Last Updated:
ಕಾಟೇರ ಚಿತ್ರದ ನಾಯಕಿ ಆರಾಧನಾ ಮಸ್ತ್ ಆಗಿಯೇ ಕಾಣಿಸುತ್ತಿದ್ದಾರೆ. ಅಮೆರಿಕನ್ ಸ್ಟ್ರೀಟ್ ಸ್ಟೈಲ್ ಅಲ್ಲಿಯೇ ಹೊಳೆಯುತ್ತಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಆರಾಧನಾ (Aradhanaa) ಸಖತ್ ಆಗಿಯೇ ಕಾಣಿಸುತ್ತಿದ್ದಾರೆ. ತಲೆ ಮೇಲೆ ಕ್ಯಾಪ್ (Cap) ಇದೆ. ಓಪನ್ ಹೇರ್ ಬಿಟ್ಟಿದ್ದಾರೆ. ಇದಕ್ಕೆ ಮ್ಯಾಚ್ ಆಗುವ ರೀತಿಯ ಜಾಕೆಟ್ (Jacket) ಹಾಕಿದ್ದಾರೆ. ತಿಳಿ ಬಣ್ಣದ ಕ್ರಾಪ್ ಟಾಪ್ (Crop Top) ಧರಿಸಿದ್ದಾರೆ. ಈ ಎಲ್ಲ ಲುಕ್ಗೆ ಸೂಕ್ತ ಅನಿಸೋ ಲೈಟಿಂಗ್ ಇದೆ. ಈ ರೀತಿಯ ತಯಾರಿಯಲ್ಲಿ ತೆಗೆಸಿಕೊಂಡಿರೋ ಫೋಟೋ ಚೆನ್ನಾಗಿ ಬಂದಿದೆ. ನೋಡಿದವರು ಹಾರ್ಟ್ ಇಮೋಜಿಯನ್ನ ಸಾಲು ಸಾಲಾಗಿಯೇ ಹಾಕಿದ್ದಾರೆ. ಇನ್ನು ಸುಮಾರು ವಿಚಾರ ಇದೆ. ಅದರ ವಿವರ ಇಲ್ಲಿದೆ ಓದಿ.
ಕಾಟೇರ ನಾಯಕಿ ಮಸ್ತ್ ಲುಕ್
(ಚಿತ್ರ ಕೃಪೆ: ಆರಾಧನಾ ಇನ್ಸ್ಟಾಗ್ರಾಮ್)
ಆದರೆ, ಬೇಸ್ಬಾಲ್ ಆಡುವ ಟಾಮ್ ಬಾಯ್ ಲುಕ್ ಇರಲಿಲ್ಲ. ಅದನ್ನು ಆರಾಧನಾ ಇಲ್ಲಿ ಟ್ರೈ ಮಾಡಿದ್ದಾರೆ. ಅದು ಯುವ ನಟಿ ಆರಾಧನಾ ಅವರಿಗೆ ಸೂಕ್ತ ಅನಿಸುತ್ತಿದೆ.
ಆರಾಧನಾ ಅವರು ಹಾಕಿರೋ ಕ್ಯಾಪ್ ಇಂಟ್ರಸ್ಟಿಂಗ್ ಆಗಿದೆ. ಇದು ಬೇಸ್ಬಾಲ್ ಕ್ಯಾಪ್ ಹಾಕಿದ್ದಾರೆ. ಮರೂನ್ ಹಾಗೂ ಪಿಂಕ್ ಬಣ್ಣ ಇದರಲ್ಲಿದೆ.
ಈ ಒಂದು ಲುಕ್ ಅಲ್ಲಿ ಆರಾಧನಾ ಜಾಕೆಟ್ ಧರಿಸಿದ್ದಾರೆ. ಇದು ಇವರಿಗೆ ಬೇರೆ ಲುಕ್ ಕೊಟ್ಟಿದೆ. ಒಳಗೆ ಕ್ರಾಪ್ ಟಾಪ್ ಹಾಕಿದ್ದಾರೆ. ಹಾಗೆ ಇದಕ್ಕೆ ಒಪ್ಪುವ ಶಾರ್ಟ್ಸ್ ಕೂಡ ಹಾಕಿದ್ದಾರೆ.
ಇದು ಕೂಡ ಇವರಿಗೆ ಬೇರೆ ಲುಕ್ ತಂದು ಕೊಟ್ಟಿದೆ.ಇಲ್ಲಿ ಇನ್ನೂ ಒಂದು ಗಮನ ಸೆಳೆಯುತ್ತದೆ. ಅದು ಆರಾಧನಾ ಅವರ ಹೇರ್ ಸ್ಟೈಲ್ ಅಂತ ಹೇಳಬಹುದು.
ಆರಾಧನಾ ಅವರು ಇಲ್ಲಿ ತಮ್ಮ ಹೇರ್ ಸ್ಟೈಲ್ ಚೇಂಜ್ ಮಾಡಿಸಿದ್ದಾರೆ. ಕಂದು ಬಣ್ಣ ಹಚ್ಚಿಕೊಂಡು ಬೇರೆ ರೀತಿ ಕಾಣಿಸುತ್ತಿದ್ದಾರೆ.
ಕಾಟೇರ ಚಿತ್ರದ ನಾಯಕಿಯ ಮಸ್ತ್ ಲುಕ್
(ಚಿತ್ರ ಕೃಪೆ: ಆರಾಧನಾ ಇನ್ಸ್ಟಾಗ್ರಾಮ್)
ಬಣ್ಣ ಹಚ್ಚಿದ ಹೇರ್ಗಳು ವೇವ್ಸ್ ರೀತಿನೇ ಇವೆ. ಆದರೆ, ಇವರು ಮುಕ್ತ ಮುಕ್ತವಾಗಿಯೇ ಇವೆ. ಇಷ್ಟೆಲ್ಲ ತಯಾರಿ ಮಾಡಿಕೊಂಡೇ ಆರಾಧನಾ ಫೋಟೋ ಶೂಟ್ ಮಾಡಿಸಿದ್ದಾರೆ.
ಈ ಒಂದು ಫೋಟೋ ಶೂಟ್ನ ಲೈಟಿಂಗ್ ಗೋಲ್ಡನ್ ಆಗಿದೆ. ಹಾಗಾಗಿಯೇ ಆರಾಧನಾ ಅವರ ಇಡೀ ಲುಕ್ ಇನ್ನಷ್ಟು ಇಂಟ್ರಸ್ಟಿಂಗ್ ಆಗಿಯೇ ಕಾಣಿಸುತ್ತಿದೆ.
ಆರಾಧನಾ ಸದ್ಯ ಒಂದು ಚಿತ್ರ ಒಪ್ಪಿದ್ದಾರೆ. ಈ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಆರಾಧನಾ ಜೋಡಿ ಆಗಿದ್ದಾರೆ. ಬಹು ವೆಚ್ಚದ ಈ ಸಿನಿಮಾ ಪ್ಯಾನ್ ಇಂಡಿಯಾ ಚಿತ್ರವೇ ಆಗಿದೆ.
ಈ ಚಿತ್ರವನ್ನ ಅರವಿಂದ್ ಕೌಶಿಕ್ ಡೈರೆಕ್ಷನ್ ಮಾಡುತ್ತಿದ್ದಾರೆ. ನೆಕ್ಸ್ಟ್ ಲೆವೆಲ್ ಅಂತಲೇ ಈ ಚಿತ್ರಕ್ಕೆ ಶೀರ್ಷಿಕೆ ಇಟ್ಟಿದ್ದಾರೆ. ಈ ಚಿತ್ರವನ್ನ ತರುಣ್ ಶಿವಪ್ಪ ನಿರ್ಮಾಣ ಮಾಡುತ್ತಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka
Jun 27, 2026 10:38 PM IST













