ಮಾಜಿ ಸಿಎಂ ಮದುವೆಯಾದ ಕನ್ನಡದ ನಟಿ! 55ರ ಬಿಜೆಪಿ ನಾಯಕನ ಜೊತೆ ‘ಕಾನ್ಸ್‌ಟೇಬಲ್ ಸರೋಜಾ’ ಕಲ್ಯಾಣ | | ACTPnews

'ಕಾನ್ಸ್‌ಟೇಬಲ್ ಸರೋಜಾ' ಮದುವೆ


Last Updated:

Tagaru Actress Triveni Rao: ‘ಕಾನ್ಸ್‌ಟೇಬಲ್ ಸರೋಜಾ’ ಮದುವೆಯಾಗಿದ್ದಾರೆ. ತ್ರಿಪುರಾ ಮಾಜಿ ಸಿಎಂ, ಹಾಲಿ ಬಿಜೆಪಿ ಸಂಸದ ಬಿಪ್ಲಬ್ ಕುಮಾರ್ ದೇಬ್‌ರನ್ನು ‘ಕಾನ್ಸ್‌ಟೇಬಲ್ ಸರೋಜಾ’ ಅಲಿಯಾಸ್ ತ್ರಿವೇಣಿ ರಾವ್ ಮದುವೆಯಾಗಿದ್ದಾರೆ.

'ಕಾನ್ಸ್‌ಟೇಬಲ್ ಸರೋಜಾ' ಮದುವೆ
‘ಕಾನ್ಸ್‌ಟೇಬಲ್ ಸರೋಜಾ’ ಮದುವೆ

ಹ್ಯಾಟ್ರಿಕ್ ಹೀರೆೋ ಶಿವರಾಜ್‌ಕುಮಾರ್ (Shivarajkumar), ಡಾಲಿ ಧನಂಜಯ್ (Daali Dhananjay) ಅಭಿನಯದ ‘ಟಗರು’ (Tagaru) ಸಿನಿಮಾ ನೀವು ನೋಡಿರಬಹುದು. ಧನಂಜಯ್‌ಗೆ ‘ಡಾಲಿ’ ಎಂಬ ನೇಮ್, ಫೇಮ್ ತಂದುಕೊಟ್ಟ ಈ ಸಿನಿಮಾದಲ್ಲಿ ಮತ್ತೊಂದು ಪಾತ್ರ ಮರೆಯೋಕೆ ಸಾಧ್ಯವಿಲ್ಲ. ಅದೇ ಕಾನ್ಸ್‌ಟೇಬಲ್ ಸರೋಜಾ (Constable Saroja) ಕ್ಯಾರೆಕ್ಟರ್! ಆ ಪಾತ್ರ ಮಾಡಿ ಕನ್ನಡಿಗರ ಕ್ರಶ್ ಆಗಿದ್ದ ಚೆಲುವೆಯ ಹೆಸರು ತ್ರಿವೇಣಿ ರಾವ್ (Triveni Rao) ಅಲಿಯಾಸ್ ರುಷಿಕಾ ರಾಜ್ (Rushika Raj). ಇದೀಗ ತ್ರಿವೇಣಿ ರಾವ್ ಮದುವೆಯಾಗಿದ್ದಾರೆ. ತ್ರಿಪುರಾ ಮಾಜಿ ಸಿಎಂ (former Tripura CM), ಹಾಲಿ ಬಿಜೆಪಿ ರಾಜ್ಯಸಭಾ ಸದಸ್ಯ ಬಿಪ್ಲಬ್ ಕುಮಾರ್ ದೇಬ್‌ರನ್ನು (Biplab Kumar Deb) ತ್ರಿವೇಣಿ ರಾವ್ ಮದುವೆಯಾಗಿದ್ದಾರೆ.

ಮಾಜಿ ಸಿಎಂ ಕೈ ಹಿಡಿದ ಕಾನ್ಸ್‌ಟೇಬಲ್ ಸರೋಜಾ

ಕಾನ್ಸ್‌ಟೇಬಲ್ ಸರೋಜಾ ಖ್ಯಾತಿಯ ಕನ್ನಡದ ನಟಿ ತ್ರಿವೇಣಿ ರಾವ್ ಅಲಿಯಾಸ್ ರುಷಿಕಾ ರಾಜ್ ಮದುವೆಯಾಗಿದ್ದಾರೆ. ತ್ರಿಪುರಾದ ಮಾಜಿ ಸಿಎಂ ಬಿಪ್ಲಬ್ ಕುಮಾರ್ ದೇಬ್‌ರನ್ನು ತ್ರಿವೇಣಿ ರಾವ್ ವಿವಾಹವಾಗಿದ್ದಾರೆ. ದೆಹಲಿಯಲ್ಲಿ ಕೇವಲ ಕುಟುಂಬಸ್ಥರು, ಆಪ್ತೇಷ್ಠರ ಸಮ್ಮುಖದಲ್ಲಿ ತ್ರಿವೇಣರಾವ್ ಹಾಗೂ ಬಿಪ್ಲಬ್ ಕುಮಾರ್ ದೇವ್ ವಿವಾಹ ನೆರವೇರಿದೆ.

ಕನ್ನಡಿಗರ ಕ್ರಶ್ ಆಗಿದ್ದ ತ್ರಿವೇಣಿ ರಾವ್

ತ್ರಿವೇಣಿ ರಾವ್ ಸೂರಿ ನಿರ್ದೇಶನದ, ಶಿವರಾಜ್‌ಕುಮಾರ್, ಡಾಲಿ ಧನಂಜಯ್ ಅಭಿನಯದ ಟಗರು ಸಿನಿಮಾದ ಮೂಲಕ ಖ್ಯಾತಿ ಗಳಿಸಿದ್ದರು. ಕಾನ್ಸ್‌ಟೇಬಲ್ ಸರೋಜಾ ಎಂಬ ಕ್ಯಾರೆಕ್ಟರ್ ಮಾಡಿದ್ದ ತ್ರಿವೇಣಿ ರಾವ್, ಅಂದು ಕನ್ನಡಿಗರ ಹೊಸ ಕ್ರಶ್ ಆಗಿದ್ದರು.

ಹಲವು ಸಿನಿಮಾಗಳಲ್ಲಿ ನಟನೆ, ಹೆಸರು ಬದಲಾವಣೆ

ಬಳಿಕ ತ್ರಿವೇಣಿ ರಾವ್ ಹಲವು ಸಿನಿಮಾಗಳಲ್ಲಿ ನಟಿಸಿದ್ರು. ತಾಯಿಗೆ ತಕ್ಕ ಮಗ, ರಾಜ ಮಾರ್ತಾಂಡ, ಸಲಗ, ಯುವರತ್ನ ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದ ತ್ರಿವೇಣಿ ರಾವ್, ಬಳಿಕ ತೆಲುಗಿನಲ್ಲೂ ಕೆಲವು ಸಿನಿಮಾಗಳಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡರು. ಇದಾದ ಬಳಿಕ ತಮ್ಮ ಹೆಸರನ್ನು ರುಷಿಕಾ ರಾಜ್ ಅಂತ ಬದಲಾಯಿಸಿಕೊಂಡರು.

55 ವರ್ಷದ ತ್ರಿಪುರಾ ಮಾಜಿ ಸಿಎಂ  ಬಿಪ್ಲಬ್ ಕುಮಾರ್ ದೇಬ್

ಬಿಪ್ಲಬ್ ಕುಮಾರ್ ದೇಬ್‌ ತ್ರಿಪುರಾದ ಮಾಜಿ ಸಿಎಂ ಆಗಿದ್ದು, ಹಾಲಿ ಬಿಜೆಪಿ ರಾಜ್ಯಸಭಾ ಸದಸ್ಯರಾಗಿದ್ದಾರೆ. 55 ವರ್ಷದ ಬಿಪ್ಲಬ್ ಕುಮಾರ್‌ ದೇಬ್‌ಗೆ ಇದು 2ನೇ ಮದುವೆ. ಈಗಾಗಲೇ ನೀತಿ ದೇವ್ ಎಂಬುವರನ್ನು ಮದುವೆಯಾಗಿದ್ದು, ಇಬ್ಬರ ನಡುವೆ ಡಿವೋರ್ಸ್ ಆಗಿದೆ. ಇದೀಗ ತಾಯಿ ಆಸೆಯಂತೆ ನಟಿ ತ್ರಿವೇಣಿ ರಾವ್‌ರನ್ನು 2ನೇ ವಿವಾಹವಾಗಿದ್ದಾರೆ ಎನ್ನಲಾಗಿದೆ.

ಪ್ರೀತಿಸಿ ವಿವಾಹವಾಗಿದ್ದ ಬಿಪ್ಲವ್ ಕುಮಾರ್ ದೇವ್, ನೀತಿ

2016 ರಲ್ಲಿ, ಬಿಪ್ಲಬ್ ದೇಬ್ ಅವರನ್ನು ತ್ರಿಪುರ ಬಿಜೆಪಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ನಂತರ 2018 ರಲ್ಲಿ, ತ್ರಿಪುರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತು. ಅಂದಿನಿಂದ ಅವರು ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ 2022 ರಲ್ಲಿ ಅವರು ರಾಜೀನಾಮೆ ನೀಡಿ ರಾಜ್ಯಸಭೆಗೆ ಹೋದರು. 2024 ರಲ್ಲಿಯೂ ಸಹ, ಭಾರತೀಯ ಜನತಾ ಪಕ್ಷವು ಅವರಿಗೆ ಲೋಕಸಭೆಗೆ ಟಿಕೆಟ್ ನೀಡಿತು ಮತ್ತು ಅವರು ಅಲ್ಲಿಂದ ಸಂಸದರಾಗಿ ಆಯ್ಕೆಯಾದರು. ಬಿಪ್ಲಬ್ ತಮ್ಮ ಮಾಜಿ ಪತ್ನಿ ನೀತಿ ಅವರನ್ನು ರಾಜಕೀಯ ಕ್ಷೇತ್ರದಿಂದ ಭೇಟಿಯಾದರು. ಅಲ್ಲಿಂದ, ಆತ್ಮೀಯತೆಯ ಮೂಲಕ, ಇಬ್ಬರೂ ನಂತರ ವಿವಾಹವಾದರು. ದಂಪತಿಗೆ ಇಬ್ಬರು ಮಕ್ಕಳೂ ಇದ್ದರು.

ತ್ರಿಪುರಾದಲ್ಲಿ ಅದ್ಧೂರಿ ಆರತಕ್ಷತೆ ಆಯೋಜನೆ

ಸದ್ಯ ಬಿಪ್ಲಬ್ ಕುಮಾರ್ ದೇವ್ ಹಾಗೂ ತ್ರಿವೇಣಿ ರಾವ್ ದೆಹಲಿಯಲ್ಲಿ ವಿವಾಹವಾಗಿದ್ದಾರಂತೆ. ಜೂನ್ 24 ರಂದು ತ್ರಿಪುರದ ಹೋಟೆಲ್‌ನಲ್ಲಿ ಅವರ ಆರತಕ್ಷತೆಯನ್ನು ಅದ್ಧೂರಿಯಾಗಿ ಆಯೋಜಿಸಲಾಗುವುದು ಎಂದು ವರದಿಯಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed