Last Updated:
ತಮ್ಮ 15 ತಿಂಗಳ ಮೊಮ್ಮಗಳು ಇವಾರಾ ಪ್ರತಿದಿನ ಬೆಳಗ್ಗೆ ಪ್ರಧಾನಿ ಮೋದಿ ಅವರ ಫೋಟೋಗೆ ಸಿಹಿ ಅರ್ಪಿಸುತ್ತಾಳೆ ಎಂದು ಸುನೀಲ್ ಶೆಟ್ಟಿ ಹೇಳಿರುವ ಮಾತುಗಳು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿವೆ.
ಬಾಲಿವುಡ್ ಹಿರಿಯ ನಟ ಸುನೀಲ್ ಶೆಟ್ಟಿ (Suniel Shetty) , ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಬಗ್ಗೆ ತಮ್ಮ ಅಭಿಮಾನವನ್ನು ಹಲವು ಬಾರಿ ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದಾರೆ. ಆದರೆ ಈ ಬಾರಿ ತಮ್ಮ 15 ತಿಂಗಳ ಮೊಮ್ಮಗಳು ಇವಾರಾ ಪ್ರತಿದಿನ ಬೆಳಗ್ಗೆ ಪ್ರಧಾನಿ ಮೋದಿ ಅವರ ಫೋಟೋಗೆ ಸಿಹಿ ಅರ್ಪಿಸುತ್ತಾಳೆ ಎಂದು ಸುನೀಲ್ ಶೆಟ್ಟಿ ಹೇಳಿರುವ ಮಾತುಗಳು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿವೆ.
ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಸುನೀಲ್ ಶೆಟ್ಟಿ ತಮ್ಮ ಕುಟುಂಬದ ಕುರಿತಾದ ಒಂದು ಅಪರೂಪದ ಘಟನೆಯನ್ನು ಹಂಚಿಕೊಂಡಿದ್ದಾರೆ . ತಮ್ಮ ಮೊಮ್ಮಗಳು ಇವಾರಾಗೆ ಈಗ 15 ತಿಂಗಳು ವಯಸ್ಸಾಗಿದ್ದು, ಕೆಲವು ತಿಂಗಳ ಹಿಂದೆ ವಿಮಾನ ನಿಲ್ದಾಣದಲ್ಲಿ ಇದ್ದಾಗ ಅಲ್ಲಿನ ಸಿಬ್ಬಂದಿಯೊಬ್ಬರು ಮಗುವಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ತೋರಿಸಿದ್ದರು. ಆ ಕ್ಷಣದಿಂದಲೇ ಮಗುವಿಗೆ ಮೋದಿ ಅವರ ಬಗ್ಗೆ ವಿಶೇಷ ಕುತೂಹಲ ಬೆಳೆದಿದೆ ಎಂದು ಅವರು ತಿಳಿಸಿದ್ದಾರೆ.
Sunil Shetty revealed that his 15‑month‑old granddaughter has a picture of Narendra Modi in a book next to Sai Baba. She performs Modi’s pooja, even offering laddus to his photo from a Ganesh Ji mandir because he is seen as divine. This shows just how far Bollywood has fallen pic.twitter.com/wTxfc5OdGa
— r (@bekhayalime) June 26, 2026
ಹಾಗೆಯೇ ಇವಾರಾ ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಮನೆಯಲ್ಲಿರುವ ಸಾಯಿಬಾಬಾ ಪುಸ್ತಕವನ್ನು ತೆರೆಯುತ್ತಾಳೆ. ಆ ಪುಸ್ತಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಕೂಡ ಇದ್ದು, ಅದನ್ನು ನೋಡಿದ ತಕ್ಷಣ ‘ಮೋದಿ ಜಿ, ಮೋದಿ ಜಿ’ ಎಂದು ಕರೆಯುತ್ತಾಳೆ. ನಂತರ ಮನೆಯಲ್ಲಿರುವ ಗಣಪತಿ ಮೂರ್ತಿಯ ಬಳಿ ಇರುವ ಸಿಹಿಯನ್ನು ತೆಗೆದುಕೊಂಡು ಬಂದು ಮೋದಿ ಅವರ ಫೋಟೋ ಮುಂದೆ ಇಡುವುದು ಆಕೆಯ ಪ್ರತಿದಿನದ ಅಭ್ಯಾಸವಾಗಿದೆ ಎಂದು ಸುನೀಲ್ ಶೆಟ್ಟಿ ವಿವರಿಸಿದ್ದಾರೆ.
ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ಸುನೀಲ್ ಶೆಟ್ಟಿ, ತಾವು ಯಾವುದೇ ರಾಜಕೀಯ ಪಕ್ಷದ ಪರವಾಗಿ ಮಾತನಾಡುತ್ತಿಲ್ಲ ಎಂದು ತಿಳಿಸಿದ್ದಾರೆ. ಬದಲಾಗಿ, ದೇಶದ ನಾಯಕನಾಗಿ ನರೇಂದ್ರ ಮೋದಿ ಅವರ ವ್ಯಕ್ತಿತ್ವ ಮತ್ತು ನಾಯಕತ್ವದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
Bangalore [Bangalore],Bangalore,Karnataka













