Gilli Nata: ಗಿಲ್ಲಿ ‘ನಟ’ನಿಗೆ ಡಬಲ್ ಧಮಾಕಾ! ಒಂದೆಡೆ ಶ್ರೀಲೀಲಾ ನಾಯಕಿ, ಮತ್ತೊಂದೆಡೆ ಭರ್ಜರಿ ಸಂಭಾವನೆ? | | ACTPnews

ಗಿಲ್ಲಿ ನಟ


Last Updated:

ಈ ಚಿತ್ರದ ಮೂಲಕ ಗಿಲ್ಲಿ ನಟಗೆ ಒಂದೇ ಸಮಯದಲ್ಲಿ ಎರಡು ದೊಡ್ಡ ಅವಕಾಶಗಳು ಸಿಕ್ಕಂತಾಗಿದೆ. ಮೊದಲನೆಯದಾಗಿ ಅವರು ನಾಯಕ ನಟನಾಗಿ ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ. ಎರಡನೆಯದಾಗಿ ಅವರ ಜೊತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಪಡೆದಿರುವ ನಟಿ ಶ್ರೀಲೀಲಾ ನಾಯಕಿಯಾಗಿ ಅಭಿನಯಿಸಲಿದ್ದಾರೆ

ಗಿಲ್ಲಿ ನಟ
ಗಿಲ್ಲಿ ನಟ

ಬಿಗ್ ಬಾಸ್ ಕನ್ನಡ ಸೀಸನ್ 12ರ (Bigg Boss Kannada Season 12) ಟ್ರೋಫಿ ಗೆದ್ದು ಕರ್ನಾಟಕ ಮನೆಮಾತಾಗಿದ್ದ ಗಿಲ್ಲಿ ನಟ (Gilli Nata) ಇದೀಗ ತಮ್ಮ ಅಭಿಮಾನಿಗಳಿಗೆ ಮತ್ತೊಂದು ದೊಡ್ಡ ಸಿಹಿಸುದ್ದಿ ನೀಡಿದ್ದಾರೆ. ರಿಯಾಲಿಟಿ ಶೋ ಮೂಲಕ ಅಪಾರ ಜನಪ್ರಿಯತೆ ಗಳಿಸಿದ ಅವರು ಇದೀಗ ಬೆಳ್ಳಿತೆರೆಗೆ ನಾಯಕನಾಗಿ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಈ ಬೆನ್ನಲೇ ಹೊಸ ಸಿನಿಮಾ ಹಾಗೂ ನಾಯಕ ನಟ ಗಿಲ್ಲಿ ಕುರಿತು ಅನೇಕ ವಿಚಾರಗಳು ಹೊರಬಿದ್ದಿದೆ.

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ತಮ್ಮ ಕಾಮಿಡಿ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಗಿಲ್ಲಿ ನಟ, ಅಂತಿಮವಾಗಿ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದರು. ಕಾರ್ಯಕ್ರಮ ಮುಗಿದ ನಂತರ ಅವರ ಮುಂದಿನ ಹೆಜ್ಜೆ ಏನಾಗಿರಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ

ಗಿಲ್ಲಿ ನಟ ಅಭಿನಯಿಸಲಿರುವ ಈ ಹೊಸ ಚಿತ್ರಕ್ಕೆ ಕನ್ನಡ ಚಿತ್ರರಂಗದ ಪ್ರತಿಷ್ಠಿತ ಬ್ಯಾನರ್‌ಗಳಲ್ಲೊಂದಾದ ಕೆವಿಎನ್ ಪ್ರೊಡಕ್ಷನ್ಸ್ ಬೆಂಬಲ ನೀಡುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಭಾರಿ ಬಜೆಟ್ ಚಿತ್ರಗಳ ಮೂಲಕ ಗಮನ ಸೆಳೆದಿರುವ ಈ ನಿರ್ಮಾಣ ಸಂಸ್ಥೆ, ವಿವಿಧ ಭಾಷೆಗಳಲ್ಲಿ ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಸಿನಿಮಾಗಳನ್ನು ನಿರ್ಮಿಸುತ್ತಿದೆ.

ಗಿಲ್ಲಿ ನಟನಿಗೆ ಡಬಲ್ ಧಮಾಕಾ

ಈ ಚಿತ್ರದ ಮೂಲಕ ಗಿಲ್ಲಿ ನಟಗೆ ಒಂದೇ ಸಮಯದಲ್ಲಿ ಎರಡು ದೊಡ್ಡ ಅವಕಾಶಗಳು ಸಿಕ್ಕಂತಾಗಿದೆ. ಮೊದಲನೆಯದಾಗಿ ಅವರು ನಾಯಕ ನಟನಾಗಿ ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ. ಎರಡನೆಯದಾಗಿ ಅವರ ಜೊತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಪಡೆದಿರುವ ನಟಿ ಶ್ರೀಲೀಲಾ ನಾಯಕಿಯಾಗಿ ಅಭಿನಯಿಸಲಿದ್ದಾರೆ ಎಂಬ ಮಾಹಿತಿ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.

ಮೊದಲ ಸಿನಿಮಾಗೆ ಕೋಟಿ ಸಂಭಾವನೆ?

ಚಿತ್ರದ ಘೋಷಣೆಯ ಜೊತೆಗೆ ಗಿಲ್ಲಿ ನಟನ ಸಂಭಾವನೆ ಕುರಿತ ಚರ್ಚೆಯೂ ಜೋರಾಗಿದೆ. ಪಬ್ಲಿಕ್ ಟಿವಿ ವರದಿ ಪ್ರಕಾರ ತಮ್ಮ ಮೊದಲ ಸಿನಿಮಾಗೆ ಗಿಲ್ಲಿ ನಟ ಬರೋಬ್ಬರಿ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಈ ಮಾಹಿತಿ ಅಧಿಕೃತವಾಗಿ ದೃಢಪಟ್ಟಿಲ್ಲವಾದರೂ, ಮೊದಲ ಸಿನಿಮಾಗೆ ಇಷ್ಟೊಂದು ದೊಡ್ಡ ಮೊತ್ತದ ಸಂಭಾವನೆ ಸಿಕ್ಕಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಹುಟ್ಟುಹಬ್ಬದ ದಿನವೇ ಹೊಸ ಸಿನಿಮಾಗೆ ಚಾಲನೆ

ಕೆಲವು ದಿನಗಳ ಹಿಂದೆಯೇ ಗಿಲ್ಲಿ ನಟ ತಮ್ಮ ಅಭಿಮಾನಿಗಳಿಗೆ ಶೀಘ್ರದಲ್ಲೇ ದೊಡ್ಡ ಘೋಷಣೆ ಮಾಡುವುದಾಗಿ ಸುಳಿವು ನೀಡಿದ್ದರು. ಆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಊಹಾಪೋಹಗಳು ಹರಿದಾಡಿದ್ದವು. ಇದೀಗ ಆ ಘೋಷಣೆ ಅಧಿಕೃತವಾಗಿದ್ದು, ಜೂನ್ 21ರಂದು ಗಿಲ್ಲಿ ನಟನ ಹುಟ್ಟುಹಬ್ಬದ ದಿನವೇ ಚಿತ್ರದ ಮುಹೂರ್ತ ನಡೆಯಲಿದೆ ಎನ್ನಲಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed