Krishi Thapanda: ವೈಶಾಕ್​ ಸಂಸಾರದಲ್ಲಿ ಬಿರುಕು ಮೂಡಿಸಿದ್ಯಾರು? ನಟಿ ಕೃಷಿ ತಾಪಂಡ ಮಾಜಿ ಬಾಯ್​ಫ್ರೆಂಡ್ ಬೆದರಿಕೆಗೆ ನೊಂದ ಉದ್ಯಮಿ! | | ACTPnews

News18


Last Updated:

ಎವಿಆರ್ ಗ್ರೂಪ್ ಮಾಲೀಕನ ಕೇಸ್ ನಂತರ ಉದ್ಯಮಿ ವೈಶಾಖ್​ ಹಾಗೂ ಪತ್ನಿ ನಡುವೆ ಜಗಳ ಜಾಸ್ತಿಯಾಗಿತ್ತಂತೆ. ವೈಶಾಕ್​ನನ್ನ ಕೃಷಿ ತಪಂಡಾ ಮನೆಯಲ್ಲೇ ಹೆಚ್ ಎಎಲ್ ಪೊಲೀಸರು ಅರೆಸ್ಟ್ ಮಾಡಿದ್ದರು.

News18
News18

ಬೆಂಗಳೂರು (ಜೂ.25): ಸ್ಯಾಂಡಲ್​ವುಡ್​ ನಟಿ ಕೃಷಿ ತಾಪಂಡ (Krishi Thapanda) ಮನೆಯಲ್ಲೇ ಉದ್ಯಮಿ ವೈಶಾಕ್​ (Vaishakh) ಆತ್ಮಹತ್ಯೆಗೆ ಶರಣಾಗಿದ್ದು ನಾನಾ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ತಿಂಗಳಿಂದ ಹೆಂಡ್ತಿ ಜೊತೆ ಮಾತು ಬಿಟ್ಟಿದ್ದ ವೈಶಾಕ್​ ಸಂಸಾರದಲ್ಲಿ ಬಿರುಕು ಮೂಡಿತ್ತು. ಅಲ್ಲದೇ ನಟಿ ಕೃಷಿ ತಾಪಂಡ ಮಾಜಿ ಬಾಯ್​ಫ್ರೆಂಡ್​ (Boy Friend) ಎವಿಆರ್ ಗ್ರೂಪ್ ಮಾಲೀಕ ಅರವಿಂದ ರೆಡ್ಡಿ ಕೂಡ ಉದ್ಯಮಿ ಹಾಗೂ ನಟಿ ಕೃಷಿ ತಾಪಂಡ ಸ್ನೇಹಿತ ವೈಶಾಕ್ ಮೇಲೆ ದೂರು ಕೊಟ್ಟಿದ್ದರಂತೆ. ಈ ದೂರಿನ ಬಳಿಕ ವೈಶಾಕ್​ ಸಂಸಾರದಲ್ಲಿ ಬಿರುಗಾಳಿ ಎಬ್ಬಿತ್ತು ಎನ್ನಲಾಗ್ತಿದೆ. ಖಿನ್ನತೆಗೆ ಒಳಗಾಗಿದ್ರಾ ವೈಶಾಕ್?

ನಟಿ ಕೇಸ್​, ವೈಶಾಕ್ ಸಂಸಾರ ಛಿದ್ರ!

ಎವಿಆರ್ ಗ್ರೂಪ್ ಮಾಲೀಕ ಅರವಿಂದ ರೆಡ್ಡಿ ಅವರು ಉದ್ಯಮಿ ವೈಶಾಕ್ ನನಗೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ರು. ಕೇಸ್ ದಾಖಲಾದ​ ಬಳಿಕ ವೈಶಾಕ್​​​ನನ್ನು ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದರಂತೆ, ಈ ಕೇಸ್​ ಬಳಿಕ ವೈಶಾಕ್​ ಸಂಸಾರದಲ್ಲಿ ಬಿರುಕು ಮೂಡಿತ್ತಂತೆ. ಹೆಂಡ್ತಿ ಜೊತೆ ಮಾತಾಡೋದನ್ನೇ ವೈಶಾಕ್ ಬಿಟ್ಟಿದ್ದರು ಎನ್ನಲಾಗ್ತಿದೆ.

ಡಿಪ್ರೆಶನ್​ಗೆ ಒಳಗಾಗಿದ್ರ ವೈಶಾಕ್​?

ಎವಿಆರ್ ಗ್ರೂಪ್ ಮಾಲೀಕನ ಕೇಸ್ ನಂತರ ಉದ್ಯಮಿ ವೈಶಾಖ್​ ಹಾಗೂ ಪತ್ನಿ ನಡುವೆ ಜಗಳ ಜಾಸ್ತಿಯಾಗಿತ್ತಂತೆ. ವೈಶಾಕ್​ನನ್ನ ಕೃಷಿ ತಪಂಡಾ ಮನೆಯಲ್ಲೇ ಹೆಚ್ ಎಎಲ್ ಪೊಲೀಸರು ಅರೆಸ್ಟ್ ಮಾಡಿದ್ದರು. ಒಂದು ತಿಂಗಳಿಂದ ಪತ್ನಿ ಜೊತೆ ಅಂತರ ಕಾಯ್ದುಕೊಂಡಿದ್ದ ವೈಶಾಕ್​ ಡಿಪ್ರೆಶನ್​ಗೆ ಒಳಗಾಗಿದ್ರು ಎನ್ನಲಾಗ್ತಿದೆ.

ವೈಶಾಕ್​ಗೆ ಎವಿಆರ್ ಬೆದರಿಕೆ

ವೈಶಾಕ್ ವಿರುದ್ಧ ಪತ್ರದ ಮೂಲಕ ಉದ್ಯಮಿಗೆ ಎವಿಆರ್ ಬೆದರಿಕೆ ಹಾಕಿದ್ದ ಆರೋಪ ಕೇಳಿ ಬಂದಿತ್ತು. ಕೃಷಿ ತಪಂಡಾ ಕೇಸ್ ನಲ್ಲಿ ಜಾಸ್ತಿ ತಲೆ ಹಾಕಬೇಡ. ಈ ಕೇಸನ್ನ ಇಲ್ಲಿಗೇ ಬಿಟ್ಟುಬಿಡಬೇಕು. ಅಲ್ಲದೇ 6-7 ಕೋಟಿ ಕ್ಯಾಶ್ ಹಣ ಕೊಡಬೇಕು. ಇಲ್ಲವಾದರೆ ಗಂಭೀರ ಪರಿಣಾಮ‌ ಎದುರಿಸಬೇಕಾಗುತ್ತೆ ಎಂದು ಎವಿಆರ್  ಬೆದರಿಕೆ ಹಾಕಿದ್ರು ಎನ್ನಲಾಗ್ತಿದೆ.

ಕೃಷಿ ತಾಪಂಡಾ ಮನೆಯಲ್ಲೇ ಇದ್ದ ವೈಶಾಕ್​

ಕಳೆದ ಒಂದು ವಾರದಿಂದ ವೈಶಾಕ್​, ನಟಿ ಕೃಷಿ ತಪಂಡಾ ಮನೆಯಲ್ಲೇ ಇದ್ದ ಎನ್ನಲಾಗ್ತಿದೆ. ಕೃಷಿ ತಪಂಡಾ ಮನೆಯಿಂದಲೇ ಕೆಲಸಕ್ಕೆ ಹೋಗಿ ಬರ್ತಿದ್ದನಂತೆ. ವೀರಭದ್ರ ಸಿಗ್ನಲ್ ಬಳಿ ಇರುವ ತನ್ನ ಆಟೋಮೊಬೈಲ್ಸ್ ಕಚೇರಿಗೆ ಹೋಗಿ ಬರ್ತಿದ್ದ. ನಟಿ ಕೃಷಿ ತಾಪಂಡ ಮನೆಗೆ ಒಟ್ಟು ಎರಡು ಕೀ ಇತ್ತು. ಇಬ್ಬರೂ ಒಂದೊಂದು ಕೀ ಇಟ್ಟುಕೊಂಡಿದ್ರಂತೆ.

ನಟಿಗೆ ಮೆಸೇಜ್ ಮಾಡಿದ್ದ ವೈಶಾಕ್​

ನಿನ್ನೆ ಯಲಹಂಕಗೆ ಹೋಗಿದ್ದ ನಟಿ ಕೃಷಿ ತಪಂಡಾಗೆ ಸಾಯೋದಾಗಿಯೂ ವೈಶಾಕ್ ಮೆಸೇಜ್ ಮಾಡಿದ್ದ ಎನ್ನಲಾಗ್ತಿದೆ. ವೈಶಾಕ್​​ಗೆ ಸಮಾಧಾನ ಮಾಡಿ ಆತ್ಮಹತ್ಯೆ ತಡೆಯಲು ಕೃಷಿ ಪ್ರಯತ್ನ ಪಟ್ಟಿದ್ದಾರೆ. ಆದ್ರೆ ಕೃಷಿ ತಾಪಂಡ ಮನೆಗೆ ಬರುವಷ್ಟರಲ್ಲಿ ಆತ ಆತ್ಮಹತ್ಯೆಗೆ ಶರಣಾಗಿದ್ದ.

ಆರೋಪಕ್ಕೆ ನೊಂದಿದ್ದನಾ ವೈಶಾಕ್?

ಎಂಜಿಆರ್​ ಗ್ರೂಪ್ ಮಾಲೀಕನ ಆರೋಪಕ್ಕೆ ಬೇಸತ್ತು ವೈಶಾಕ್​ ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡನಾ? ಇಲ್ಲ ಆತ್ಮಹತ್ಯೆ ಹಿಂದೆ ಬೇರೆ ಕಾರಣ ಇದ್ಯಾ ಅನ್ನೋದು ಪೊಲೀಸ್ ತನಿಖೆಯಿಂದ ಹೊರ ಬರಬೇಕಿದೆ.

(ವರದಿ: ಮಾದೇಶ್​, ನ್ಯೂಸ್18 ಕನ್ನಡ, ಬೆಂಗಳೂರು)



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed