Uppi H2O Movie: H2O ಚಿತ್ರದಲ್ಲಿ ಆ ಕಡೆ ಅಣ್ಣಾವ್ರು ಈ ಕಡೆಗೆ ರಜನಿ! ಉಪ್ಪಿ ಈ ಐಡಿಯಾ ಡ್ರಾಪ್ ಆಗಿದ್ಯಾಕೆ? | | ACTPnews

Real Star Upendra Rajinikanth Rajkumar H20 Movie Unknown Facts


H2O ಸಿನಿಮಾ

H2O ಚಿತ್ರದ ಕಥೆಯನ್ನೆ ಉಪೇಂದ್ರ ಅವರು ಪಾರ್ವತಮ್ಮ ರಾಜಕುಮಾರ್ ಅವರ ಮುಂದೆ ಹೇಳಿದರು. ಕಾವೇರಿ ಅನ್ನ ಇಲ್ಲಿ ತಾಯಿಯ ರೂಪದಲ್ಲಿಯೇ ಹೇಳಿದ್ದರು.
ಉಪ್ಪಿ ಈ ಐಡಿಯಾ ಡ್ರಾಪ್ ಆಗಿದ್ಯಾಕೆ ಗೊತ್ತಾ?

ಈ ತಾಯಿಗಾಗಿಯೇ ರಾಜಕುಮಾರ್ ಹಾಗೂ ರಜನಿಕಾಂತ್ ಕಿತ್ತಾಡೋ ಕಥೆ ಇಟ್ಟಿದ್ದರು. ಈ ಕಥೆಯನ್ನೆ ಉಪೇಂದ್ರ ಅವರು ಪಾರ್ವಮ್ಮನವರ ಮುಂದೆ ಹೇಳಿದ್ದರು.

ಆದರೆ ಅದು ಆಗಲಿಲ್ಲ…

ಹೌದು, ಉಪ್ಪಿಯ ಈ ಐಡಿಯಾ ಕಾರ್ಯರೂಪಕ್ಕೆ ಬರಲಿಲ್ಲ. ಆದರೆ, ಉಪ್ಪಿಯ ಈ ಯೋಚನೆಯ ಚಿತ್ರ ಬಂತು. ಅದು ಈಗಾಗಲೇ ಹೇಳಿದಂತೆ H2O ರೂಪದಲ್ಲಿಯೇ ಬಂತು.

ಪ್ರಭುದೇವ ಮತ್ತು ಉಪೇಂದ್ರ ಈ ಚಿತ್ರದಲ್ಲಿ ನಟಿಸಿದರು. ಉಪೇಂದ್ರ ಈ ಚಿತ್ರದಲ್ಲಿ ಉದಯಶಂಕರ್ ಗೌಡ ಅನ್ನುವ ರೋಲ್ ಮಾಡಿದ್ದರು. ಪ್ರಭುದೇವ ಇಲ್ಲಿ ವೈರಮುತ್ತು ಪಾತ್ರ ಮಾಡಿದ್ದರು.

Real Star Upendra Rajinikanth Rajkumar H20 Movie Unknown Facts

ಅಮ್ಮನ ಮುಂದೆ ಹೇಳಿದ್ದೆ

(ಚಿತ್ರ ಕೃಪೆ: ರಾಘವೇಂದ್ರ ರಾಜಕುಮಾರ್ ಇನ್‌ಸ್ಟಾಗ್ರಾಮ್)

ಕಾವೇರಿ ಯಾರು..?

ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಇಲ್ಲಿ ಕಾವೇರಿ ಪಾತ್ರ ಮಾಡಿದ್ದರು. ಈ ಚಿತ್ರ 8 ಕೋಟಿ ಬಜೆಟ್ ಅಲ್ಲಿಯೇ ತಯಾರಾಗಿತ್ತು.

ಈ ಚಿತ್ರದ ಬರವಣಿಗೆಯ ಕೆಲಸವನ್ನ ಉಪೇಂದ್ರ ಮಾಡಿದ್ದರು. ಆದರೆ, ಡೈರೆಕ್ಷನ್ ಅಂತ ಬಂದ್ರೆ ಅದನ್ನ ಎನ್. ಲೋಕನಾಥ್ ರಾಜಾರಾಮ್ ಅವರು ಮಾಡಿದ್ದರು.

24 ವರ್ಷದ ಹಿಂದೆ ರಿಲೀಸ್

ಈ ಚಿತ್ರ ಮಾರ್ಚ್-29, 2002 ರಂದು ರಿಲೀಸ್ ಆಗಿತ್ತು. ಈ ಸಿನಿಮಾದ ಹೂವೇ ಹೂವೇ ಹಾಡು ಹಿಟ್ ಆಗಿತು. ಪ್ರಿಯಾಂಕಾ ಉಪೇಂದ್ರ ಈ ಹಾಡಿನಲ್ಲಿ ತುಂಬಾನೆ ಚೆನ್ನಾಗಿ ಕಾಣಿಸಿದ್ದರು.

ಈ ಚಿತ್ರ ಬಂದು 24 ವರ್ಷ ಆಗಿದೆ. ಇಷ್ಟು ವರ್ಷ ಆದ್ಮೇಲೂ ಈ ಚಿತ್ರದ ಬಗ್ಗೆ ಕ್ರೇಜ್ ಇದೆ. ಉಪೇಂದ್ರ ಅವರು ಇತ್ತೀಚಿಗೆ ಆರ್‌.ಮಯೂರ ಅವರ ಗೋಲ್ಡ್ ಕ್ಲಾಸ್ ವಿಥ್‌ ಮಯೂರ ಪಾಡ್ ಕಾಸ್ಟ್ ಅಲ್ಲಿಯೇ ಈ ಚಿತ್ರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಸಿನಿಮಾದ ಆ ಇಂಟ್ರಸ್ಟಿಂಗ್ ವಿಚಾರ ಹೇಳಿಕೊಂಡಿದ್ದಾರೆ.

Real Star Upendra Rajinikanth Rajkumar H20 Movie Unknown Facts

H2O ಸಿನಿಮಾ

(ಚಿತ್ರ ಕೃಪೆ:ಉಪೇಂದ್ರ ಇನ್‌ಸ್ಟಾಗ್ರಾಮ್)

ಅಮ್ಮನ ಮುಂದೆ ಹೇಳಿದ್ದೆ

ಹೈದ್ರಾಬಾದ್ ಅಲ್ಲಿದ್ದಾಗಲೇ ಈ ಒಂದು ವಿಚಾರ ಹೊಳೆದಿತ್ತು. ಒಂದು ಕಡೆ ರಾಜಕುಮಾರ್ ಅವರು ಇರ್ತಾರೆ. ಇನ್ನೊಂದು ಕಡೆಗೆ ರಜನಿಕಾಂತ್ ಇರ್ತಾರೆ. ಇವರು ಕಾವೇರಿ ಅಮ್ಮನಿಗಾಗಿಯೇ ಹೋರಾಡ್ತಾರೆ ಅನ್ನುವ ಕಾನ್ಸೆಪ್ಟ್ ಇವರಿಗೆ ಹೊಳೆದಿತ್ತು.

ಈ ವಿಚಾರ ಹೊಳೆದದ್ದೆ ತಡ, ಹೈದ್ರಾಬಾದ್‌ನಿಂದ ವಿಮಾನ ಹತ್ತಿ ಆ ಕೂಡಲೇ ಉಪೇಂದ್ರ ಬೆಂಗಳೂರಿಗೆ ಬಂದಿದ್ದರು. ಪಾರ್ವತಮ್ಮನವರಿಗೆ ತಮ್ಮ ಯೋಚನೆ ಹೇಳಿದರು. ಆದರೆ, ಅದು ಮುಂದೆ ಆಗಲಿಲ್ಲ ಅನ್ನೋದನ್ನು ಉಪೇಂದ್ರ ಇಲ್ಲಿ ಹೇಳಿಕೊಂಡಿದ್ದಾರೆ.

ಗೊತ್ತೇ ಇರಲಿಲ್ಲ..

ಹೊಸ ರೀತಿಯಲ್ಲಿ ಏನಾದರೂ ಮಾಡ್ಬೇಕು ಅಂದಾಗ ಈ ರೀತಿಯ ಐಡಿಯಾಗಳು ಬರುತ್ತವೆ. ಹಾಗಾಗಿಯೇ ಈ ವಿಚಾರ ಬಂದಿತ್ತು. ಇದರ ಪರಿಣಾಮದ ಬಗ್ಗೆ ಯಾವುದೇ ಕಲ್ಪನೆಗಳು ಇರಲಿಲ್ಲ.

ಆದರೆ, ಮುಂದೆ ಈ ಚಿತ್ರದಲ್ಲಿ ಕಾವೇರಿ ಅಮ್ಮ ಇರಲಿಲ್ಲ. ಕಾವೇರಿ ಅನ್ನುವ ಹೀರೋಯಿನ್ ಪಾತ್ರ ಬಂತು. ಅದು ಮುಂದೆ H2O ಸಿನಿಮಾ ಆಯಿತು ಅನ್ನುವ ಅರ್ಥದಲ್ಲಿಯೇ ಉಪೇಂದ್ರ ಇದೇ ಪಾಡ್‌ಕಾಸ್ಟ್ ಅಲ್ಲಿಯೇ ನೆನಪಿಸಿಕೊಂಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports