Last Updated:
ಐಎಸ್ಬಿಟಿ ಕಡೆಯಿಂದ ಬರುತ್ತಿದ್ದ ಬಸ್ ಬೆಳಿಗ್ಗೆ 11 ಗಂಟೆ ಸುಮಾರಿಗೆ ಫುಟ್ಪಾತ್ನಲ್ಲಿ ಕುಳಿತಿದ್ದ ಕಾರ್ಮಿಕರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ. ಮೃತ 22 ವರ್ಷದ ಯುವಕ ರಾಜೀವ್ ನಗರದ ನಿವಾಸಿಯಾಗಿದ್ದು, ಗಾಯಾಳುಗಳನ್ನು ಸಂಜೀತ್, ರತನ್, ಮಾನ್ಸಿಂಗ್, ಅಹದ್ ಮತ್ತು ಸುಖರಾಜ್ ಎಂದು ಗುರುತಿಸಲಾಗಿದೆ.
ಡೆಹ್ರಾಡೂನ್: ಬಸ್ಸೊಂದು ಪಾದಚಾರಿ ಮಾರ್ಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಕಾರ್ಮಿಕ ಸಾವನ್ನಪ್ಪಿದ್ದು, ಇತರ ನಾಲ್ವರು ಗಾಯಗೊಂಡಿರುವ ಹೃದಯ ವಿದ್ರಾವಕ ಘಟನೆ ಉತ್ತರಾಖಂಡದಲ್ಲಿ (Bus Accident) ನಡೆದಿದೆ.
ಉತ್ತರಾಖಂಡದ ಡೆಹ್ರಾಡೂನ್ನ ಪಟೇಲ್ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಲಾಲ್ ಪುಲ್ ಬಳಿ ಈ ದುರ್ಘಟನೆ ಸಂಭವಿಸಿದ್ದು, ಬಸ್ ಪಾದಚಾರಿ ಮಾರ್ಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಕಾರ್ಮಿಕ ಸಾವನ್ನಪ್ಪಿದ್ರೆ, ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಐಎಸ್ಬಿಟಿ ಕಡೆಯಿಂದ ಬರುತ್ತಿದ್ದ ಬಸ್ ಬೆಳಿಗ್ಗೆ 11 ಗಂಟೆ ಸುಮಾರಿಗೆ ಫುಟ್ಪಾತ್ನಲ್ಲಿ ಕುಳಿತಿದ್ದ ಕಾರ್ಮಿಕರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ. ಮೃತ 22 ವರ್ಷದ ಯುವಕ ರಾಜೀವ್ ನಗರದ ನಿವಾಸಿಯಾಗಿದ್ದು, ಗಾಯಾಳುಗಳನ್ನು ಸಂಜೀತ್, ರತನ್, ಮಾನ್ಸಿಂಗ್, ಅಹದ್ ಮತ್ತು ಸುಖರಾಜ್ ಎಂದು ಗುರುತಿಸಲಾಗಿದೆ. ಅವರು ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಾರ್ಮಿಕರು ಪಾದಚಾರಿ ಮಾರ್ಗದಲ್ಲಿ ಕಾಯುತ್ತಿದ್ದಾಗ ವೇಗವಾಗಿ ಬಂದ ಬಸ್ ಇದ್ದಕ್ಕಿದ್ದಂತೆ ಬದಿಗೆ ಸರಿದು ಪಾದಚಾರಿ ಮಾರ್ಗಕ್ಕೆ ಬಂದಿತು. ಆದರೆ, ಬಸ್ ಹೋಟೆಲ್ ಗೇಟ್ ಬಳಿ ನಿಂತಿದ್ದರಿಂದ ದೊಡ್ಡ ದುರಂತವೊಂದು ತಪ್ಪಿತು. ಇಲ್ಲದಿದ್ದರೆ ಅನೇಕ ಮಂದಿ ಸಾವನ್ನಪ್ಪುವ ಅತಂಕ ಇತ್ತು ಎಂದು ಹೇಳಲಾಗಿದೆ.
ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಮೋದ್ ದೋಬಾಲ್ ಮಾತನಾಡಿ, ಪ್ರಾಥಮಿಕವಾಗಿ ಚಾಲಕನಿಗೆ ಸೆಳೆತ ಉಂಟಾಗಿ ವಾಹನದ ನಿಯಂತ್ರಣ ತಪ್ಪಿದಂತೆ ಕಾಣುತ್ತಿದೆ. ‘ಅವರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಮತ್ತು ಯಾರಾದರೂ ತಪ್ಪಿತಸ್ಥರೆಂದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಹೇಳಿದರು.
Dehradun,Uttarakhand (Uttaranchal)













