Achievement: ಬೆಂಗಳೂರಿನಲ್ಲಿ ಕಮಾಲ್ ಮಾಡಿದ ಪುತ್ತೂರಿನ ಹುಡುಗ! ಈತನ ಸಾಧನೆ ಕೇಳಿದ್ರೆ ನೀವೂ ಥ್ರಿಲ್ ಆಗ್ತೀರಾ! | ಕ್ರೀಡಾ ಸುದ್ದಿ | ACTPnews

ನಂದನ್‌ ನಾಯ್ಕ್


Last Updated:

ನಂದನ್ ನಾಯ್ಕ್ NRJ ರಾಜ್ಯ ಸೀನಿಯರ್ ಡೈವಿಂಗ್ ಚಾಂಪಿಯನ್‌ಶಿಪ್ 2026ರಲ್ಲಿ ಹೈ ಬೋರ್ಡ್ ಚಿನ್ನ, 3 ಮೀಟರ್ ಸ್ಪ್ರಿಂಗ್ ಬೋರ್ಡ್ ಬೆಳ್ಳಿ ಗೆದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ, ದಕ್ಷಿಣ ಕನ್ನಡದ ಹೆಮ್ಮೆ ಹೆಚ್ಚಿಸಿದ ಈ ಯುವಕ ದೇಶ-ವಿಶ್ವಮಟ್ಟದಲ್ಲೂ ಇದೇ ರೀತಿಯ ಸಾಧನೆ ಮಾಡುವ ಭರವಸೆ ಮೂಡಿಸಿದ್ದಾನೆ.

ನಂದನ್‌ ನಾಯ್ಕ್
ನಂದನ್‌ ನಾಯ್ಕ್

ದಕ್ಷಿಣ ಕನ್ನಡ: ಬೆಂಗಳೂರಿನ (Bengaluru) ಕಿಂಗ್‌ಸ್ಟನ್ ಸ್ವಿಮ್ಮಿಂಗ್ ಪೂಲ್‌ನಲ್ಲಿ (Swimming Pool)  ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಷನ್ (KSA) ವತಿಯಿಂದ ಇತ್ತೀಚೆಗೆ ನಡೆದ NRJ ರಾಜ್ಯ ಮಟ್ಟದ ಸೀನಿಯರ್ ಡೈವಿಂಗ್ ಚಾಂಪಿಯನ್‌ಶಿಪ್ 2026ರಲ್ಲಿ ಪುತ್ತೂರಿನ ಯುವ ಡೈವರ್ ನಂದನ್ ನಾಯ್ಕ್ ಅಪ್ರತಿಮ ಸಾಧನೆ (Achievement) ತೋರಿ ಇಡೀ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.

ರಾಷ್ಟ್ರಮಟ್ಟಕ್ಕೆ ಲಗ್ಗೆ ಇಟ್ಟ ಯುವಕ

ವಾರಣಾಸಿ ಸ್ವಿಮ್ಮಿಂಗ್ ಅಕಾಡೆಮಿಯನ್ನು ಪ್ರತಿನಿಧಿಸಿ ಸ್ಪರ್ಧಿಸಿದ ನಂದನ್ ಹೈ ಬೋರ್ಡ್ ಡೈವಿಂಗ್‌ನಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗೆದ್ದಿದ್ದಾರೆ. ಅಲ್ಲದೆ 3 ಮೀಟರ್ ಸ್ಪ್ರಿಂಗ್ ಬೋರ್ಡ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕವನ್ನೂ ಸ್ವಂತಮಾಡಿಕೊಂಡಿದ್ದಾರೆ. ಈ ಅತ್ಯುತ್ತಮ ಪ್ರದರ್ಶನದ ಫಲವಾಗಿ ನಂದನ್ ರಾಷ್ಟ್ರ ಮಟ್ಟದ ಸ್ಪರ್ಧೆಗೂ ಆಯ್ಕೆಯಾಗಿದ್ದಾರೆ.

ಪುತ್ತೂರಿನ ಬಾಲವನದಲ್ಲಿ ಬಿದ್ದು ಬೆಂಗಳೂರಲ್ಲಿ ಎದ್ದ

ಪುತ್ತೂರಿನ ಮುಕ್ಕೆ ಮಜಲುಮಾರು, ನೆಹರೂನಗರ ನಿವಾಸಿ ನಂದನ್, ಸಂತ ಫಿಲೋಮಿನಾ ಪಿ.ಯು. ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ. ನೆಹರೂನಗರದಲ್ಲಿ ಜೀವಾ ಮೆಡಿಕಲ್ಸ್ ಮತ್ತು ಜೀವಾ ಲ್ಯಾಬೊರೇಟರಿ ನಡೆಸುತ್ತಿರುವ ರವಿ ಸಂಪತ್ ನಾಯ್ಕ್ ಮತ್ತು ಕ್ಷಮಿತಾ ದಂಪತಿಯ ಪುತ್ರನಾದ ನಂದನ್ ಕಳೆದ ಹತ್ತು ವರ್ಷಗಳಿಂದ ಪುತ್ತೂರಿನ ಬಾಲವನದಲ್ಲಿ ಈಜು ಕಲಿಯುತ್ತ ಜಿಲ್ಲೆ ಮತ್ತು ರಾಜ್ಯ ಮಟ್ಟದ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಹಿಂದಿನ ಚಾಂಪಿಯನ್‌ಶಿಪ್‌ಗಳಲ್ಲಿ 3 ಮೀ. ಸ್ಪ್ರಿಂಗ್ ಬೋರ್ಡ್‌ನಲ್ಲಿ 243.95 ಪಾಯಿಂಟ್‌ಗಳ ಮೂಲಕ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದ ನಂದನ್, ಈ ಬಾರಿ ಇನ್ನಷ್ಟು ಎತ್ತರಕ್ಕೇರಿದ್ದಾರೆ.
ನಿರಂತರ ತರಬೇತಿಯಿಂದ ದಕ್ಕಿದ ಯಶಸ್ಸು

ಅತ್ಯಂತ ಕಠಿಣ ಮತ್ತು ಸಾಹಸಮಯ ಕ್ರೀಡೆಯಾದ ಡೈವಿಂಗ್ ಅನ್ನು ಸಲೀಸಾಗಿ ಮಾಡುವ ನಂದನ್ ಅವರ ಹಿಂದಿರುವ ಶ್ರಮ ಮತ್ತು ಸಾಧನೆಗೆ ವಾರಣಾಸಿ ಸ್ವಿಮ್ಮಿಂಗ್ ಅಕಾಡೆಮಿಯ ಕೋಚ್‌ಗಳಾದ ಪಾರ್ಥ ವಾರಣಾಸಿ, ವಿಕಾಸ್ ಮತ್ತು ವೆಂಕಟೇಶ್ ಅವರ ಮಾರ್ಗದರ್ಶನ ಬಹಳ ಮಹತ್ತ್ವದ ಪಾತ್ರ ವಹಿಸಿದೆ. ವಿಟ್ಲದ ವಾರಣಾಸಿ ಫಾರ್ಮ್‌ನಲ್ಲಿ ಕೋಚ್ ಪಾರ್ಥ ವಾರಣಾಸಿ ವಿಶೇಷವಾಗಿ ಡೈವಿಂಗ್‌ಗಾಗಿ ನಿರ್ಮಿಸಿರುವ ಈಜುಕೊಳದಲ್ಲಿ ನಿರಂತರ ತರಬೇತಿ ಪಡೆದ ನಂದನ್ ಇಂದು ರಾಷ್ಟ್ರ ಮಟ್ಟದ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಗಣ್ಯರಿಂದ ಅಭಿನಂದನೆ



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed