Jofra Archer: ರೋಹಿತ್​​​, ಕೊಹ್ಲಿ ಅಲ್ಲ, ಈ ಭಾರತೀಯ ಬ್ಯಾಟರ್​​ಗೆ ಬೌಲಿಂಗ್ ಮಾಡೋದು ಕಷ್ಟ! ತಾವೆದುರಿಸಿದ ಅತ್ಯಂತ ಕಠಿಣ ಬ್ಯಾಟರ್​ ಹೆಸರಿಸಿದ ಆರ್ಚರ್​​ | ಕ್ರೀಡಾ ಸುದ್ದಿ | ACTPnews

ಜೋಫ್ರಾ ಆರ್ಚರ್


Last Updated:

ಗಾಯದ ಸಮಸ್ಯೆಯಿಂದ ದೀರ್ಘ ಕಾಲ ವಿಶ್ರಾಂತಿ ಪಡೆದ ನಂತರ ಆರ್ಚರ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳುತ್ತಿದ್ದಾರೆ. ಆರ್ಚರ್ ತಮ್ಮ ವೃತ್ತಿ ಜೀವನದಲ್ಲಿ ವಿಶ್ವದ ಕೆಲವು ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳ ವಿರುದ್ಧ ಆಡಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ದಂತಕಥೆಗಳ ವಿರುದ್ಧ ಆಡಿದರೂ, ಆರ್ಚರ್ ಕೆಎಲ್ ರಾಹುಲ್ ಅವರನ್ನು ತಮಗೆ ಹೆಚ್ಚಿನ ಸವಾಲುಗಳನ್ನು ಒಡ್ಡಿದ ಬ್ಯಾಟ್ಸ್‌ಮನ್ ಎಂದು ಉಲ್ಲೇಖಿಸಿದ್ದಾರೆ.

ಜೋಫ್ರಾ ಆರ್ಚರ್
ಜೋಫ್ರಾ ಆರ್ಚರ್

ವಿಶ್ವ ಕ್ರಿಕೆಟ್‌ನಲ್ಲಿ ಮಾರಕ ವೇಗಿಗಳಲ್ಲಿ ಜೋಫ್ರಾ ಆರ್ಚರ್ (Jofra Archer) ಕೂಡ ಒಬ್ಬರು. ತಮ್ಮ ವೇಗದ ಬೌಲಿಂಗ್‌ನಿಂದ ಎದುರಾಳಿ ಬ್ಯಾಟರ್‌ಗಳನ್ನ ಧ್ವಂಸ ಮಾಡಬಲ್ಲರು. ವೃತ್ತಿ ಜೀವನದ ಆರಂಭದಲ್ಲಿ ಅವರ ಬೌಲಿಂಗ್ ಎದುರಿಸುವುದಕ್ಕೆ ಡಬಲ್ ಗುಂಡಿಗೆ ಬೇಕಿತ್ತು. ಅದರಲ್ಲೂ ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಬೌಲಿಂಗ್ ಭಯಾನಕವಾಗಿರುತ್ತಿತ್ತು. ಆದರೆ ಸಂದರ್ಶನವೊಂದರಲ್ಲಿ ತಾವೆದುರಿಸಿದ ವಿಶ್ವದ ಅತ್ಯಂತ ಕಠಿಣ ಬ್ಯಾಟ್ಸ್‌ಮನ್‌ಗಳ ಹೆಸರನ್ನು ಹೇಳಲು ಕೇಳಿದಾಗ, ಆರ್ಚರ್ ವಿರಾಟ್ ಕೊಹ್ಲಿ (Virat Kohli) ಅಥವಾ ರೋಹಿತ್ ಶರ್ಮಾ (Rohit Sharma) ಅವರನ್ನು ಹೆಸರಿಸಲಿಲ್ಲ. ಬದಲಾಗಿ, ಅವರು ಪ್ರಸ್ತುತ ಭಾರತೀಯ ತಂಡದ ಮತ್ತೊಬ್ಬ ಪ್ರಮುಖ ಆಟಗಾರನನ್ನು ಆಯ್ಕೆ ಮಾಡಿದ್ದಾರೆ. ಅವರಿಗೆ ಬೌಲಿಂಗ್ ಮಾಡುವುದು ಅತ್ಯಂತ ಸವಾಲಿನ ಎಂದು ಅವರು ಪರಿಗಣಿಸುವುದಾಗಿ ತಿಳಿಸಿದ್ದಾರೆ.

ರಾಹುಲ್‌ಗೆ ಬೌಲಿಂಗ್ ಮಾಡೋದು ಸವಾಲಿನ ಕೆಲಸ

ಗಾಯದ ಸಮಸ್ಯೆಯಿಂದ ದೀರ್ಘ ಕಾಲ ವಿಶ್ರಾಂತಿ ಪಡೆದ ನಂತರ ಆರ್ಚರ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳುತ್ತಿದ್ದಾರೆ. ಆರ್ಚರ್ ತಮ್ಮ ವೃತ್ತಿ ಜೀವನದಲ್ಲಿ ವಿಶ್ವದ ಕೆಲವು ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳ ವಿರುದ್ಧ ಆಡಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ದಂತಕಥೆಗಳ ವಿರುದ್ಧ ಆಡಿದರೂ, ಆರ್ಚರ್ ಕೆಎಲ್ ರಾಹುಲ್ ಅವರನ್ನು ತಮಗೆ ಹೆಚ್ಚಿನ ಸವಾಲುಗಳನ್ನು ಒಡ್ಡಿದ ಬ್ಯಾಟ್ಸ್‌ಮನ್ ಎಂದು ಉಲ್ಲೇಖಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಆರ್ಚರ್, ರಾಹುಲ್ ಅವರ ತಂತ್ರ ಮತ್ತು ವಿಭಿನ್ನ ಸನ್ನಿವೇಶಗಳಿಗೆ ಹೊಂದಿಕೊಳ್ಳುವ ಅವರ ಸಾಮರ್ಥ್ಯವನ್ನು ಶ್ಲಾಘಿಸಿದ್ದಾರೆ. ರಾಹುಲ್ ಅವರ ಕ್ರೀಸ್‌ನಲ್ಲಿ ಸ್ಥಿರತೆ ಮತ್ತು ಕಾಮ್‌ನೆಸ್ ಯಾವುದೇ ಬೌಲರ್‌ಗೆ ಅವರನ್ನು ಅಸಾಧಾರಣ ಸವಾಲನ್ನಾಗಿ ಮಾಡುತ್ತದೆ ಎಂದು ಆರ್ಚರ್ ಒಪ್ಪಿಕೊಂಡಿದ್ದಾರೆ.

ಭಾರತ ಬ್ಯಾಟಿಂಗ್ ಬೆನ್ನೆಲುಬು

ರಾಹುಲ್ ಪ್ರಸ್ತುತ ಭಾರತೀಯ ಬ್ಯಾಟಿಂಗ್ ಲೈನ್-ಅಪ್‌ನ ಪ್ರಮುಖ ಆಧಾರಸ್ತಂಭವಾಗಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಆಟದ ಮೂರು ಸ್ವರೂಪಗಳಲ್ಲಿ ಅಸಾಧಾರಣ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ. ಗಾಯಗಳಿಂದಾಗಿ ಏರಿಳಿತಗಳನ್ನು ಅನುಭವಿಸಿದ ನಂತರವೂ ತಂಡಕ್ಕೆ ಮರಳುವ ಮತ್ತು ಸ್ಥಿರವಾಗಿ ಪ್ರದರ್ಶನ ನೀಡುವ ಅವರ ಸಾಮರ್ಥ್ಯವನ್ನು ವ್ಯಾಪಕವಾಗಿ ಪ್ರಶಂಸಿಸಲಾಗಿದೆ. ಟಿ20 ತಂಡದಿಂದ ಹೊರಬಿದ್ದಿದ್ದರೂ, ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಭಾರತದ ಬೆನ್ನಲುಬಾಗಿದ್ದಾರೆ.

ರಾಹುಲ್ ಖ್ಯಾತಿ ಇಮ್ಮಡಿಗೊಳಿಸಿದ ಆರ್ಚರ್

ವಿಶ್ವದ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರಾದ ಆರ್ಚರ್ ನೀಡಿರುವ ಈ ಹೇಳಿಕೆ ರಾಹುಲ್ ಅವರ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಕೊಹ್ಲಿ ಮತ್ತು ರೋಹಿತ್ ತಮ್ಮ ಆಕ್ರಮಣಕಾರಿ ಮತ್ತು ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್‌ಗಳಿಂದ ಪ್ರಸಿದ್ಧರಾಗಿದ್ದಾರೆ. ಆದರೆ ಆರ್ಚರ್ ಅವರ ಹೇಳಿಕೆಯು ರಾಹುಲ್ ಅವರ ತಾಂತ್ರಿಕ ಶಕ್ತಿ ಮತ್ತು ಸ್ಥಿರತೆಯ ಬಗ್ಗೆ ಎದುರಾಳಿ ಬೌಲರ್‌ಗಳು ಹೊಂದಿರುವ ಗೌರವವನ್ನು ಎತ್ತಿ ತೋರಿಸುತ್ತದೆ. ಆರ್ಚರ್ ಪ್ರಸ್ತುತ ಇಂಗ್ಲೆಂಡ್ ತಂಡದೊಂದಿಗೆ ಮುಂಬರುವ ಸರಣಿಗಳು ಮತ್ತು ಪಂದ್ಯಾವಳಿಗಳಿಗೆ ತಯಾರಿ ನಡೆಸುತ್ತಿದ್ದಾರೆ. ಸಂಪೂರ್ಣವಾಗಿ ಫಿಟ್ ಆಗಿ ಉಳಿಯುವ ಮತ್ತು ತಂಡಕ್ಕೆ ತಮ್ಮ ಅತ್ಯುತ್ತಮ ಕೊಡುಗೆ ನೀಡುವತ್ತ ಗಮನಹರಿಸುತ್ತಿರುವುದಾಗಿ ಹೇಳಿದ್ದಾರೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Jofra Archer: ರೋಹಿತ್​​​, ಕೊಹ್ಲಿ ಅಲ್ಲ, ಈ ಭಾರತೀಯ ಬ್ಯಾಟರ್​​ಗೆ ಬೌಲಿಂಗ್ ಮಾಡೋದು ಕಷ್ಟ! ತಾವೆದುರಿಸಿದ ಅತ್ಯಂತ ಕಠಿಣ ಬ್ಯಾಟರ್​ ಹೆಸರಿಸಿದ ಆರ್ಚರ್​​



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed