Last Updated:
ಮಸ್ಸೂರಿ ಕಿಯಾನಾ ಹೋಂಸ್ಟೇಯಲ್ಲಿ ರಾಧಾ ಗಾಯತ್ರಿ ಸಂಶಯಾಸ್ಪದ ಸಾವು, ತಂದೆ ಸುಧಾಕರ್ ದೂರಿನ ಮೇರೆಗೆ ಪತಿ ಶ್ರೀಚರಣ್ ಮೇಲೆ ಕೊಲೆ ಕೇಸ್, ವಾಯ್ಸ್ ಮೆಸೇಜ್ ಮತ್ತು ಮದ್ಯ, ಔಷಧಿ ಸುಳಿವುಗಳಿಂದ ತನಿಖೆ ತೀವ್ರ.
ಮಸ್ಸೂರಿ (ಉತ್ತರಾಖಂಡ): ಪ್ರೀತಿ (Love) ಜಗತ್ತಿನ ಅತ್ಯಂತ ಸುಂದರ ಭಾವನೆ. ಆದರೆ ಇತ್ತೀಚಿನ ದಿನಗಳಲ್ಲಿ ಅದು ಸಂದರ್ಭಕ್ಕನುಸಾರ ಬದಲಾಗುವ ಒಂದು ಭಾವನೆಯಾಗಿದೆ. ಇತ್ತೀಚೆಗೆ ಭಾವನೆಗಳಿಗಿಂತಲೂ ಹೆಚ್ಚಾಗಿ ಲೈಂಗಿಕತೆ ಮತ್ತು ಟೈಮ್ಪಾಸ್ಗೆ (Timepass) ಸೀಮಿತವಾಗುತ್ತಿದೆ. ಜನರು ಬೇಗನೆ ಪ್ರೀತಿಯಲ್ಲಿ ಬೀಳುತ್ತಾರೆ, ಆದರೆ ನಿಜವಾದ ಪ್ರೀತಿ ನಂಬಿಕೆ (Belive), ನಿಷ್ಠೆ ಮತ್ತು ಕಷ್ಟ-ಸುಖಗಳಲ್ಲಿ ಜೊತೆಯಾಗಿ ನಿಲ್ಲುವುದರ ಮೇಲೆ ನಿಂತಿದೆ ಎಂಬುದನ್ನು ಅನೇಕರು ಮರೆತುಬಿಡುತ್ತಾರೆ. ನಿಜವಾದ ಪ್ರೀತಿ ಕ್ಷಣಿಕ ಮೂಡ್ಗಳ ಆಟವಲ್ಲ; ಅದು ಗೌರವದಿಂದ ಹುಟ್ಟಿ ಜೀವನಪೂರ್ತಿ ಉಳಿಯುವ ಬಂಧ. ಆದರೆ, ಅದೇ ಪ್ರೀತಿ ಮಾಡಿ ಮದುವೆಯಾಗಿ ಕೊನೆಗೆ ಆಕೆಯನ್ನೇ ಹನಿಮೂನ್ಗೆಂದು (Honeymoon) ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ ಪಾಪಿ ಪತಿ. ಆ ಕುರಿತ ವರದಿ ಇಲ್ಲಿದೆ.
ಉತ್ತರಾಖಂಡದ ಮಸ್ಸೂರಿ-ಧನೌಲ್ತಿ ರಸ್ತೆಯಲ್ಲಿರುವ ಕಿಯಾನಾ ಹೋಂಸ್ಟೇಯಲ್ಲಿ ಜೂನ್ 15, 2026 ರಂದು ರಾಧಾ ಗಾಯತ್ರಿ ಶವವಾಗಿ ಪತ್ತೆಯಾಗಿದ್ದರು. ಪತಿಯ ಹುಟ್ಟುಹಬ್ಬ ಆಚರಿಸಲು ದಂಪತಿ ಅಲ್ಲಿಗೆ ತೆರಳಿದ್ದರು. ಶ್ರೀಚರಣ್ ಹೇಳಿಕೆಯ ಪ್ರಕಾರ, ಜೂನ್ 14 ರ ರಾತ್ರಿ ಮದ್ಯ ಸೇವಿಸಿ ಮಲಗಿದ್ದೆವು, ಬೆಳಿಗ್ಗೆ ಎದ್ದಾಗ ಪತ್ನಿ ನೆಲದ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು. ಆಕೆಯ ಮೂಗಿನಿಂದ ರಕ್ತ ಸೋರುತ್ತಿತ್ತು, ಮೃತದೇಹ ಬೆತ್ತಲೆಯಾಗಿ ಮೂತ್ರದಲ್ಲಿ ನೆನೆದಿತ್ತು. ಹಾಸಿಗೆಯ ಮೇಲೆ ರಕ್ತದ ಕಲೆಗಳು ಪತ್ತೆಯಾಗಿದ್ದವು. ಆರಂಭದಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಾಗಿತ್ತು. ಆದರೆ ರಾಧಾ ಅವರ ತಂದೆ ನಿವೃತ್ತ ಯೋಧ ಸುಧಾಕರ್ ನೀಡಿದ ದೂರಿನ ಆಧಾರದ ಮೇಲೆ ಜೂನ್ 21 ರಂದು ಶ್ರೀಚರಣ್ ವಿರುದ್ಧ ಕೊಲೆ ಕೇಸ್ ದಾಖಲಿಸಲಾಗಿದೆ.
ಮೃತ ರಾಧಾ ತಂದೆ ಸುಧಾಕರ್ ಅವರು ಶ್ರೀಚರಣ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. “ಪತಿ ಶ್ರೀಚರಣ್ ಮಾನಸಿಕ ಹಿಂಸೆ ನೀಡುತ್ತಿದ್ದರು, ಸಾವಿಗೆ ಕಾರಣವಾಗಬಹುದಾದ ಔಷಧಿಗಳನ್ನು ನೀಡಿರಬಹುದು” ಎಂದು ದೂರಿದ್ದಾರೆ. ಋಷಿಕೇಶ ಮತ್ತು ಹರಿದ್ವಾರ ಯಾತ್ರೆಯ ಬಗ್ಗೆ ಮಾತ್ರ ಹೇಳಿ ಮಸ್ಸೂರಿ ಪ್ರವಾಸದ ಮಾಹಿತಿಯನ್ನು ಮುಚ್ಚಿಟ್ಟಿದ್ದರು. ಬೆಳಗಿನ ಜಾವ 1.36 ರಿಂದ 1.38 ರ ನಡುವೆ ಕಳುಹಿಸಿದ ಸೆಲ್ಫಿ ಅನುಮಾನಾಸ್ಪದವಾಗಿತ್ತು. ಬಂಗೀ ಜಂಪ್ಗೆ ಹೋಗಿದ್ದೇವೆ ಎಂದರೂ ಅದಕ್ಕೆ ಸಂಬಂಧಿಸಿದ ಫೋಟೋಗಳಿಲ್ಲ ಎಂದು ಆರೋಪಿಸಿದ್ದಾರೆ. ಹೋಟೆಲ್ನಲ್ಲಿ ಮದ್ಯ ಸರಬರಾಜು ಮಾಡುವುದಿಲ್ಲ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಆದರೆ ಕೋಣೆಯಲ್ಲಿ ಖಾಲಿ ಮದ್ಯದ ಬಾಟಲಿಗಳು ಮತ್ತು ಔಷಧಿ ಪಟ್ಟಿಗಳು ಪತ್ತೆಯಾಗಿವೆ.
ಡೆಹ್ರಾಡೂನ್ನ ಕೊರೊನೇಷನ್ ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ಯಾವುದೇ ಬಾಹ್ಯ ಗಾಯಗಳು ಕಂಡುಬಂದಿಲ್ಲ. ಆಂತರಿಕ ಅಂಗಗಳನ್ನು ವಿಷವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ರಾಧಾ ಗಾಯತ್ರಿಗೆ ಕಡಿಮೆ ರಕ್ತದೊತ್ತಡದ ಸಮಸ್ಯೆ ಇತ್ತು ಎಂದು ಕುಟುಂಬ ಹೇಳಿದೆ. ಆದರೆ ಆಕೆ ಮದ್ಯಪಾನ ಮಾಡುತ್ತಿರಲಿಲ್ಲ ಎಂದು ಪೋಷಕರು ವಾದಿಸಿದ್ದಾರೆ. ವಿಧಿವಿಜ್ಞಾನ ವರದಿ, ಒಳಾಂಗಗಳ ಪರೀಕ್ಷೆ, ಸಿಸಿಟಿವಿ ದೃಶ್ಯಾವಳಿ ಮತ್ತು ಮೊಬೈಲ್ ಡೇಟಾ ಆಧರಿಸಿ ತನಿಖೆ ನಡೆಯುತ್ತಿದೆ.
ಆದರೆ ಶ್ರೀಚರಣ್ ತಾನು ನಿರಪರಾಧಿ ಎಂದು ಹೇಳುತ್ತಿದ್ದಾರೆ. ನಾವಿಬ್ಬರೂ ಸ್ವಇಚ್ಛೆಯಿಂದ ಮದುವೆಯಾಗಿದ್ದೇವೆ, ನಾನು ತಪ್ಪು ಮಾಡಿದ್ದರೆ ಇಲ್ಲಿ ಏಕೆ ಇರುತ್ತಿದ್ದೆ, ಮರಣೋತ್ತರ ವರದಿಯಲ್ಲಿ ಸತ್ಯ ಬಹಿರಂಗವಾಗುತ್ತದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಹೋಟೆಲ್ ಪ್ಯಾಕೇಜ್ನಲ್ಲಿ ಮದ್ಯ ಇತ್ತು ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ ಕೊಲೆ ಕೇಸ್ ದಾಖಲಾದ ನಂತರ ಸಿಂಹಾಚಲಂ ಲಾಡ್ಜ್ನಿಂದ ಶ್ರೀಚರಣ್ ನಾಪತ್ತೆಯಾಗಿದ್ದಾರೆ. ಕೌಂಟರ್ನಲ್ಲಿ ಕೀ ಬಿಟ್ಟು ತೆರಳಿದ್ದು ಪೊಲೀಸರ ಅನುಮಾನ ಹೆಚ್ಚಿಸಿದೆ. ಉತ್ತರಾಖಂಡ ಮತ್ತು ಆಂಧ್ರ ಪೊಲೀಸರು ಅವರಿಗಾಗಿ ಶೋಧ ನಡೆಸುತ್ತಿದ್ದಾರೆ.
Mussoorie,Dehradun,Uttarakhand (Uttaranchal)
Jun 23, 2026 10:02 PM IST













