Last Updated:
ವಾರಗಳಿಂದ ನಟಿಯ ಅಪಾರ್ಟ್ಮೆಂಟ್ನಲ್ಲೇ ಇದ್ದ ಉದ್ಯಮಿ ವೈಶಾಕ್ ರಾತ್ರಿ ಕೃಷಿ ತಾಪಂಡಗೆ ಸೂಸೈಡ್ ಮಾಡಿಕೊಳ್ಳೋದಾಗಿ ಮೆಸೇಜ್ ಹಾಗೂ ಕರೆ ಮಾಡಿ ಸಾವಿಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. ಯಾರ ವಿರುದ್ಧ ದಾಖಲಾಗಿದೆ ಕೇಸ್?
ಬೆಂಗಳೂರು (ಜೂ.25): ನಟಿ ಕೃಷಿ ತಾಪಂಡ (Krishi Thapanda) ಮನೆಯಲ್ಲೇ ಗೆಳೆಯ ಹಾಗೂ ವೈಶಾಕ್ ಜೂನ್ 24ರ ರಾತ್ರಿ ಆತ್ಮಹತ್ಯೆಗೆ (Suicide) ಶರಣಾಗಿದ್ದಾನೆ. ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು (Police) ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ನಟಿ ಕೃಷಿ ತಾಪಂಡ ಅವರಿಗೆ ಸೇರಿದ ಅಪಾರ್ಟ್ಮೆಂಟ್ನಲ್ಲಿ ಉದ್ಯಮಿ ಆತ್ಮಹತ್ಯೆಗೆ ಶರಣಾಗಿದ್ದು, ನಾನಾ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ವಾರಗಳಿಂದ ನಟಿಯ ಅಪಾರ್ಟ್ಮೆಂಟ್ನಲ್ಲೇ ಇದ್ದ ಉದ್ಯಮಿ ವೈಶಾಕ್ ರಾತ್ರಿ ಕೃಷಿ ತಾಪಂಡಗೆ ಸೂಸೈಡ್ ಮಾಡಿಕೊಳ್ಳೋದಾಗಿ ಮೆಸೇಜ್ ಹಾಗೂ ಕರೆ ಮಾಡಿ ಸಾವಿಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂಬಂಧ ವೈಶಾಕ್ ಕುಟುಂಬದಿಂದಲೂ ಲಿಖಿತ ದೂರು ದಾಖಲಾಗಿದೆ. ವೈಶಾಕ್ ಪತ್ನಿ ಕೂಡ ದೂರು ನೀಡಿದ್ದಾರೆ ಎನ್ನಲಾಗ್ತಿದೆ.
ವೈಶಾಕ್ ತಂದೆ ಮಗನ ಆತ್ಮಹತ್ಯೆ ಎಂದು ಲಿಖಿತ ದೂರು ನೀಡಿದ್ದಾರೆ. ಸದ್ಯಕ್ಕೆ ಯಾರ ವಿರುದ್ಧವೂ ಆರೋಪ ಮಾಡಿಲ್ಲ ಎಂದು ತಿಳಿದು ಬಂದಿದೆ. ದೂರಿನ ಬಳಿಕ ಕೇಸ್ ದಾಖಲು ಮಾಡಿಕೊಂಡ ರಾಜರಾಜೇಶ್ವರಿ ನಗರ ಪೊಲೀಸರು, ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹ ಹಸ್ತಾಂತರ ಮಾಡಲಿದ್ದಾರೆ.
ಏನು ದೂರು ಕೊಡ್ತಾರೆ ಅನ್ನೋದರ ಮೇಲೆ ಪೊಲೀಸರು ತನಿಖೆ ನಡೆಸಲಿದ್ದಾರೆ. ಕೃಷಿ ತಾಪಂಡ ಗೆಳೆಯ ವೈಶಾಕ್ ಆತ್ಮಹತ್ಯೆ ಕೇಸ್ನಲ್ಲಿ ಈಗಾಗಲೇ ಯುಡಿ ಆರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವೈಶಾಕ್ ಪತ್ನಿ ನೀಡಿರುವ ದೂರಿನ ಮೇರೆಗೆ ಯುಡಿಆರ್ ದಾಖಲಿಸಲಾಗಿದೆ.
(ವರದಿ: ಮಂಜುನಾಥ್, ನ್ಯೂಸ್18 ಕನ್ನಡ, ಬೆಂಗಳೂರು)













