Vaibhav Sooryavanshi: ‘ಮೊದಲ ಪಂದ್ಯದಲ್ಲಿ ಸೂರ್ಯವಂಶಿ ಕೈಬಿಟ್ಟಿದ್ದು ಒಳ್ಳೆದಾಯ್ತು’! ಅಚ್ಚರಿ ಹೇಳಿಕೆ ಕೊಟ್ಟ ಮಾಜಿ ಕ್ರಿಕೆಟಿಗ! | | ACTPnews

ವೈಭವ್​ ಸೂರ್ಯವಂಶಿ


Last Updated:

ಕೋಚ್ ಮತ್ತು ಕ್ಯಾಪ್ಟನ್ ನಿರ್ಧಾರದ ವಿರುದ್ಧ ಫ್ಯಾನ್ಸ್ ಕಿಡಿಕಾರುತ್ತಿದ್ದಾರೆ. ಹೀಗಿರುವಾಗಲೇ ಬೆಂಕಿಗೆ ತುಪ್ಪ ಸುರಿಯುವಂತೆ ಮಾಜಿ ಕ್ರಿಕೆಟಿಗರೊಬ್ಬರು ವೈಭವ್ ಅವರನ್ನು ಆಡಿಸದೇ ಇದ್ದದ್ದು ಒಳ್ಳೆಯ ನಿರ್ಧಾರ ಎಂದು ಪೋಸ್ಟ್ ಮಾಡಿ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ವೈಭವ್​ ಸೂರ್ಯವಂಶಿ
ವೈಭವ್​ ಸೂರ್ಯವಂಶಿ

ಐರ್ಲೆಂಡ್​ ವಿರುದ್ಧ ವೈಭವ್​ ಸೂರ್ಯವಂಶಿ (Vaibhav Sooravashi) ಪದಾರ್ಪಣೆ ಮಾಡ್ತಾರೆ ಅಂತಾ ಕಾತುರದಿಂದ ಕಾಯ್ತಿದ್ರು. ಆದ್ರೆ, ಐರ್ಲೆಂಡ್ (Ireland) ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ವೈಭವ್​ಗೆ ಆಡಲು ಅವಕಾಶ ಸಿಗಲಿಲ್ಲ, ಇದರಿಂದ ಅಭಿಮಾನಿಗಳು ಆಕ್ರೋಶ ಹೊರಹಾಕ್ತಿದ್ದಾರೆ. ಕೋಚ್​ ಮತ್ತು ಕ್ಯಾಪ್ಟನ್​​ ನಿರ್ಧಾರದ ವಿರುದ್ಧ ಫ್ಯಾನ್ಸ್​ ಕಿಡಿಕಾರುತ್ತಿದ್ದಾರೆ. ಹೀಗಿರುವಾಗಲೇ ಬೆಂಕಿಗೆ ತುಪ್ಪ ಸುರಿಯುವಂತೆ ಮಾಜಿ ಕ್ರಿಕೆಟಿಗರೊಬ್ಬರು (Ex-Cricketer) ವೈಭವ್​ ಅವರನ್ನು ಆಡಿಸದೇ ಇದ್ದದ್ದು ಒಳ್ಳೆಯ ನಿರ್ಧಾರ ಎಂದು ಪೋಸ್ಟ್​ ಮಾಡಿ ಕ್ರಿಕೆಟ್​ ಅಭಿಮಾನಿಗಳ (Cricket Fans) ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅವರನ್ನು ಆಡಿಸದಿರಲು ತೆಗೆದುಕೊಂಡ ನಿರ್ಧಾರವನ್ನು ಸಂಜಯ್ ಮಂಜ್ರೇಕರ್ ಬೆಂಬಲಿಸಿದ್ದಾರೆ. ಡ್ರೆಸ್ಸಿಂಗ್ ರೂಮ್​ನಲ್ಲಿ ಶಾಂತಿ ಮತ್ತು ಸಾಮರ್ಥ್ಯಕ್ಕೆ ಆದ್ಯತೆ ನೀಡಬೇಕು ಎಂದು ಹೇಳುವ ಮೂಲಕ ಅವರು ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಆದ್ರೆ ಭಾರತದ ಸೋಲಿನ ನಂತರ, ಅಭಿಮಾನಿಗಳು ಮಾಜಿ ಕ್ರಿಕೆಟಿಗನ ಅಭಿಪ್ರಾಯಕ್ಕೆ ಆಕ್ರೋಶ ಹೊರಹಾಕಿದ್ದಾರೆ.

ಇನ್ನು, ಟಾಸ್​ ವೇಳೆ ವೈಭವ್​ ಬಗ್ಗೆ ಉತ್ತರಿಸಿದ ಅಯ್ಯರ್, ಈ ವಿಷಯವನ್ನ ಹೆಚ್ಚು ಎಳೆದಾಡುವ ಅಗತ್ಯವಿಲ್ಲ. ವೈಭವ್ ಸೂರ್ಯವಂಶಿ ಈ ಪಂದ್ಯದಲ್ಲಿ ಆಡುತ್ತಿಲ್ಲ. ಸಮಯ ಬಂದಾಗ ಅವರಿಗೆ ಖಂಡಿತವಾಗಿಯೂ ಅವಕಾಶ ಸಿಗುತ್ತದೆ. ತಂಡದಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಆಟಗಾರರನ್ನ ಕಡೆಗಣಿಸಲು ಸಾಧ್ಯವಿಲ್ಲ ಎಂದರು. ಈ ಪಂದ್ಯದಲ್ಲಿ ನಾವು ಮೂವರು ತಜ್ಞ ವೇಗಿಗಳು ಮತ್ತು ಒಬ್ಬ ಆಲ್‌ರೌಂಡರ್ ಅನ್ನು ಫೀಲ್ಡಿಂಗ್ ಮಾಡುತ್ತಿದ್ದೇವೆ” ಎಂದು ಶ್ರೇಯಸ್ ಅಯ್ಯರ್ ಹೇಳಿದ್ದರು.
ಮೊದಲ ಬಾರಿಗೆ ಐರ್ಲೆಂಡ್​ ವಿರುದ್ಧ ಸೋತ ಭಾರತ  

ಬೆಲ್‌ಫಾಸ್ಟ್‌ನಲ್ಲಿ ಐರ್ಲೆಂಡ್ ಮತ್ತು ಭಾರತ ನಡುವೆ ಮೊದಲ ಟಿ20 ಪಂದ್ಯ ನಡೆಯಿತು. ಈ ರೋಚಕ ಪಂದ್ಯದಲ್ಲಿ ಭಾರತ ತಂಡವು 34 ರನ್‌ಗಳ ಹೀನಾಯ ಸೋಲನ್ನು ಅನುಭವಿಸಿತು. ಕ್ರಿಕೆಟ್ ಕೂಸು ಐರ್ಲೆಂಡ್ ವಿಶ್ವ ಚಾಂಪಿಯನ್ ಭಾರತ ತಂಡವನ್ನು 34 ರನ್‌ಗಳಿಂದ ಬೃಹತ್ ಅಂತರದಿಂದ ಸೋಲಿಸುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ.  ಟೀಮ್ ಇಂಡಿಯಾ ಐರ್ಲೆಂಡ್ ತಂಡವನ್ನು ಸುಲಭವಾಗಿ ಸೋಲಿಸಿ ಟಿ20 ಸರಣಿ ಗೆಲ್ಲುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಐರ್ಲೆಂಡ್ ತಂಡ ಭಾರತಕ್ಕೆ ಮರೆಯಲಾಗದ ಸೋಲನ್ನು ನೀಡಿತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed