Pavithra Gowda: ಜೈಲಿನಲ್ಲಿ ಪವಿತ್ರಾಗೌಡಗೆ ರಾಜಾತಿಥ್ಯ ಆರೋಪ ನಿಜಾನಾ? ಮತ್ತೊಂದು ಸ್ಫೋಟಕ ಆಡಿಯೋ ಬಿಡುಗಡೆ ಮಾಡಿದ ಸಂಧ್ಯಾ ನಾಗರಾಜ್ | | ACTPnews

ಪವಿತ್ರಾಗೌಡ


Last Updated:

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ‌ ಪ್ರಕರಣದ A1 ಪವಿತ್ರಾ ಗೌಡ ವಿರುದ್ಧ ರಾಜಾತಿಥ್ಯ ಆರೋಪ ಕೇಳಿಬಂದಿತ್ತು. ಈ ಬೆನ್ನಲ್ಲೇ ಇದೀಗ ಸಂಧ್ಯಾ ನಾಗರಾಜ್ ಈ ಕುರಿತಂತೆ ಮತ್ತೊಂದು ಆಡಿಯೋ‌ ಬಿಡುಗಡೆ ಮಾಡಿದ್ದಾರೆ.

ಪವಿತ್ರಾಗೌಡ
ಪವಿತ್ರಾಗೌಡ

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ‌ (Renukaswamy Case) ಪ್ರಕರಣದ A1 ಪವಿತ್ರಾ ಗೌಡ (Pavithra Gowda) ವಿರುದ್ಧ ರಾಜಾತಿಥ್ಯ ಆರೋಪ ಕೇಳಿಬಂದಿತ್ತು. ಕೆಲ ದಿನಗಳ ಹಿಂದೆ ಪ್ರಕರಣ ಒಂದರಲ್ಲಿ ಜೈಲಿಗೆ ಹೋಗಿದ್ದ ಸಂಧ್ಯಾ ಪವಿತ್ರಾ ನಾಗರಾಜ್ (Sandhya Pavitra Nagaraj) ಎಂಬುವರು ಖಾಸಗಿ ಮಾಧ್ಯಮದ ಮುಂದೆ ಮಾಡಿದ್ದ ಆರೋಪಗಳು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದವು. ಆ ಬಳಿಕ ಜೈಲಧಿಕಾರಿಗಳು ಅಧಿಕೃತ ಮಾಧ್ಯಮ ಪ್ರಕಟಣೆ ಹೊರಡಿಸಿ ಪವಿತ್ರಾ ಗೌಡಗೆ ಯಾವುದೇ ರೀತಿಯ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತಿಲ್ಲ ಎಂದು ಸ್ಷಷ್ಟನೆ ನೀಡಿದ್ದರು. ಈ ಬೆನ್ನಲ್ಲೇ ಇದೀಗ ಸಂಧ್ಯಾ ನಾಗರಾಜ್ ಈ ಕುರಿತಂತೆ ಮತ್ತೊಂದು ಆಡಿಯೋ‌ ಬಿಡುಗಡೆ ಮಾಡಿದ್ದಾರೆ.

ಹೌದು ಇತ್ತೀಚೆಗೆ ಮಾಧ್ಯಮವೊಂದರಲ್ಲಿ ಮಾತನಾಡಿದ್ದ ಸಂಧ್ಯಾ ನಾಗರಾಜ್‌ ಜೈಲಿನಲ್ಲಿ ಅಧಿಕಾರಿಗಳು ಪವಿತ್ರಾ ಗೌಡಗೆ ಸಹಕಾರ ಕೊಡ್ತಿದ್ದಾರೆ, ಪ್ರತಿದಿನ ಬಾಕ್ಸ್‌ನಲ್ಲಿ ಊಟ ತಂದುಕೊಡ್ತಾರೆ. ಜೈಲಿನಲ್ಲಿ ರಾಜಾತಿಥ್ಯ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದರು.

ಆಡಿಯೋದಲ್ಲಿ ಜೈಲಿನೊಳಗಿನ ಪರಿಸ್ಥಿತಿಗಳು, ಕೆಲ ಕೈದಿಗಳಿಗೆ ನೀಡಲಾಗುತ್ತಿರುವ ಸೌಲಭ್ಯಗಳು ಹಾಗೂ ಸಿಬ್ಬಂದಿಗಳ ನಡೆಯಾ ಬಗ್ಗೆ ಚರ್ಚೆಯಾಗಿರುವುದಾಗಿ ಹೇಳಲಾಗುತ್ತಿದೆ. ಆದರೆ ಈ ಆಡಿಯೋದ ವಿಷಯದ ಕುರಿತು ಇನ್ನೂ ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ. ಹಾಗೆಯೇ ಆಡಿಯೋ ಬಿಡುಗಡೆಯಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಚರ್ಚೆಗಳು ಜೋರಾಗಿವೆ.

ಇನ್ನು ಸಂಧ್ಯಾ ನಾಗರಾಜ್​ ಹೇಳಿಕೆ ಹಿನ್ನೆಲೆ ಜೈಲಧಿಕಾರಿಗಳಿಗೆ ಭದ್ರತಾ ಸಿಬ್ಬಂದಿ ರಶ್ಮೀ ದೂರು ನೀಡಿದ್ದರು . ಸಿಬ್ಬಂದಿ ರಶ್ಮೀ ದೂರ ಆಧರಿಸಿ ಪರಪ್ಪನ ಅಗ್ರಹಾರ ಪೊಲೀಸರಿಗೆ ಜೈಲಧಿಕಾರಿಗಳು ದೂರು ನೀಡಿದ್ದು, ದೂರು ಆಧರಿಸಿ ಸಂಧ್ಯಾ ವಿರುದ್ದ ಎನ್​​ಸಿಆರ್ ದಾಖಲಾಗಿತ್ತು . ಎಫ್​ಐಆರ್ ದಾಖಲಾತಿಗೆ ಪೊಲೀಸರು ಕೋರ್ಟ್ ಅನುಮತಿ ಕೇಳಿದ್ದು, ಕೋರ್ಟ್ ಅನುಮತಿ ನೀಡಿದ್ರೆ ಪೊಲೀಸರು ಎಫ್​ಐಆರ್ ದಾಖಲಿಸಿ ವಿಚಾರಣೆ ನಡೆಸಲಿದ್ದಾರೆ. ಸದ್ಯ ಕೋರ್ಟ್ ಅನುಮತಿಗಾಗಿ ಪೊಲೀಸರು ಕಾಯ್ತಿದ್ದಾರೆ ಎಂದು ಹೇಳಲಾಗಿತ್ತು .

ಇತ್ತೀಚಿಗೆ ಈ ಬಗ್ಗೆ ಸಂಧ್ಯಾ ನಾಗರಾಜ್ ನ್ಯೂಸ್ 18 ಜೊತೆ ಮಾತನಾಡಿದ್ದು, ಪವಿತ್ರಾ ಗೌಡಗೆ ರಾಜಾತಿಥ್ಯ ಸಿಗ್ತಾ ಇದೆ ಎನ್ನುವ ನನ್ನ ಆರೋಪಕ್ಕೆ ಈಗಲೂ ಬದ್ಧ ಎಂದು ಹೇಳಿದ್ದರು . ನನ್ನ ಮೇಲೆ NCR ದಾಖಲು ಮಾಡಿದ್ದಾರೆ, ನಾನು ಪ್ರಕರಣ ಎದುರಿಸುತ್ತೇನೆ, ನಾನು ಸತ್ಯವನ್ನ ಹೇಳಿರೋದು, ಮೂರು ತಿಂಗಳು ನಾನು ಜೈಲಲ್ಲಿದ್ದಾಗ ನಡೆದಿರೋದನ್ನ ಹೇಳಿದ್ದೇನೆ. ಅಧಿಕಾರಿಗಳ ಗಮನಕ್ಕಿದ್ದೇ ಪವಿತ್ರಾ ಗೌಡಗೆ ರಾಜಾಥಿತ್ಯ ಸಿಗ್ತಾ ಇತ್ತು, ನನಗೆ ಪೊಲೀಸ್ ಠಾಣೆಯಿಂದ ಇದುವರೆಗೂ ಕರೆ ಬಂದಿಲ್ಲ, ಪೊಲೀಸರು ಕರೆ ಮಾಡಿದ್ರೆ ನಾನು ಎಲ್ಲಾ ಮಾಹಿತಿ ಕೊಡ್ತೇನೆ ಎಂದು ಹೇಳಿದ್ದರು.

(ವರದಿ- ಮಾದೇಶ್, ನ್ಯೂಸ್ 18 ಕನ್ನಡ, ಬೆಂಗಳೂರು)



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed