Last Updated:
MLC 2026: ಡಲ್ಲಾಸ್ನಲ್ಲಿ ಸಿಯಾಟಲ್ ಓರ್ಕಾಸ್ ಮತ್ತು ಏಂಜಲೀಸ್ ನೈಟ್ ರೈಡರ್ಸ್ ನಡುವೆ MLC ಯ ಆರನೇ ಲೀಗ್ ಪಂದ್ಯ ನಡೆಯುತ್ತಿತ್ತು. ಏಂಜಲೀಸ್ ನೈಟ್ ರೈಡರ್ಸ್ ಮೊದಲು ಬ್ಯಾಟಿಂಗ್ ಮಾಡಿತು. ಈ ವೇಳೆ ತಂಡವು ಅದ್ಭುತ ಆರಂಭವನ್ನು ಪಡೆಯಿತು.
ಕ್ರಿಕೆಟ್ ಸೆನ್ಸೇಷನಲ್ ಆಟಗಾರ ವೈಭವ್ ಸೂರ್ಯವಂಶಿಯ ಆಟಕ್ಕೆ ಜಗತ್ತೇ ನಿಬ್ಬೆರಗಾಗಿದೆ. ವೈಭವ್ ಅಸಾಮಾನ್ಯ ಆಟದ ಬಗ್ಗೆಯೇ ಜನರ ಬಾಯಲ್ಲಿ ಮಾತುಗಳು ಹರಿದಾಡುತ್ತಿವೆ. ಈತನ್ಮಧ್ಯೆ ಮತ್ತೊಬ್ಬ ಆಟಗಾರ ಇದ್ದಕ್ಕಿದ್ದಂತೆ ಪ್ರಸಿದ್ಧಿಗೆ ಬಂದಿದ್ದಾರೆ. ಒಂದೇ ಓವರ್ನಲ್ಲಿ ನಿರಂತರವಾಗಿ 5 ಸಿಕ್ಸ್ ಹೊಡೆದು ಇನ್ನೇನು ಸತತ 6ನೇ ಸಿಕ್ಸರ್ ಹೊಡೆಯಬೇಕು ಅನ್ನೋವಷ್ಟರಲ್ಲಿ ಆ ಆಟಗಾರ (Rovman Powell) ಜಸ್ಟ್ ಮಿಸ್ ಆಗಿ ವಿಕೆಟ್ ಕಳೆದುಕೊಂಡಿದ್ದಾರೆ.
ಅಂದಹಾಗೆ, ಅಮೆರಿಕದಲ್ಲಿ ಮೇಜರ್ ಲೀಗ್ ಕ್ರಿಕೆಟ್ ನಡೆಯುತ್ತಿದೆ, ಈ ಲೀಗ್ನಲ್ಲಿ ವೆಸ್ಟ್ ಇಂಡೀಸ್ ಬ್ಯಾಟ್ಸ್ಮನ್ ರೋವ್ಮನ್ ಪೊವೆಲ್ ಒಂದೇ ಓವರ್ನಲ್ಲಿ ಸತತ ಆರು ಸಿಕ್ಸರ್ಗಳನ್ನು ಬಾರಿಸುವ ಅವಕಾಶವನ್ನು ಕಳೆದುಕೊಂಡರು. ಪೊವೆಲ್ ಐದು ಎಸೆತಗಳಲ್ಲಿ ಐದು ಸಿಕ್ಸರ್ಗಳನ್ನು ಬಾರಿಸುವ ಮೂಲಕ ಶ್ರೀಲಂಕಾದ ಬೌಲರ್ಗಳ ಬೆವರಿಳಿಸಿದರು. ಆದರೆ ಓವರ್ನ ಕೊನೆಯ ಎಸೆತದಲ್ಲಿ ಕ್ಯಾಚ್ ಔಟ್ ಆದರು. ಕೊನೆಯ ಎಸೆತದಲ್ಲಿ ಅವರು ಸಿಕ್ಸರ್ ಬಾರಿಸಿದ್ದರೆ, ಟಿ20 ಕ್ರಿಕೆಟ್ನಲ್ಲಿ ಒಂದೇ ಓವರ್ನಲ್ಲಿ ಸತತ ಆರು ಸಿಕ್ಸರ್ಗಳನ್ನು ಬಾರಿಸಿದ ದಾಖಲೆಯನ್ನು ಹೊಂದಿರುವ ಆಯ್ದ ಆಟಗಾರರ ಗುಂಪಿಗೆ ಅವರೂ ಸೇರುತ್ತಿದ್ದರು.
ಶ್ರೀಲಂಕಾದ ವೇಗಿ ದಾಸುನ್ ಶನಕ ಅವರನ್ನು ಗುರಿಯಾಗಿಸಿಕೊಂಡು ರೋವ್ಮನ್ ಪೊವೆಲ್, ಶನಕ ಅವರ ಐದು ಎಸೆತಗಳಲ್ಲಿ ಐದು ಸಿಕ್ಸರ್ಗಳನ್ನು ಬಾರಿಸಿದರು. ಆದರೆ, ಆ ಓವರ್ನ ಕೊನೆಯ ಎಸೆತದಲ್ಲಿ ಅವರು ಔಟಾದರು. 16 ನೇ ಓವರ್ ನಂತರ, ಏಂಜಲೀಸ್ ನೈಟ್ ರೈಡರ್ಸ್ 138 ರನ್ ಗಳಿಸಿತ್ತು, ಅವರು ಹೇಗಾದರೂ 170 ರನ್ ಗಳಿಸುತ್ತಾರೆ ಎಂದು ಭಾವಿಸಲಾಗಿತ್ತು.
ಮೂರು ಓವರ್ಗಳಲ್ಲಿ 29 ರನ್ಗಳನ್ನು ಬಿಟ್ಟುಕೊಟ್ಟಿದ್ದ ಶನಕ ಅವರನ್ನು ಪೊವೆಲ್ ಗುರಿಯಾಗಿಸಿಕೊಂಡರು. ಮೊದಲ ಐದು ಎಸೆತಗಳಲ್ಲಿ ಸಿಕ್ಸರ್ಗಳನ್ನು ಬಾರಿಸಿದ ನಂತರ, ಆರನೇ ಎಸೆತದಲ್ಲಿ ಪೊವೆಲ್ ಮತ್ತೊಂದು ಸಿಕ್ಸರ್ ಬಾರಿಸಲು ಪ್ರಯತ್ನಿಸಿದರು, ಆದರೆ ಚೆಂಡು ಎತ್ತರಕ್ಕೆ ಏರಿ ಶಾರ್ಟ್ ಥರ್ಡ್ ಮ್ಯಾನ್ನಲ್ಲಿರುವ ಆಟಗಾರನ ಕೈಗೆ ಹೋಯಿತು.
ಈ ಪಂದ್ಯದಲ್ಲಿ ರೋವ್ಮನ್ ಪೊವೆಲ್ 11 ಎಸೆತಗಳಲ್ಲಿ 37 ರನ್ ಗಳಿಸಿದರು. ಅವರ ಇನ್ನಿಂಗ್ಸ್ನಲ್ಲಿ ಐದು ಸಿಕ್ಸರ್ಗಳು ಮತ್ತು ಒಂದು ಬೌಂಡರಿ ಸೇರಿದ್ದವು. ಪೊವೆಲ್ ಅವರ ಸ್ಟ್ರೈಕ್ ರೇಟ್ 336.36 ಆಗಿತ್ತು. ಇಲ್ಲಿಯವರೆಗೆ, ಟಿ20 ಕ್ರಿಕೆಟ್ನಲ್ಲಿ ಕೇವಲ ಮೂವರು ಬ್ಯಾಟ್ಸ್ಮನ್ಗಳು ಮಾತ್ರ ಸತತ ಆರು ಸಿಕ್ಸರ್ಗಳನ್ನು ಬಾರಿಸಿದ್ದಾರೆ ಅನ್ನೋದು ಗಮನಾರ್ಹ. ರೋವ್ಮನ್ ಪೊವೆಲ್ ಅವರು ಕಳೆದ ಐಪಿಎಲ್ ಸೀಸನ್ನಲ್ಲಿ ಕೋಲ್ಕತ್ತಾ ತಂಡದ ಪರ ಆಡಿದ್ದರು.
ರೋವ್ಮನ್ ಪೊವೆಲ್ ಸತತ ಐದು ಸಿಕ್ಸರ್ಗಳನ್ನು ಬಾರಿಸಿದ ವಿಶ್ವದ ನಾಲ್ಕನೇ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪೊವೆಲ್ಗಿಂತ ಮೊದಲು, ಡೇವಿಡ್ ವಾರ್ನರ್, ಗುಸ್ತಾವ್ ಮೆಕಿಯೋನ್ ಮತ್ತು ಆಕಿಬ್ ಇಕ್ಬಾಲ್ ಈ ಸಾಧನೆ ಮಾಡಿದ್ದಾರೆ.
ಯುವರಾಜ್ ಸಿಂಗ್ ಮತ್ತು ಕೀರನ್ ಪೊಲಾರ್ಡ್ ಒಂದೇ ಓವರ್ನಲ್ಲಿ ತಲಾ ಆರು ಸಿಕ್ಸರ್ಗಳನ್ನು ಬಾರಿಸಿದ್ದಾರೆ. ನೇಪಾಳದ ದೀಪೇಂದ್ರ ಸಿಂಗ್ ಐರೀ ಎರಡು ಬಾರಿ ಒಂದೇ ಓವರ್ನಲ್ಲಿ ಆರು ಸಿಕ್ಸರ್ಗಳನ್ನು ಬಾರಿಸುವ ಸಾಧನೆ ಮಾಡಿದ್ದಾರೆ.













