Mukesh Ambani: ಪ್ರಧಾನಿ ನರೇಂದ್ರ ಮೋದಿ ಮಾಡಿದ ಅದ್ಭುತ ಸಾಧನೆಗೆ ಮುಖೇಶ್ ಅಂಬಾನಿ ಅಭಿನಂದನೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

Mukesh Ambani Congratulates PM Modi: ‘ಸಾರ್ವಜನಿಕ ಸೇವೆಯಲ್ಲಿ ಮೋದಿ ಅವರ ಈ ಗಮನಾರ್ಹ ಮೈಲಿಗಲ್ಲಿಗೆ ನಾವು ಅವರನ್ನು ಅಭಿನಂದಿಸುತ್ತೇವೆ ಎಂದು ಮುಖೇಶ್ ಅಂಬಾನಿ ಹೇಳಿದರು.

News18
News18

ನವದೆಹಲಿ: ಭಾರತದ ಅತ್ಯಂತ ದೀರ್ಘಾವಧಿಯ ಚುನಾಯಿತ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ‘ಅದ್ಭುತ ಸಾಧನೆ’ ಸಾಧಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ರಿಲಯನ್ಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ (Mukesh Ambani) ಅಭಿನಂದಿಸಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ 49 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಮುಖೇಶ್ ಅಂಬಾನಿ ಅವರು, ‘ಸಾರ್ವಜನಿಕ ಸೇವೆಯಲ್ಲಿ ಮೋದಿ ಅವರ ಈ ಗಮನಾರ್ಹ ಮೈಲಿಗಲ್ಲಿಗೆ ನಾವು ಅವರನ್ನು ಅಭಿನಂದಿಸುತ್ತೇವೆ. ಭಾರತದ ಬೆಳವಣಿಗೆಗೆ ಅವರ ದೃಷ್ಟಿಕೋನ ಮತ್ತು ಅದಕ್ಕೆ ಅನುಗುಣವಾದ ಅಭಿವೃದ್ಧಿ ಯೋಜನೆಯು ಕಳೆದ ದಶಕದಲ್ಲಿ ಭಾರತ ಕಂಡಿರುವ ತ್ವರಿತ, ಸರ್ವತೋಮುಖ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸಿದೆ’ ಎಂದು ಹೇಳಿದರು.

ನರೇಂದ್ರ ಮೋದಿ ಅವರು ಅಕ್ಟೋಬರ್ 7, 2021 ರಂದು ಮೊದಲು ಗುಜರಾತ್ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಅಂದಿನಿಂದ ಸತತ ಅನೇಕ ಚುನಾವಣೆಗಳಲ್ಲಿ ಸರ್ಕಾರದ ಮುಖ್ಯಸ್ಥರಾಗಿ ನಿರಂತರವಾಗಿ ಆಯ್ಕೆಯಾಗುತ್ತಿದ್ದಾರೆ. ಮೊದಲು ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ನರೇಂದ್ರ ಮೋದಿ ಸದ್ಯ ಪ್ರಧಾನ ಮಂತ್ರಿಯಾಗಿ ದೇಶದ ಚುಕ್ಕಾಣಿಯನ್ನು ಹಿಡಿದು ಮುನ್ನಡೆಯುತ್ತಿದ್ದಾರೆ.

‘ಕಳೆದ ವರ್ಷಗಳಲ್ಲಿ, ನರೇಂದ್ರ ಮೋದಿ ಅವರು ಪಡೆದ ಮತಗಳ ಸಂಖ್ಯೆ ಪ್ರಜಾಪ್ರಭುತ್ವ ಜಗತ್ತಿನ ಯಾವುದೇ ನಾಯಕ ಗಳಿಸಿದ್ದಕ್ಕಿಂತ ಅತಿ ಹೆಚ್ಚು. ಹೀಗಾಗಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು’ ಎಂದು ಮುಖೇಶ್ ಅಂಬಾನಿ ಕೊಂಡಾಡಿದರು.

ಕಳೆದ ಆರು ವರ್ಷಗಳು ಜಾಗತಿಕ ವ್ಯವಹಾರಗಳಿಗೆ ಹಲವಾರು ದಶಕಗಳು ಕಂಡ ಅತ್ಯಂತ ಅಸ್ಥಿರ ಮತ್ತು ಅನಿಶ್ಚಿತ ವರ್ಷಗಳಾಗಿವೆ ಎಂದು ಗಮನಸೆಳೆದ ಅಂಬಾನಿ, ಪಶ್ಚಿಮ ಏಷ್ಯಾದಲ್ಲಿನ ಯುದ್ಧವು ಅಸ್ಥಿರತೆಯನ್ನು ಹೆಚ್ಚಿಸಿದೆ. ಆದರೆ ಪ್ರಧಾನಿ ಮೋದಿ ಅವರು ಅಭೂತಪೂರ್ವ ಸವಾಲುಗಳ ಮೂಲಕ ಭಾರತವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ ಎಂದು ಹೇಳಿದರು.

ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಭಾರತವು ಬಲಶಾಲಿಯಾಗಿ ಹೊರಹೊಮ್ಮಲಿದೆ ಎಂದು ಒತ್ತಿ ಹೇಳಿದ ಅಂಬಾನಿ, ಈ ಅಸ್ಥಿರ ಸಮಯಗಳಿಂದ ಭಾರತ ಕಲಿಯಬೇಕಾದ ಅತ್ಯಂತ ಮುಖ್ಯವಾದ ಪಾಠವೆಂದರೆ, ನಮ್ಮ ದೇಶವನ್ನು ನಿರ್ಣಾಯಕ ಸಂಪನ್ಮೂಲಗಳು ಮತ್ತು ತಂತ್ರಜ್ಞಾನಗಳಲ್ಲಿ ಆತ್ಮನಿರ್ಭರಗೊಳಿಸಲು ನಾವು ನಮ್ಮ ಪ್ರಯತ್ನಗಳನ್ನು ತೀವ್ರಗೊಳಿಸಬೇಕು ಮತ್ತು ವೇಗಗೊಳಿಸಬೇಕು. ಗರಿಷ್ಠ ಇಂಧನ ಸ್ವಾವಲಂಬನೆ ಮತ್ತು AI ಸ್ವಾವಲಂಬನೆ ನಮ್ಮ ರಾಷ್ಟ್ರೀಯ ಧ್ಯೇಯಗಳಾಗಬೇಕು. ಈ ಧ್ಯೇಯಗಳ ಯಶಸ್ಸು ವಿಕ್ಷಿತ್ ಭಾರತದ ಯಶಸ್ಸಿಗೆ ನಿರ್ಣಾಯಕವಾಗಿದೆ. ಎರಡೂ ರಾಷ್ಟ್ರೀಯ ಅಗತ್ಯಗಳಲ್ಲಿ ರಿಲಯನ್ಸ್ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports