IRE vs IND: ಟೀಮ್ ಇಂಡಿಯಾ ವಿರುದ್ಧ ‘ಭಾರತದ ಮಗ’ನ ಡೆಬ್ಯೂ? ಗಲ್ಲಿ ಕ್ರಿಕೆಟ್​​ನಿಂದ ಐರ್ಲೆಂಡ್ ತಂಡಕ್ಕೆ ರೋಚಕ ಜರ್ನಿ, ಯಾರು ಈ ಕಿಲಾಡಿ ಪ್ಲೇಯರ್? | ಕ್ರೀಡಾ ಸುದ್ದಿ | ACTPnews

ಜೈ ಮೂಂದ್ರ


Last Updated:

ಭಾರತ ತಂಡ ಎರಡು ಪಂದ್ಯಗಳ ಟಿ20ಐ ಸರಣಿಗಾಗಿ ಐರ್ಲೆಂಡ್ ಪ್ರವಾಸ ಮಾಡುತ್ತಿದೆ. ಈ ಸರಣಿಗಾಗಿ ಐರ್ಲೆಂಡ್ ತಂಡದಲ್ಲಿ ಭಾರತದಲ್ಲಿ ಹುಟ್ಟಿದ ಕಿಲಾಡಿ ಪ್ಲೇಯರ್ ಸ್ಥಾನ ಪಡೆದಿದ್ದಾರೆ. ಗಲ್ಲಿ ಕ್ರಿಕೆಟ್​​ನಿಂದ ಐರ್ಲೆಂಡ್ ತಂಡಕ್ಕೆ ಅವರ ಪ್ರಯಾಣ ಹೇಗಿತ್ತು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ ಓದಿ.

ಜೈ ಮೂಂದ್ರ
ಜೈ ಮೂಂದ್ರ

ಭಾರತ (India) ಮತ್ತು ಐರ್ಲೆಂಡ್ (Ireland) ನಡುವಿನ ಎರಡು ಪಂದ್ಯಗಳ ಟಿ20 ಸರಣಿ (Series) ಜೂನ್ 26 ರಿಂದ ಆರಂಭವಾಗಲಿದೆ. ಜೂನ್ 26 ಮತ್ತು 28 ರಂದು ಬೆಲ್‌ಫಾಸ್ಟ್‌(Belfast)ನಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಲಿವೆ. ಐರ್ಲೆಂಡ್ ಇತ್ತೀಚೆಗೆ ತಮ್ಮ ತಂಡವನ್ನು ಘೋಷಿಸಿದ್ದು, ಇದರಲ್ಲಿ ಭಾರತದಲ್ಲಿ ಹುಟ್ಟಿದ ಆಲ್‌ರೌಂಡರ್ ಕೂಡ ಇದ್ದಾರೆ. ಅವರು ಐರ್ಲೆಂಡ್ ಪರ ಆಡಿದ ಎರಡನೇ ಏಷ್ಯನ್ (Asian) ಕ್ರಿಕೆಟಿಗರಾಗಲಿದ್ದಾರೆ. ಇದಕ್ಕೂ ಮೊದಲು, ಐರ್ಲೆಂಡ್ ಪರ ಪಾದಾರ್ಪಣೆ ಮಾಡಲಿರುವ ಈ ಭಾರತದ ಕಿಲಾಡಿ ಪ್ಲೇಯರ್ ಯಾರು ಎಂಬುದರ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ.

ಟೀಮ್ ಇಂಡಿಯಾ ವಿರುದ್ಧ ಪಾದಾರ್ಪಣೆ ಮಾಡಲು ರೆಡಿಯಾಗಿರುವ ಭಾರತದ ಮಗ ಬೇರೆ ಯಾರು ಅಲ್ಲ, ಜೈ ಮೂಂದ್ರ. ಇವರು ರಾಜಸ್ಥಾನ ಮೂಲದ ಆಲ್‌ರೌಂಡರ್. ಸದ್ಯ ಐರ್ಲೆಂಡ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಅಖಾಡಕ್ಕೆ ಧುಮುಕಲು ರೆಡಿಯಾಗಿದ್ದಾರೆ. ಅಷ್ಟಕ್ಕೂ ರಾಜಸ್ಥಾನದಿಂದ ಐರ್ಲೆಂಡ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದು ಹೇಗೆ ಗೊತ್ತಾ?

ಭಾರತದಲ್ಲಿ ಜನನ 

ರಾಜಸ್ಥಾನದ ಜೈಪುರದಿಂದ 100 ಕಿಲೋಮೀಟರ್ ದೂರದಲ್ಲಿರುವ ಟೋಂಕ್ ಎಂಬ ಸಣ್ಣ ಪಟ್ಟಣದಲ್ಲಿ ಮೂಂದ್ರ ಜನಿಸಿದರು. ಅವರು ಚಿಕ್ಕ ವಯಸ್ಸಿನಿಂದಲೇ ಕ್ರಿಕೆಟ್ ಬಗ್ಗೆ ಒಲವು ಹೊಂದಿದ್ದರು. ಹಾಗಾಗಿ ಕ್ರಿಕೆಟ್ ಅಕಾಡೆಮಿಯನ್ನು ಸಹ ಸೇರಿದರು. ಆರಂಭದಲ್ಲಿ ವೇಗದ ಬೌಲರ್ ಆಗಿದ್ದರು. ನಂತರ ಕೆಲವು ವರ್ಷಗಳಲ್ಲಿ ಅವರ ಪಾತ್ರ ಬದಲಾಯಿತು. ಹೌದು, ತಮ್ಮ 16ನೇ ವಯಸ್ಸಿಗೆ ಅವರು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಮತ್ತು ಎಡಗೈ ಸ್ಪಿನ್ನರ್ ಆದರು.

ಆ ನಿರ್ಧಾರದಿಂದ ಎಲ್ಲವೂ ಬದಲಾಯಿತು!

ಜೈ ಮೂಂದ್ರ ಅವರು 2019 ರಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡರು. ಅವರು ಕೈ ತುಂಬ ಸಂಬಳ ಬರುವ ಕೆಲಸವನ್ನು ತ್ಯಜಿಸಿ ಕ್ರಿಕೆಟ್‌ಗೆ ಕೊನೆಯ ಅವಕಾಶ ನೀಡಿದರು. 2021 ರಲ್ಲಿ ಅವರು ಸ್ನಾತಕೋತ್ತರ ಪದವಿ ಪಡೆಯಲು ಐರ್ಲೆಂಡ್‌ಗೆ ತೆರಳಿದರು. ಅಲ್ಲಿ ಅವರು ಡಬ್ಲಿನ್‌ನ ಲೀನ್‌ಸ್ಟರ್ ಕ್ರಿಕೆಟ್ ಕ್ಲಬ್‌ಗೆ ಸೇರಿದರು. ಇಲ್ಲಿಂದ ಅವರ ಕ್ರಿಕೆಟ್ ವೃತ್ತಿಜೀವನ ಬದಲಾಯಿತು.

ಆಯ್ಕೆದಾರ ಗಮನ ಸೆಳೆದಿದ್ದೇಗೆ?

ಲೀನ್‌ಸ್ಟರ್ ಕ್ರಿಕೆಟ್ ಕ್ಲಬ್‌ ಪರ ಆಡಿದ ಹಲವು ಪಂದ್ಯಗಳಲ್ಲಿ ಜೈ ಮೂಂದ್ರ ಮಿಂಚಿದರು. ಈ ಮೂಲಕ ಐರಿಶ್ ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿದರು. ಐರಿಶ್ ಸೀನಿಯರ್ ಕಪ್‌ 2023 ರಲ್ಲಿ ಲೀನ್‌ಸ್ಟರ್ ತಂಡವನ್ನು ಐತಿಹಾಸಿಕ ಗೆಲುವಿನತ್ತ ಕೊಂಡೊಯ್ಯುವಲ್ಲಿ ಜೈ ಮೂಂದ್ರ ಪ್ರಮುಖ ಪಾತ್ರ ವಹಿಸಿದರು.

ಐರಿಶ್ ಸೀನಿಯರ್ ಕಪ್‌ನಲ್ಲಿ ಲೀನ್‌ಸ್ಟರ್ ತಂಡ ಚಾಂಪಿಯನ್ ಆಗುತ್ತಿದ್ದಂತೆ  ಜೈ ಮೂಂದ್ರ ಅವರು ರಾಷ್ಟ್ರೀಯ ಆಯ್ಕೆದಾರರ ಗಮನ ಸೆಳೆದರು. ಬಳಿಕ ಅವರು ತಮ್ಮ ಪ್ರದರ್ಶನವನ್ನು ಸುಧಾರಿಸಿಕೊಂಡು ಈಗ ಐರ್ಲೆಂಡ್‌ನ ಟಿ20ಐ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಭಾರತ ವಿರುದ್ಧದ ಟಿ20ಐ ಸರಣಿಗೆ ಐರ್ಲೆಂಡ್ ತಂಡ: ಲೋರ್ಕನ್ ಟಕರ್ (ನಾಯಕ), ರಾಸ್ ಅಡೈರ್, ಬೆನ್ ಕ್ಯಾಲಿಟ್ಜ್, ಗ್ಯಾರೆತ್ ಡೆಲಾನಿ, ಜಾರ್ಜ್ ಡಾಕ್ರೆಲ್, ಸ್ಟೀಫನ್ ಡೊಹೆನಿ, ಮ್ಯಾಥ್ಯೂ ಹಂಫ್ರೀಸ್, ಗ್ಯಾವಿನ್ ಹೋಯ್, ಮ್ಯಾಥ್ಯೂ ಹೊಲ್ಲಾರ್ಡ್, ಲಿಯಾಮ್ ಮೆಕಾರ್ಥಿ, ಜೇ ಮೂಂದ್ರಾ, ಹ್ಯಾರಿ ಟೆಕ್ಟರ್, ಟಿಮ್ ಟೆಕ್ಟರ್ ಮತ್ತು ರೂಬೆನ್ ವಿಲ್ಸನ್.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

IRE vs IND: ಟೀಮ್ ಇಂಡಿಯಾ ವಿರುದ್ಧ ‘ಭಾರತದ ಮಗ’ನ ಡೆಬ್ಯೂ? ಗಲ್ಲಿ ಕ್ರಿಕೆಟ್​​ನಿಂದ ಐರ್ಲೆಂಡ್ ತಂಡಕ್ಕೆ ರೋಚಕ ಜರ್ನಿ, ಯಾರು ಈ ಕಿಲಾಡಿ ಪ್ಲೇಯರ್?



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports