Jacob Bethel: ಕನ್ನಡತಿಯ ಜೊತೆ ಪ್ರೀತಿಯ ಬಲೆಯಲ್ಲಿ ಬಿದ್ರಾ RCB ಸೂಪರ್ ಸ್ಟಾರ್? ಬೆಥೆಲ್​ ಜೊತೆ ಡೇಟಿಂಗ್ ಮಾಡ್ತಿದ್ದಾರಾ ಆ ನಟಿ? ವೈರಲ್ ಆಯ್ತು ಫೋಟೋ | ಕ್ರೀಡಾ ಸುದ್ದಿ | ACTPnews

ಜಾಕೋಬ್ ಬೆಥೆಲ್


Last Updated:

ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಪರ ಆಡಿ ಸೈ ಎನಿಸಿಕೊಂಡಿದ್ದ ಜಾಕೋಬ್ ಬೆಥೆಲ್ ಕನ್ನಡ ನಟಿಯೊಬ್ಬರೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ವದಂತಿಗಳು ಹರಿದಾಡಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ.

ಜಾಕೋಬ್ ಬೆಥೆಲ್
ಜಾಕೋಬ್ ಬೆಥೆಲ್

ಇಂಗ್ಲೆಂಡ್‌ನ ಯುವ ಕ್ರಿಕೆಟ್ ಸೆನ್ಸೇಷನ್ ಜಾಕೋಬ್ ಬೆಥೆಲ್ ತಮ್ಮ ಆಟಕ್ಕೆ ಮಾತ್ರವಲ್ಲದೆ ವೈಯಕ್ತಿಕ ಜೀವನದಿಂದಲೂ ಸುದ್ದಿಯಲ್ಲಿದ್ದಾರೆ. ಜಾಕೋಬ್ ಬೆಥೆಲ್ ಕನ್ನಡ ನಟಿಯೊಬ್ಬರೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ವದಂತಿಗಳು ಹರಿದಾಡಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ. ಇದರ ಜೊತೆಗೆ, ಜಾಕೋಬ್ ಬೆಥೆಲ್ ಒಂದು ಹುಡುಗಿಯ ಜೊತೆ ತುಂಬಾ ಆತ್ಮೀಯವಾಗಿರುವ ಫೋಟೋ ಕೂಡ ವೈರಲ್ ಆಗಿದ್ದು, ಇದು ಈ ಪ್ರೇಮ ವದಂತಿಗಳನ್ನು ಮತ್ತಷ್ಟು ಬಲಪಡಿಸಿದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಫೋಟೋದಲ್ಲಿ, ಜಾಕೋಬ್ ಒಬ್ಬ ಹುಡುಗಿಯನ್ನು ತಬ್ಬಿಕೊಂಡು ಪೋಸ್ ಕೊಟ್ಟಿದ್ದಾರೆ. ಆದರೆ, ಫೋಟೋದಲ್ಲಿ ಹುಡುಗಿಯ ಮುಖ ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಇದರೊಂದಿಗೆ, ಜಾಕೋಬ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಈ ನಟಿ ಯಾರಾಗಿರಬಹುದು ಎಂದು ಕ್ರಿಕೆಟ್ ಅಭಿಮಾನಿಗಳು ಚರ್ಚೆ ನಡೆಸುತ್ತಿದ್​ದಾರೆ.

ಯಾರು ಆ ನಟಿ?

ಜೇಕಬ್ ಬೆಥೆಲ್ ಅವರು ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ಅಂಕಿತಾ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಅಂಕಿತಾ ಬಾಲಿವುಡ್‌ನಲ್ಲಿ ಪ್ರಸಿದ್ಧ ಮೇಕಪ್ ಕಲಾವಿದೆ. ಅವರು ಈ ಹಿಂದೆ ಸ್ಟಾರ್ ನಟಿಯರಾದ ಶಿಲ್ಪಾ ಶೆಟ್ಟಿ, ಪಾಲಕ್ ತಿವಾರಿ ಮತ್ತು ಹಿನಾ ಖಾನ್‌ರಂತಹ ಸೆಲೆಬ್ರಿಟಿಗಳೊಂದಿಗೆ ಕೆಲಸ ಮಾಡಿದ್ದಾರೆ. ಜಾಕೋಬ್ ಅವರನ್ನು ಪ್ರೀತಿಸುತ್ತಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಪ್ರೀತಿಯ ಬಲೆಯಲ್ಲಿ RCB ಸೂಪರ್ ಸ್ಟಾರ್?

ತಿರುವು ಏನೆಂದರೆ ಅಂಕಿತಾ ಪಟೇಲ್ ಜೊತೆಗೆ, ಮತ್ತೊಬ್ಬ ಯುವ ಭಾರತೀಯ ನಟಿ ಹೆಸರು ಕೇಳಿಬರುತ್ತಿದೆ. ಹೌದು, ಕೆಲವರು ಈ ಯುವತಿಯನ್ನು ಕನ್ನಡದ ಉದಯೋನ್ಮುಖ ನಟಿ ಆದ್ಯಾ ಆನಂದ್ ಇರಬಹುದೆಂದು ಶಂಕಿಸಿದ್ದಾರೆ.

ಆದರೆ, ಅವರು ಸ್ನೇಹಿತರೇ ಅಥವಾ ಡೇಟಿಂಗ್ ಮಾಡುತ್ತಿದ್ದಾರೆಯೇ ಎಂಬುದರ ಕುರಿತು ಯಾವುದೇ ಅಧಿಕೃತ ಮಾಹಿತಿ ಇಲ್ಲ. ಜೊತೆಗೆ ಜಾಕೋಬ್, ಆದ್ಯಾ ಅಥವಾ ಅಂಕಿತಾ ಮೂವರೂ ಈ ವದಂತಿಗಳಿಗೆ ಇನ್ನೂ ಪ್ರತಿಕ್ರಿಯಿಸಿಲ್ಲ. ಆದ್ದರಿಂದ ಅವರ ಸಂಬಂಧದ ಬಗ್ಗೆ ಸಸ್ಪೆನ್ಸ್ ಹಾಗೆಯೇ ಉಳಿದಿದೆ.

ಆದ್ಯಾ ಆನಂದ್ ಯಾರು?

ಮೂಲತಃ ಕನ್ನಡತಿಯಾದ ಆದ್ಯಾ ಆನಂದ್ ಅವರ ಪ್ರತಿಭೆ ಅಂತಾರಾಷ್ಟ್ರೀಯ ಮಟ್ಟದ್ದಾಗಿದೆ. ಸಿಂಗಾಪುರದಲ್ಲಿ ರಂಗಭೂಮಿ ತರಬೇತಿ ಪಡೆದ ಇವರು, ಬಾಲಿವುಡ್‌ನ ಪ್ರಸಿದ್ಧ ನಟ ಅನುಪಮ್ ಖೇರ್ ಮತ್ತು ಅತುಲ್ ಮೊಂಗಿಯಾ ಅವರ ಸಂಸ್ಥೆಗಳಲ್ಲಿ ನಟನಾ ತರಬೇತಿ ಪಡೆದಿದ್ದಾರೆ.

ನೆಟ್‌ಫ್ಲಿಕ್ಸ್‌ನ ಹಿಟ್ ಸರಣಿ ‘ಬಾಂಬೆ ಬೇಗಮ್ಸ್’ ಮೂಲಕ ಭಾರತೀಯ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಆದ್ಯಾ, 2022ರಲ್ಲಿ ಅಮೆಜಾನ್ ಪ್ರೈಮ್‌ನ ‘ಕ್ರಶ್ಡ್’ ವೆಬ್ ಸೀರೀಸ್‌ ಮೂಲಕ ಎಲ್ಲರ ಗಮನ ಸೆಳೆದರು.  ಈ ಮೂಲಕ ಅವರು ದೇಶಾದ್ಯಂತ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸಂಪಾದಿಸಿ ‘ನ್ಯಾಷನಲ್ ಕ್ರಷ್’ ಎಂದು ಫೇಮಸ್ ಆದರು. 2017ರ ಪ್ರತಿಷ್ಠಿತ ಕೇನ್ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಂಡ ‘ಎ ಯೆಲ್ಲೋ ಬರ್ಡ್’ ಸೇರಿದಂತೆ ಹಲವು ಪ್ರಮುಖ ಕಿರುಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

ಜಾಕೋಬ್ ಬೆಥೆಲ್ ಸಾಧನೆ

ಇಂಗ್ಲೆಂಡ್ ಕ್ರಿಕೆಟ್ ತಂಡದ ಭವಿಷ್ಯದ ಆಟಗಾರ ಜಾಕೋಬ್ ಬೆಥೆಲ್. ಟಿ20 ವಿಶ್ವಕಪ್ 2026 ರಲ್ಲಿ ಟೀಮ್ ಇಂಡಿಯಾ ವಿರುದ್ಧ ಜಾಕೋಬ್ ಬೆಥೆಲ್ ಶತಕ ಬಾರಿಸಿ ಮಿಂಚಿದ್ದರು. ಈ ಇನಿಂಗ್ಸ್‌ ಬಳಿಕ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳಿಗೆ ನೆಚ್ಚಿನ ಆಟಗಾರನಾಗಿ ಹತ್ತಿರವಾದರು. ಇದಲ್ಲದೆ, ಐಪಿಎಲ್​​ನಲ್ಲಿ ಆರ್​​ಸಿಬಿಯ ಹೊಸ ಸೂಪರ್ ಸ್ಟಾರ್ ಆಗಿಯೂ ಬೆಥೆಲ್ ಫೇಮಸ್ ಆಗಿದ್ದಾರೆ. 22 ವರ್ಷದ ಬೆಥೆಲ್ ತಮ್ಮ ವೃತ್ತಿಜೀವನದಲ್ಲಿ 7 ಟೆಸ್ಟ್‌ಗಳು, 21 ಏಕದಿನಗಳು ಮತ್ತು 31 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಕ್ರಮವಾಗಿ 496, 603 ಮತ್ತು 697 ರನ್‌ಗಳನ್ನು ಗಳಿಸಿದ್ದಾರೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Jacob Bethel: ಕನ್ನಡತಿಯ ಜೊತೆ ಪ್ರೀತಿಯ ಬಲೆಯಲ್ಲಿ ಬಿದ್ರಾ RCB ಸೂಪರ್ ಸ್ಟಾರ್? ಬೆಥೆಲ್​ ಜೊತೆ ಡೇಟಿಂಗ್ ಮಾಡ್ತಿದ್ದಾರಾ ಆ ನಟಿ? ವೈರಲ್ ಆಯ್ತು ಫೋಟೋ



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed