Last Updated:
Shah Rukh Khan: ಬಾಲಿವುಡ್ನ ಸ್ಟಾರ್ ನಟ ಶಾರುಖ್ ಖಾನ್ ಅವರು ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಯಾವ ಸ್ಥಳ? ಯಾವ ಟೈಮ್? ಸಂಪೂರ್ಣ ಮಾಹಿತಿ ಇಲ್ಲಿದೆ.
ಬಾಲಿವುಡ್ ಕಿಂಗ್ ಖಾನ್, ಪ್ರೀತಿಯಲ್ಲಿ ಜನ ನಂಬಿಕೆ ಇಡುವಂತೆ ಮಾಡಿದ ಬಾಲಿವುಡ್ (Bollywood) ಸ್ಟಾರ್ ನಟ ಶಾರುಖ್ ಖಾನ್ (Shah Rukh Khan) ಎಂದರೆ ಹಲವರು ಇದನ್ನು ಒಪ್ಪುತ್ತಾರೆ. ತೊಂಭತ್ತರ ದಶಕದಲ್ಲಿ ಅತ್ಯಂತ ಸುಂದರವಾದ ರೊಮ್ಯಾಂಟಿಕ್ ಪ್ರಣಯ ಸಿನಿಮಾಗಳನ್ನು ಕೊಟ್ಟ ಯುವತಿಯರ ಧಡ್ಕನ್! ಸೂಪರ್ಸ್ಟಾರ್ನ ಒಂದು ಲುಕ್ ಸಿಕ್ಕಿದರೆ ಸಾಕು, ನಮ್ಮ ದಿನ, ತಿಂಗಳು ಅಥವಾ ವರ್ಷವನ್ನು ಜೀವನದ ಅತ್ಯಂತ ಸ್ಮರಣೀಯ ಕ್ಷಣವಾಗಿ ಮಾಡಬಹುದು.
ಈಗ ಮಂಗಳೂರಿನ ಶಾರುಖ್ ಖಾನ್ ಅಭಿಮಾನಿಗಳಿಗೆ ರೋಮಾಂಚಕಾರಿ ಸುದ್ದಿ ಇದೆ. ಬಾಲಿವುಡ್ ಐಕಾನ್ ಕರಾವಳಿ ನಗರಕ್ಕೆ ಭೇಟಿ ನೀಡಲು ಸಜ್ಜಾಗಿದ್ದಾರೆ.
ಶಾರುಖ್ ಖಾನ್ ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಮಂಗಳೂರಿಗೆ ಭೇಟಿ ನೀಡುವ ಸೆಲೆಬ್ರಿಟಿಗಳಲ್ಲಿ ಶಾರುಖ್ ಖಾನ್ ಕೂಡ ಒಬ್ಬರು. ಅವರ ಅಭಿಮಾನಿಗಳು ಖಂಡಿತವಾಗಿಯೂ ಥ್ರಿಲ್ ಆಗುತ್ತಾರೆ.
ಬಾಲಿವುಡ್ ಸೂಪರ್ಸ್ಟಾರ್ ಜೂನ್ 25, 2026 ರಂದು ನಗರಕ್ಕೆ ಭೇಟಿ ನೀಡಲು ಸಜ್ಜಾಗಿದ್ದಾರೆ. ಶಾರುಖ್ ಖಾನ್ “ಆನ್ ಈವ್ನಿಂಗ್ ವಿತ್ ಶಾರುಖ್ ಖಾನ್” ಎಂಬ ವಿಶೇಷ ಕಾರ್ಯಕ್ರಮಕ್ಕಾಗಿ ಮಂಗಳೂರಿಗೆ ಬರುತ್ತಿದ್ದಾರೆ. ರೋಹನ್ ಕಾರ್ಪೊರೇಷನ್ ಆಯೋಜಿಸಿರುವ ಈ ಕಾರ್ಯಕ್ರಮವು ಜೂನ್ 25 ರಂದು ಅಡ್ಯಾರ್ ಗಾರ್ಡನ್ನಲ್ಲಿ ನಡೆಯಲಿದ್ದು, ನಗರದಾದ್ಯಂತ ಹೆಚ್ಚಿನ ಗಮನ ಸೆಳೆಯುವ ನಿರೀಕ್ಷೆಯಿದೆ.
ಈ ಕಾರ್ಯಕ್ರಮದಲ್ಲಿ ರೋಹನ್ ಕಾರ್ಪೊರೇಷನ್ನ ಹೊಸ ವಸತಿ ಯೋಜನೆಯಾದ ರೋಹನ್ ಮರೀನಾ ಒನ್ ಉದ್ಘಾಟನೆಯೂ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ಶಾರುಖ್ ಖಾನ್ ಉಪಸ್ಥಿತರಿರುತ್ತಾರೆ. ಸುರತ್ಕಲ್ನ NITK ಬಳಿ ಇರುವ ಈ ಯೋಜನೆಯು 2, 3 ಮತ್ತು 4 BHK ಐಷಾರಾಮಿ ಅಪಾರ್ಟ್ಮೆಂಟ್ಗಳನ್ನು ಮಾಡಲಾಗಿದೆ. ಪ್ರತಿಯೊಂದು ಅಪಾರ್ಟ್ಮೆಂಟ್ ಬೀಚ್ ವ್ಯೂ ಹೊಂದಿದ್ದು, ಇದು ಮಂಗಳೂರಿನ ಮೊದಲ ಸೀ ಫೇಸಿಂಗ್ ರೆಸಿಡೆನ್ಶಿಯಲ್ ಪ್ರಾಜೆಕ್ಟ್ ಆಗಿದೆ.
ಸೂಪರ್ಸ್ಟಾರ್ ಜೂನ್ 25 ರಂದು ರೋಹನ್ ಕಾರ್ಪೊರೇಷನ್ ಆಯೋಜಿಸುವ ವಿಶೇಷ ಕಾರ್ಯಕ್ರಮಕ್ಕಾಗಿ ನಗರಕ್ಕೆ ಭೇಟಿ ನೀಡಲಿದ್ದಾರೆ.
ಆದರೆ ಈ ಕಾರ್ಯಕ್ರಮಕ್ಕೆ ಹೋಗಬೇಕಾದರೆ ನಿಮಗೆ ಆಹ್ವಾನ ಪತ್ರ ಬೇಕಾಗುತ್ತದೆ. ಈ ಕಾರ್ಯಕ್ರಮವು ಸಾರ್ವಜನಿಕರಿಗೆ ಮುಕ್ತವಾಗಿಲ್ಲ. ಆಹ್ವಾನಿತ ಅತಿಥಿಗಳು ಮತ್ತು ಅಧಿಕೃತ ಪಾಸ್ ಹೊಂದಿರುವವರಿಗೆ ಮಾತ್ರ ಬರಬಹುದಾಗಿದೆ. ಜೂನ್ 25 ರಂದು ಸಂಜೆ 4 ಗಂಟೆಗೆ ಗೇಟ್ಗಳು ತೆರೆಯಲ್ಪಡುತ್ತವೆ. ಭಾಗವಹಿಸುವವರು ಪ್ರವೇಶಕ್ಕಾಗಿ ವಾಲಿಡ್ ಆಹ್ವಾನ ಪತ್ರಿಕೆ ಅಥವಾ ಅಧಿಕೃತ ಇವೆಂಟ್ ಪಾಸ್ ಅನ್ನು ಹೊಂದಿರಬೇಕು.
“ರೋಹನ್ ಕಾರ್ಪೊರೇಷನ್ಗೆ ಇದು ಹೆಮ್ಮೆಯ ಕ್ಷಣ, ಮತ್ತು ನಮ್ಮ ದೃಷ್ಟಿಕೋನ, ನಮ್ಮ ಬೆಳವಣಿಗೆ ಮತ್ತು ನಾವು ನಿರ್ಮಿಸಲು ಹೊರಟಿರುವ ಯೋಜನೆಗಳ ಪ್ರತಿಬಿಂಬ ಇದು. ಶಾರುಖ್ ಖಾನ್ ಅವರನ್ನು ಮಂಗಳೂರಿಗೆ ಸ್ವಾಗತಿಸುವುದು ವಿಶೇಷ ಕ್ಷಣ. ನಮ್ಮೊಂದಿಗೆ ಸೇರುವ ಪ್ರತಿಯೊಬ್ಬ ಅತಿಥಿಯೊಂದಿಗೆ ಈ ಮೊಮೆಂಟ್ ಶೇರ್ ಮಾಡಲು ನಾವು ಕಾಯುತ್ತಿದ್ದೇವೆ” ಎಂದು ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ರೋಹನ್ ಮೊಂತೆರೊ ಹೇಳಿದರು.
Bangalore,Karnataka













