮಹತ್ವ ಇವರಿಗೆ ಆಗಲೇ ತಿಳಿದಿತ್ತು. ಹಾಗೆ ನಾಡಪ್ರಭು ಕೆಂಪೇಗೌಡರ ಚಿಂತನೆಗಳು ಇಂದಿಗೂ ಬೆಂಗಳೂರಿನ ಅಸ್ತಿತ್ವದ ಅವಿಭಾಜ್ಯ ಭಾಗವಾಗಿವೆ.

ಹಸಿರು ವೈಭವ ನೆನಪಿಸೋ ಚಿತ್ರ

ಕೆಂಪಾಂಬುಧಿ ಚಿತ್ರವು ಗಾರ್ಡನ್ ಸಿಟಿಯ ಹಸಿರು ವೈಭವವನ್ನ ನೆನಪಿಸುವ ಕೆಲಸವನ್ನು ಮಾಡುತ್ತದೆ. ಪರಿಸರ ಸಂರಕ್ಷಣೆ ಹಾಗೂ ಬೆಂಗಳೂರು ನಗರವನ್ನ ಕಟ್ಟಿದ ಮೂಲ ಮೌಲ್ಯಗಳ ಕಡೆಗೆ ಸಮಾಜದ ಗಮನ ಸೆಳೆಯುವ ಕೆಲಸವನ್ನು ಈ ಚಿತ್ರ ಮಾಡಲಿದೆ.

ಸದ್ಯಕ್ಕೆ ಈ ಸಿನಿಮಾದ ಟೀಸರ್ ಮಾತ್ರ ರಿಲೀಸ್ ಆಗಿದೆ. ಒಂದು ಭವ್ಯ ಚಿತ್ರದಂತೆನೂ ಇದು ಕಾಣಿಸುತ್ತಿದೆ. ಒಳ್ಳೆ ಕಲಾವಿದರು, ಒಳ್ಳೆ ಟೆಕ್ನಿಷನ್‌ಗಳು ಈ ಚಿತ್ರಕ್ಕಾಗಿಯೇ ಕೆಲಸ ಮಾಡಿದ್ದಾರೆ.

ಇದು ಚಿತ್ರದ ಟೀಸರ್ ಅಲ್ಲಿಯೇ ಕಾಣಿಸುತ್ತಿದೆ. ಈ ಚಿತ್ರಕ್ಕೆ ಹೋಂಬಾಳೆ ಮ್ಯೂಸಿಕ್ ಸಹಯೋಗ ನೀಡಿದೆ. ಪ್ರಶಾಂತ್ ಪ್ರಕಾಶ್ ಫ್ಯಾಮಿಲಿ ಫೌಂಡೇಶನ್‌ ಈ ಚಿತ್ರವನ್ನ ಪ್ರಸ್ತುತ ಪಡಿಸುತ್ತಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports