Newly Married: ಕೋತಿಗಳ ಭಯ, ದೇವಸ್ಥಾನದ ಬೆಟ್ಟದ ಮೇಲಿಂದ ಕಂದಕ್ಕೆ ಬಿದ್ದು ಕೊನೆಯುಸಿರೆಳೆದ ನವವಧು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಅನಿತಾ, ಮೃತ ದುರ್ದೈವಿ


Last Updated:

Newlywed Bride: ಹೊಸದಾಗಿ ಮದುವೆಯಾಗಿತ್ತು. ಪತಿ-ಪತ್ನಿ ಇಬ್ಬರೂ ಜೊತೆಯಾಗಿ ದೇವಾಲಯಕ್ಕೆ ಆಗಮಿಸಿದ್ದರು. ಆದರೆ ಅಲ್ಲಿ ಇದ್ದ ಕೋತಿಗಳಿಗೆ ಆಹಾರ ನೀಡಲು ಹಣ್ಣುಗಳನ್ನು ತಂದಿದ್ದರು. ದೇವಸ್ಥಾನದಲ್ಲಿ ಪ್ರತ್ಯೇಕ ಪೂಜೆಗಳನ್ನು ಏರ್ಪಡಿಸಿದ್ದರು. ಈ ಸಮಯದಲ್ಲಿ ದುರಂತ ಸಂಭವಿಸಿದೆ.

ಅನಿತಾ, ಮೃತ ದುರ್ದೈವಿ
ಅನಿತಾ, ಮೃತ ದುರ್ದೈವಿ

ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ (Tamil Nadu) ಶನಿವಾರ ದುರಂತದ ಘಟನೆ ನಡೆದಿದ್ದು, ದೇವರ ದರ್ಶನಕ್ಕೆ (Temple) ಪತಿಯೊಂದಿಗೆ (Husband and Wife) ಬಂದಿದ್ದ ಯುವತಿ ಕಾಲು ಜಾರಿ ಬಿದ್ದು ನವವಧು ಸಾವನ್ನಪ್ಪಿದ್ದಾರೆ. ದೇವಸ್ಥಾನದ ಬಳಿ ಇದ್ದ ಕೋತಿಗಳ ಗುಂಪು ಏಕಾಏಕಿ ಯುವತಿಯನ್ನು ಸುತ್ತುವರಿದ ಕಾರಣ ನವವಧು ಆತಂಕಗೊಂಡು, ಬೆಟ್ಟದ (Hill) ಮೇಲಿಂದ ಕೆಳಕ್ಕೆ ಬಿದ್ದು ಜೀವನ ಕಳೆದುಕೊಂಡಿದ್ದಾಳೆ. ಮದುವೆಯಾದ ಕೇವಲ ಒಂದೇ ತಿಂಗಳಿಗೆ ದುರಂತ ಸಂಭವಿಸಿದ್ದು, ಕುಟುಂಬದಲ್ಲಿ (Family) ದುಃಖ ಮನೆ ಮಾಡಿದೆ.

ದೇವರ ದರ್ಶನಕ್ಕೆ ಬಂದಾಗ ದುರಂತ!

ಪೊಲೀಸರು ಮಾಧ್ಯಮದವರಿಗೆ ನೀಡಿರುವ ಮಾಹಿತಿ ಅನ್ವಯ, ತೂತುಕುಡಿ ಜಿಲ್ಲೆಯ ವ್ಯಾಪ್ತಿಯ ಸೌತ್ ತಿಟ್ಟಾಂಕುಳಂ ನಿವಾಸಿಯಾದ 24 ವರ್ಷದ ಅನಿತಾ, ಇದೇ ಜಿಲ್ಲೆಯ 29 ವರ್ಷದ ಸುರೇಶ್ ಎಂಬ ಯುವಕನೊಂದಿಗೆ ಕಳೆದ ಒಂದು ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸುರೇಶ್ ವಿದೇಶದಲ್ಲಿ ಕೆಲಸ ಮಾಡುತ್ತಿದ್ದರೆ, ಮದುವೆ ಮಾಡಿಕೊಳ್ಳಲು ಸ್ವಗ್ರಾಮಕ್ಕೆ ಆಗಮಿಸಿದ್ದರು. ಮದುವೆಯಾದ ಬಳಿಕ ನವದಂಪತಿ ಶನಿವಾರ ವಿಶೇಷ ಪೂಜೆ ನಡೆಸಲು ದೇವಾಲಯಕ್ಕೆ ಆಗಮಿಸಿದ್ದರು. ದೇವಾಲಯದಲ್ಲಿ ವಿಶೇಷ ಪೂಜೆ ನಡೆಸಿದ ಬಳಿಕ ಬೆಟ್ಟದ ಮೇಲೆ ಇರುವ ಉಚ್ಚಿಪ್ಪಿಳ್ಳಯಾರ್ ಸ್ವಾಮಿ ಅವರ ಸನ್ನಿಧಿಯನ್ನು ದರ್ಶನಕ್ಕಾಗಿ ಮೆಟ್ಟಿಲು ಮಾರ್ಗದ ಮೂಲಕ ಮೇಲಕ್ಕೆ ತಲುಪಿದರು.

ಕೋತಿಗಳ ಗುಂಪು ಸುತ್ತುವರಿದ ಕಾರಣ ಆತಂಕ

ಬೆಟ್ಟದ ಮೇಲೆ ಇರುವ ಸನ್ನಿಧಿಗೆ ತೆರಳಿದ ಸಂದರ್ಭದಲ್ಲಿ ಕೋತಿಗಳಿಗೆ ತಮ್ಮ ಬಳಿ ಇದ್ದ ಹಣ್ಣುಗಳನ್ನು ನೀಡಲು ಆರಂಭಿಸಿದ್ದರಂತೆ. ಆದರೆ ಆಹಾರಕ್ಕಾಗಿ ಅಲ್ಲಿದ್ದ ಎಲ್ಲಾ ಕೋತಿಗಳು ಏಕಕಾಲದಲ್ಲಿ ದೊಡ್ಡ ಸಂಖ್ಯೆಯಲ್ಲಿ ಅವರ ಕಡೆಗೆ ಬಂದ ಕಾರಣ ಆಕೆ ತೀವ್ರವಾಗಿ ಆತಂಕಕ್ಕೆ ಒಳಗಾಗಿದ್ದರು.

ಕೋತಿಗಳು ಒಟ್ಟಿಗೆ ಬಂದ ಹಿನ್ನೆಲೆಯಲ್ಲಿ ಆತಂಕಕ್ಕೆ ಒಳಗಾಗಿ ಆಕೆ ಬೆಟ್ಟದ ಮೇಲಿಂದ ಕಾಲು ಜಾರಿ ಪ್ರಪಾತಕ್ಕೆ ಬಿದ್ದಿದ್ದಾರೆ. ನೂರಾರು ಅಡಿ ಪ್ರಪಾತಕ್ಕೆ ಬಿದ್ದ ಕಾರಣ ಯುವತಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ. ಪತಿಯ ಎದುರೇ ಪತ್ನಿ ಪ್ರಪಾತಕ್ಕೆ ಬಿದ್ದಿದ್ದು, ಹೆಂಡತಿಯನ್ನು ಕಳೆದುಕೊಂಡು ಪತಿ ರೋಧಿಸುತ್ತಿದ್ದ ದೃಶ್ಯಗಳು ಅಲ್ಲಿ ನೆರೆದಿದ್ದ ಜನರ ಕಣ್ಣಿನಲ್ಲೂ ನೀರು ತರಿಸಿತ್ತು.

ಇದನ್ನೂ ಓದಿ: Gold Prices Soar: 2035ರಲ್ಲಿ ಒಂದು ಗ್ರಾಂ ಚಿನ್ನದ ಬೆಲೆ ಎಷ್ಟಿರುತ್ತೆ ಗೊತ್ತಾ? ತಜ್ಞರು ನುಡಿದ ಭವಿಷ್ಯ ಇಲ್ಲಿದೆ!

ಘಟನೆ ಕುರಿತಂತೆ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು ಆಗಮಿಸಿ ಮೃತದೇಹ ಹೊರತೆಗೆದಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಕೋತಿಗಳು ಒಟ್ಟಿಗೆ ಸುತ್ತುವರಿದ ಕಾರಣ ಆಕೆ ತೀವ್ರ ಆತಂಕಕ್ಕೆ ಒಳಗಾಗಿದ್ದರು. ಆದ್ದರಿಂದಲೇ ಬ್ಯಾಲೆನ್ಸ್ ತಪ್ಪಿ ಕೆಳಕ್ಕೆ ಬಿದ್ದರು ಎಂಬ ಮಾಹಿತಿ ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದು ಬಂದಿದೆ. ಈ ಘಟನೆ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಿದ್ದೇವೆ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೇ ಪ್ರವಾಸಿಗರು ಬೆಟ್ಟ, ಕಾಡು ಹಾಗೂ ಇತರೇ ಪ್ರವಾಸಿ ಸ್ಥಳಗಳಲ್ಲಿ ಜನರು ಆಹಾರ ನೀಡುವ ಸಂದರ್ಭದಲ್ಲಿ ಎಚ್ಚರಿಕೆಯನ್ನು ವಹಿಸಬೇಕು ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed