Last Updated:
ಪ್ರಶಾಂತ್ ನೀಲ್ ಅವರಿಗೆ ಜೂನಿಯರ್ ಎನ್‌ಟಿಆರ್ ಕೇಳಿದ ಆ ಪ್ರಶ್ನೆ ಯಾವುದು? ಡ್ರ್ಯಾಗನ್ ಚಿತ್ರದ ಕಥೆ ಮೇಲೆ ಪ್ರಶಾಂತ್ ನೀಲ್ ಮತ್ತು ಜೂನಿಯರ್ ಎನ್‌ಟಿಆರ್ ಎಷ್ಟು ವರ್ಷ ಕೆಲಸ ಮಾಡಿದ್ದಾರೆ. ಈ ಎಲ್ಲ ಕುತೂಹಲಕ್ಕೆ ಇಲ್ಲೊಂದಿಷ್ಟು ಮಾಹಿತಿ ಇದೆ ಓದಿ.
ಪ್ರಶಾಂತ್ ನೀಲ್ (Prashanth Neel) ಒಂದು ನಿರ್ಧಾರ ಮಾಡಿದ್ದಾರೆ. ತಮ್ಮ ಕಥೆಗಳನ್ನ ಡಾರ್ಕ್ ಟಿಂಟ್ ಇರೋ ಫಾರ್ಮ್ಯಾಟ್ ಅಲ್ಲಿಯೇ ಹೇಳುತ್ತಿದ್ದಾರೆ. ಆದರೆ, ಈ ಒಂದು ಫಾರ್ಮ್ಯಾಟ್ ಅಲ್ಲಿಯೇ ಇನ್ನೂ ಮೂರು ಚಿತ್ರಗಳನ್ನ ಇದೇ ಡಾರ್ಕ್ ಟಿಂಟ್ ಅಲ್ಲಿಯೇ ಹೇಳುತ್ತಿದ್ದಾರೆ. ಡ್ರ್ಯಾಗನ್ ಒನ್ ಮತ್ತು ಡ್ರ್ಯಾಗನ್ -2 ಚಿತ್ರವೂ (Dragon-2 Movie) ಇದೇ ರೀತಿ ಇರುತ್ತದೆ. ಸಲಾರ್-2 ಚಿತ್ರವೂ (Salaar-2 Movie) ಇದೇ ರೀತಿ ಬರುತ್ತದೆ. ಕೆಜಿಎಫ್-3 ಇದೇ ರೀತಿ ಇರುತ್ತದೆ. ಆದರೆ. ಈ ಸಿನಿಮಾಗಳು ಆದ್ಮೇಲೆ ಪ್ರಶಾಂತ್ ನೀಲ್ ಈ ಕಡುಗಪ್ಪು ಫಾರ್ಮ್ಯಾಟ್‌ನಿಂದ ಹೊರಗೆ ಬರ್ತಾರೆ. ಇದನ್ನ ಸ್ವತಃ ಪ್ರಶಾಂತ್ ನೀಲ್ (Prashanth Neel) ಹೇಳಿಕೊಂಡಿದ್ದಾರೆ. ಇದರ ವಿವರ ಇಲ್ಲಿದೆ ಓದಿ.
ಡ್ರ್ಯಾಗನ್ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಹೀರೋ ಅಲ್ಲ
ಇಲ್ಲಿವರೆಗೂ ಪ್ರಶಾಂತ್ ನೀಲ್ ಬರೆಯದೇ ಇರೋ ಡಾರ್ಕ್ ಕ್ಯಾರೆಕ್ಟರ್ ಇದಾಗಿದೆ. ಇದನ್ನ ಸ್ವತಃ ಪ್ರಶಾಂತ್ ನೀಲ್ ಹೇಳಿಕೊಂಡಿದ್ದಾರೆ. ಇದನ್ನ ಬರೆಯೋಕೆ 3 ವರ್ಷ ಬೇಕಾಗಿದೆ. ಇದು ನಿಕ್ಕೂ ಡಾರ್ಕೆಸ್ಟ್ ರೋಲ್ ಆಗಿದೆ.
ಡ್ರ್ಯಾಗನ್ ಚಿತ್ರದ ಪಾತ್ರ ನಿಜಕ್ಕೂ ತುಂಬಾನೆ ಡಾರ್ಕ್ ಆಗಿದೆ. ಈ ಪಾತ್ರವನ್ನ ಒಪ್ಪೋದು ತುಂಬಾನೆ ಕಷ್ಟವೇ ಬಿಡಿ. ಆದರೂ ಜೂನಿಯರ್ ಎನ್‌ಟಿಆರ್ ಇದನ್ನ ಸಾಕಷ್ಟು ಯೋಚನೆ ಮಾಡಿಯೇ ಒಪ್ಪಿದ್ದಾರೆ.
