Vegetable Price: ಬೆಂಗಳೂರು ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಏರಿಕೆ, ಅಡುಗೆಮನೆಯ ಮೇಲೆ ಹವಾಮಾನ ವೈಪರೀತ್ಯದ ಹೊಡೆತ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ತರಕಾರಿ ಬೆಲೆ ಏರಿಕೆ


Last Updated:

ಬೆಂಗಳೂರು ತರಕಾರಿ ಬೆಲೆ ಗಗನಕ್ಕೇರಿ, ನುಗ್ಗೆಕಾಯಿ 200, ಬೀನ್ಸ್ 140, ಬದನೆಕಾಯಿ 100, ಟೊಮೆಟೊ ಈರುಳ್ಳಿ ಮಾತ್ರ ಸ್ಥಿರ, ಮೊಟ್ಟೆ 8 ರೂ ತಲುಪಿ ಮಧ್ಯಮ ವರ್ಗದ ಬಜೆಟ್ ಹಾಳು.

ತರಕಾರಿ ಬೆಲೆ ಏರಿಕೆ
ತರಕಾರಿ ಬೆಲೆ ಏರಿಕೆ

ಬೆಂಗಳೂರು: ಸಿಲಿಕಾನ್ ಸಿಟಿಯ ಕಿಚನ್ ಬಜೆಟ್ ಇದೀಗ ಸಂಪೂರ್ಣವಾಗಿ ಬುಡಮೇಲಾಗಿದೆ. ಬೆಂಗಳೂರಿನ (Bengaluru) ಜನಪ್ರಿಯ ಕೆ.ಆರ್. ಮಾರ್ಕೆಟ್ ಸೇರಿದಂತೆ ನಗರದ ಮೂಲೆಮೂಲೆಗಳ ಮಾರುಕಟ್ಟೆಯಲ್ಲಿ (Market) ತರಕಾರಿಗಳ ಬೆಲೆ (Vegetable Price) ಕೇಳಿದರೆ, ನಿಮ್ಮ ಕಣ್ಣುಗಳು ಅಕ್ಷರಶಃ ಅಗಲವಾಗುವುದು ಗ್ಯಾರಂಟಿ. ರಾಜ್ಯದ ಅನಾವೃಷ್ಟಿ ಮತ್ತು ನೆರೆಯ ರಾಜ್ಯಗಳ ಹವಾಮಾನ (Weather) ವೈಪರೀತ್ಯದ ಹೊಡೆತ ನೇರವಾಗಿ ನಮ್ಮ ಅಡುಗೆಮನೆಯ ಮೇಲೆ ಬಿದ್ದಿದೆ.

ಸೆಂಚುರಿ ಬಾರಿಸಿದ ತರಕಾರಿಗಳು

ಪ್ರತಿ ಕೆಜಿಗೆ ನುಗ್ಗೆಕಾಯಿ ಬರೋಬ್ಬರಿ 200 ರಿಂದ 220 ರೂಪಾಯಿ ತಲುಪಿದ್ದರೆ, ಬೆಳ್ಳುಳ್ಳಿಯ ದರವೂ ಅದೇ ಹಂತದಲ್ಲಿದೆ. ಇನ್ನು ಗೃಹಿಣಿಯರ ಅಚ್ಚುಮೆಚ್ಚಿನ ಬೀನ್ಸ್ 140 ರೂಪಾಯಿ ಗಡಿ ದಾಟಿದೆ. ಬಿಳಿ ಬದನೆಕಾಯಿ ಬೆಲೆ ಇತಿಹಾಸದಲ್ಲೇ ಮೊದಲ ಬಾರಿಗೆ 100 ರೂಪಾಯಿಯ ಗಡಿ ದಾಟಿರುವುದು ವಾಂಗಿಬಾತ್ ಪ್ರಿಯರಿಗೆ ಶಾಕ್ ನೀಡಿದೆ. ಇನ್ನು ಮೆಂತ್ಯ ಸೊಪ್ಪು, ಹಸಿಮೆಣಸಿನಕಾಯಿ ಸೇರಿದಂತೆ ನಿತ್ಯ ಬಳಕೆಯ ತರಕಾರಿಗಳ ದರವು ಸಾಮಾನ್ಯ ಜನರ ಕೈಗೆಟುಕದಷ್ಟು ಏರಿಕೆಯಾಗಿದೆ ಎಂದು ಟಿವಿ9 ವೆಬ್‍ಸೈಟ್ ವರದಿ ಮಾಡಿದೆ.
ಟೊಮೆಟೊ-ಈರುಳ್ಳಿ ಸಮಾಧಾನ, ಮೊಟ್ಟೆ ಪ್ರಿಯರಿಗೆ ಶಾಕ್

ತರಕಾರಿಗಳ ದರ ಗಗನಕ್ಕೇರಿದ್ದರೆ, ಟೊಮೆಟೊ (15-20 ರೂ.) ಮತ್ತು ಈರುಳ್ಳಿ (20-25 ರೂ.) ದರ ಮಾತ್ರ ಸದ್ಯಕ್ಕೆ ತುಸು ನೆಮ್ಮದಿ ನೀಡಿದೆ. ಆದರೆ, ಈ ಸಂತೋಷ ಹೆಚ್ಚು ಕಾಲ ಉಳಿಯುವಂತಿಲ್ಲ. ಏಕೆಂದರೆ, ತರಕಾರಿ ಬೆಲೆ ಏರಿಕೆಯ ಬೆನ್ನಲ್ಲೇ ಇದೀಗ ಪೆÇ್ರೀಟೀನ್ ಮೂಲವಾದ ಕೋಳಿ ಮೊಟ್ಟೆಯ ಬೆಲೆ 6.50 ರಿಂದ 8 ರೂಪಾಯಿಗೆ ಜಿಗಿದಿದೆ. ಇದು ಮಧ್ಯಮ ವರ್ಗದವರ ತಿಂಗಳ ಬಜೆಟ್ ಅನ್ನು ಸಂಪೂರ್ಣವಾಗಿ ಹಳಿ ತಪ್ಪಿಸಿದೆ.
ವ್ಯಾಪಾರಿಗಳ ಅಳಲು

ಈ ಬೆಲೆ ಏರಿಕೆಯಿಂದ ಕೇವಲ ಗ್ರಾಹಕರು ಮಾತ್ರವಲ್ಲ, ವರ್ತಕರೂ ಕಂಗಾಲಾಗಿದ್ದಾರೆ. ಮೊದಲು ಕೆಜಿಗಟ್ಟಲೆ ಕೊಳ್ಳುತ್ತಿದ್ದ ಗ್ರಾಹಕರು, ಈಗ ಕಾಲು ಕೆಜಿಗೆ ಸೀಮಿತವಾಗಿದ್ದಾರೆ, ಎಂದು ವ್ಯಾಪಾರಿ ಸೆಲ್ವಿ ಅಳಲು ತೋಡಿಕೊಳ್ಳುತ್ತಾರೆ. ತರಕಾರಿ ಮಾರಾಟವಿಲ್ಲದೆ ವರ್ತಕರು ತತ್ತರಿಸುತ್ತಿದ್ದರೆ, ಜನಸಾಮಾನ್ಯರು ಇವತ್ತು ಅಡುಗೆಯಲ್ಲಿ ಏನಪ್ಪಾ ಮಾಡೋದು? ಎಂಬ ಚಿಂತೆಯಲ್ಲಿದ್ದಾರೆ. ಹವಾಮಾನ ವೈಪರೀತ್ಯದ ಈ ಆಟದಿಂದ ಪಾರಾಗುವ ದಾರಿಯೇ ಕಾಣದಂತಾಗಿದೆ.ಒಟ್ಟಿನಲ್ಲಿ, ಬಿಸಿಲಿನ ಝಳದ ಜೊತೆಗೆ ತರಕಾರಿಗಳ ಬೆಲೆಯ ಝಳವೂ ಬೆಂಗಳೂರಿಗರನ್ನು ಸುಡುತ್ತಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed