Last Updated:
Darshan: ನಟ ದರ್ಶನ್ ಅವರು 30 ನಿಮಿಷಗಳ ಕಾಲ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ನನ್ನು ಭೇಟಿ ಮಾಡಿದ್ದೇ ತಡ ಪರಪ್ಪನ ಅಗ್ರಹಾರದಲ್ಲಿ ಈಗ ಹೊಸ ಪ್ರಾಬ್ಲೆಂ ಶುರುವಾಗಿದೆ. ಏನದು? ಜೈಲಾಧಿಕಾರಿಗಳಿಗೆ ಇದೇ ತಲೆ ನೋವಾಗುತ್ತಾ?
ರೇಣುಕಾಸ್ವಾಮಿ ಕೊಲೆ (Renukaswamy Case) ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ದರ್ಶನ್ ಅವರು ವಿವಾಹ ವಾರ್ಷಿಕೋತ್ಸವ (Anniversary) ದಿನ ಪತ್ನಿ ಹಾಗೂ ಮಗನನ್ನು (Son) ಭೇಟಿಯಾಗಿದ್ದಾರೆ. ಆದರೆ ಸೆಂಟ್ರಲ್ ಜೈಲ್ ನಲ್ಲಿರೋ ನಟ ದರ್ಶನ್ಗೆ ಒಳ ಸಂದರ್ಶನಕ್ಕೆ ಅನುಮತಿ ಹಿನ್ನಲೆ ಪರಪ್ಪನ ಅಗ್ರಹಾರದಲ್ಲಿ ಹೊಸ ಸಮಸ್ಯೆ ಶುರುವಾಗಿದೆ.
ದರ್ಶನ್ ಕುಟುಂಬಕ್ಕೆ ಅನುಮತಿ ಸಿಕ್ಕಿರುವ ಬೆನ್ನಲ್ಲೇ ಕೈದಿಗಳ ಭೇಟಿಗೆ ಬರುವ ಕೆಲ ಕುಟುಂಬಸ್ಥರು ನವೆಂಬರ್ 19ರಂದೇ ನೇರವಾಗಿ ಮನವಿ ಸಲ್ಲಿಸಿದ್ದಾರೆ. ತಮಗೂ ಒಳ ಸಂದರ್ಶನಕ್ಕೆ ಅವಕಾಶ ಮಾಡಿ ಕೊಡಿ ಅಂತ ಮನವಿ ಸಲ್ಲಿಸಿದ್ದಾರೆ.
ಇದಲ್ಲದೆ ಕೆಲ ಕೈದಿಗಳು ಖುದ್ದು ಜೈಲಾಧಿಕಾರಿಗಳ ಬಳಿ ಮನವಿ ಮಾಡಿದ್ದು ಈ ನಡುವೆ ಒಳ ಸಂದರ್ಶನದ ರೂಲ್ಸ್ ಬಗ್ಗೆ ಸಿಬ್ಬಂದಿ ಮತ್ತು ಅಧಿಕಾರಿಗಳಿಂದ ಕುಟುಂಬಸ್ಥರಿಗೆ ಅರಿವು ಮೂಡಿಸಿದ್ದಾರೆ.
ಒಳ ಸಂದರ್ಶನದ ಬಗ್ಗೆ ತಿಳಿಸಿದ ಬಳಿಕ ಕೆಲ ಕುಟುಂಬಸ್ಥರು ತಟಸ್ಥರಾಗಿದ್ದು ನಾಲ್ಕೈದು ಮಂದಿ ಮಾತ್ರ ಕೈದಿಗಳು ಬರವಣಿಗೆಯಲ್ಲಿ ಮನವಿ ಕೊಟ್ಟಿದ್ದಾರೆ. ಸದ್ಯ ಇದಕ್ಕೆ ಸ್ಪಷ್ಟ ಕಾರಣ ಏನು ಎಂಬುದರ ಬಗ್ಗೆ ಪರಿಶೀಲನೆ ಮಾಡುವಂತೆ ಸೂಚನೆ ನೀಡಲಾಗಿದೆ.
ಕಾರಣ ನಿಜವಾಗಿದ್ದಲ್ಲಿ ಕೈದಿಗೆ ಸಮಸ್ಯೆ ಇದ್ದಲ್ಲಿ ಬಿಡಲು ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಇಬ್ಬರು ಶಂಕಿತ ಉಗ್ರರು ಹಾಗು ಓರ್ವ ನಕ್ಸಲ್ ವ್ಯಕ್ತಿಗೆ ಒಳ ಸಂದರ್ಶನಕ್ಕೆ ಅನುಮತಿ ನೀಡಲಾಗಿದೆ.
ಜೈಲಿಗೆ ಕುಟುಂಬ ಭೇಟಿ ವಿಚಾರದಲ್ಲಿ ಮಾನಸಿಕ ಸಮಸ್ಯೆವುಳ್ಳ ಕೈದಿಗಳ ಕುಟುಂಬಸ್ಥರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಕೌನ್ಸಲಿಂಗ್ ವೈದ್ಯರಿಂದ ತಪಾಸಣೆ ಮಾಡಿಸಿ ಕುಟುಂಬಸ್ಥರ ಭೇಟಿಗೆ ಅವಕಾಶ ನೀಡಲಾಗುತ್ತದೆ. ಈ ಮೂಲಕ ಡಿಜಿ ಅಲೋಕ್ ಕುಮಾರ್ ಜೈಲಾಕಾರಿಗಳಿಗೆ ಸೂಚನೆ ನೀಡಲಾಗಿದೆ.
ವರದಿ: ಗಂಗಾಧರ ವಾಗಟ, ನ್ಯೂಸ್18 ಕನ್ನಡ ಪ್ರತಿನಿಧಿ, ಬೆಂಗಳೂರು
Bangalore,Karnataka
May 20, 2026 11:36 AM IST