ಆದರೆ, ಕೆಜಿಎಫ್ ಚಿತ್ರದ ರಾಕಿ ಭಾಯ್, ಸಲಾರ್ ಚಿತ್ರದ ದೇವ, ಡ್ರ್ಯಾಗನ್ ಚಿತ್ರದ ಲೂಗರ್ ಈ ಮೂರು ಪಾತ್ರಗಳು ಡಾರ್ಕ್ ಪಾತ್ರಗಳೇ ಆಗಿವೆ. ಆದರೆ, ಇವುಗಳಿಗೆ ಎಮೊಷನ್ಸ್ ಇವೆ. ಯಾಕೆ ಈ ಪಾತ್ರಗಳು ವಿಲನ್ ಅನ್ನೋದಕ್ಕೂ ಒಂದೊಂದು ಸರಿಯಾದ ಅರ್ಥ ಇದೆ ಅಂತಲೇ ಪ್ರಶಾಂತ್ ನೀಲ್ ಹೇಳಿಕೊಂಡಿದ್ದಾರೆ.
ಡ್ರ್ಯಾಗನ್ ಚಿತ್ರದ ಒಂದು ಲೈನ್ ಮಾತ್ರ ಪ್ರಶಾಂತ್ ನೀಲ್ ಹೇಳಿದ್ದರು. ಆದರೆ, ಆರಂಭದ ಮೂರು ವರ್ಷ ಪ್ರಶಾಂತ್ ನೀಲ್ ಮತ್ತು ಜೂನಿಯರ್ ಎನ್‌ಟಿಆರ್ ಈ ಕಥೆಯ ಮೇಲೆ ಚರ್ಚೆ ಮಾಡಿದ್ದಾರೆ.
ಐದು ವರ್ಷದ ಹಿಂದೆ ಹೇಳಿದ ಕಥೆ
ಆ ಚರ್ಚೆಯ ಸಮಯದಲ್ಲಿಯೆ ಪ್ರಶಾಂತ್ ನೀಲ್ ಅವರಿಗೆ ಜೂನಿಯರ್ ಎನ್‌ಟಿಆರ್ ಒಂದು ಪ್ರಶ್ನೆ ಕೇಳಿದ್ದರು. ಮಹಾಭಾರತದಲ್ಲಿ ಯಾರು ವಿನ್ನರ್ ಅಂತಲೇ ಪ್ರಶ್ನೆ ಮಾಡಿದ್ದರು.
ಜೂನಿಯರ್ ಎನ್‌ಟಿಆರ್ ಕೇಳಿದ ಪ್ರಶ್ನೆಗೆ ಪ್ರಶಾಂತ್ ನೀಲ್ ಹೇಳಿದ್ದರು. ಕೃಷ್ಣ ಇಲ್ಲವೆ ಅರ್ಜುನ ಈ ಮಹಾಭಾರತದ ವಿನ್ನರ್ ಅಂತ ಹೇಳಿದ್ದಾರೆ.
ಪ್ರಶಾಂತ್ ನೀಲ್ ಅವರ ಈ ಡ್ರ್ಯಾಗನ್ ಚಿತ್ರಕ್ಕೆ 6 ಜನ ರೈಟರ್ಸ್ ಇದ್ದಾರೆ. ಆದರೆ, ಆರಂಭದಲ್ಲಿ ಪ್ರಶಾಂತ್ ನೀಲ್ ಮತ್ತು ಜೂನಿಯರ್ ಎನ್‌ಟಿಆರ್ ಚರ್ಚೆ ಮಾಡಿದ್ದಾರೆ.
ಇವರ ಹಲವಾರು ಚರ್ಚೆಗಳ ಬಳಿಕವೇ ಡ್ರ್ಯಾಗನ್ ಸಿನಿಮಾದ ಕಥೆ ಹುಟ್ಟಿಕೊಂಡಿದೆ. ಈ ಸಿನಿಮಾದ ಕಥೆ ಬರೆಯೋಕೆ ಮೂರು ವರ್ಷಗಳೇ ಕಳೆದಿದೆ. ಆದರೆ, ನಂತರ 6 ಜನ ರೈಟರ್ಸ್ ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಈ ಎಲ್ಲ ವಿಷಯವನ್ನ ಡೈರೆಕ್ಟರ್ ಪ್ರಶಾಂತ್ ನೀಲ್ ಅವರು Galatta Plus ಸಂದರ್ಶನದಲ್ಲಿಯೇ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka













