Vaibhav Sooryavanshi: ವೈಭವ್ ಸೂರ್ಯವಂಶಿ ಅಪ್ಪ ಯಾರು? ಮಗನ ಕ್ರಿಕೆಟ್ ಕನಸಿಗಾಗಿ ಸರ್ವಸ್ವವನ್ನೇ ಧಾರೆ ಎರೆದ ತಂದೆಯ ರೋಚಕ ಕಥೆ! | | ACTPnews

ವೈಭವ್ ಸೂರ್ಯವಂಶಿ ತಂದೆ


Last Updated:

ಸೂರ್ಯವಂಶಿ ಅವರ ಯಶಸ್ಸಿಗೆ ಅವರ ಕುಟುಂಬದ ಬೆಂಬಲವೇ ಕಾರಣ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ವೈಭವ್‌ ಸೂರ್ಯವಂಶಿ ಬೆನ್ನುಲುಬಾಗಿ ನಿಂತಿರುವ ತಂದೆ ಯಾರು? ವೈಭವ್ ಯಶಸ್ಸಿಗೆ ಅವರು ಮಾಡಿದ ತ್ಯಾಗಗಳೇನು ಅನ್ನೋದ್ರ ಮಾಹಿತಿ ಇಲ್ಲಿದೆ.

ವೈಭವ್ ಸೂರ್ಯವಂಶಿ ತಂದೆ
ವೈಭವ್ ಸೂರ್ಯವಂಶಿ ತಂದೆ

15 ವರ್ಷದ ವೈಭವ್ ಸೂರ್ಯವಂಶಿ (Vaibhav Sooryavanshi) 2026ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL) ಅದ್ಭುತ ಪ್ರದರ್ಶನ ನೀಡಿ ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ತಮ್ಮ ಅಬ್ಬರ ಬ್ಯಾಟಿಂಗ್​ನಿಂದಲೇ ‘ವಂಡರ್​ ಕಿಡ್​‘ ಎಂದು ಫೇಮಸ್​ ಆಗಿರುವ ವೈಭವ್​ ಸೂರ್ಯವಂಶಿ ಟೀಂ ಇಂಡಿಯಾದಲ್ಲೂ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರ ಯಶಸ್ಸಿಗೆ ಅವರ ಕುಟುಂಬದ ಬೆಂಬಲವೇ ಕಾರಣ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ವೈಭವ್‌ ಸೂರ್ಯವಂಶಿ ಬೆನ್ನುಲುಬಾಗಿರುವ ತಂದೆ ಯಾರು? ವೈಭವ್​ ಯಶಸ್ಸಿಗೆ ಅವರು ಮಾಡಿದ ತ್ಯಾಗಗಳೇನು ಅನ್ನೋದ್ರ ಮಾಹಿತಿ ಇಲ್ಲಿದೆ.

ತಂದೆಗೂ ಇತ್ತು ಕ್ರಿಕೆಟರ್​ ಆಗೋ ಕನಸು

ವೈಭವ್ ಸೂರ್ಯವಂಶಿ ತಂದೆ ಹೆಸರು ಸಂಜೀವ್ ಸೂರ್ಯವಂಶಿ ಮೂಲತಃ ರೈತ ಕುಟುಂಬದವರು. ಈ ಹಿಂದೆ ಸಂಜೀವ್​ ಸೂರ್ಯವಂಶಿ ಅವರು ಒಂದು ಸಣ್ಣ ಅಂಗಡಿಯನ್ನು ನಡೆಸುತ್ತಿದ್ದರು. ಮಗ ಕ್ರಿಕೆಟ್ ಸ್ಟಾರ್​​ ಆಗುವ ಹಿಂದೆಯೇ, ಸಂಜೀವ್ ಸ್ವತಃ ಕ್ರಿಕೆಟರ್​ ಆಗಬೇಕು ಎಂದು ಕನಸು ಕಂಡಿದ್ದರಂತೆ. ಅಲ್ಲದೇ ಕ್ಲಬ್ ಮಟ್ಟದಲ್ಲಿ ಒಳ್ಳೆಯ ಹೆಸರು ಮಾಡಿದ್ದರು.

ಚಿಕ್ಕ ವಯಸ್ಸಿನಲ್ಲಿ ಕ್ರಿಕೆಟಿಗನಾಗಲು ಸಾಧ್ಯವಾಗದ ಹಿನ್ನೆಲೆ ಸಂಜೀವ್ ಸೂರ್ಯವಂಶಿ ತನ್ನ ಪುತ್ರನ ಯಶಸ್ಸಿಗೆ ಸಹಾಯ ಮಾಡಲು ಸಂಪೂರ್ಣವಾಗಿ ತನ್ನನ್ನು ತಾನು ಅರ್ಪಿಸಿಕೊಂಡರು. ತಮ್ಮ ಮಗನ ಅಭಿವೃದ್ಧಿ ಮತ್ತು ತರಬೇತಿಯತ್ತ ಗಮನಹರಿಸಲು ತಮ್ಮ ಕೆಲಸ ಮತ್ತು ವ್ಯವಹಾರವನ್ನು ತೊರೆದರು. ಮಗನನ್ನು ಕ್ರಿಕೆಟಿಗನನ್ನಾಗಿ ಮಾಡಲು ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ವೈಭವ್‌ ಸೂರ್ಯವಂಶಿಗೆ ಗುಣಮಟ್ಟದ ತರಬೇತಿ ಕೊಡಿಸಲು, ಸಂಜೀವ್ ಸೂರ್ಯವಂಶಿ ತಮ್ಮ ಕೃಷಿ  ಭೂಮಿಯನ್ನು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಅಕಾಡೆಮಿ ಶುಲ್ಕ, ಪ್ರಯಾಣ ವೆಚ್ಚ ಮತ್ತು ಇತರ ಕ್ರಿಕೆಟ್ ತರಬೇತಿ ವೆಚ್ಚಗಳನ್ನು ಭರಿಸಲು ಬಳಸಿದರು.

ಇಂದು ವೈಭವ್ ಸೂರ್ಯವಂಶಿ ಭಾರತದ ಅತ್ಯಂತ ಭರವಸೆಯ ಯುವ ಕ್ರಿಕೆಟಿಗರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. ವೈಭವ್​​ ಸೂರ್ಯವಂಶಿ ಯಶಸ್ಸು ಅವರ ಕುಟುಂಬದ ಧೈರ್ಯ ಮತ್ತು ತ್ಯಾಗದ ಫಲಿತಾಂಶವಾಗಿದೆ. ವೈಭವ್ ಸೂರ್ಯವಂಶಿ ಮತ್ತು ಅವರ ಕುಟುಂಬವು ಸಣ್ಣ ಪಟ್ಟಣಗಳಿಂದ ಅಥವಾ ಹಳ್ಳಿಗಳಿಂದ ಬಂದು ದೊಡ್ಡ ಕನಸು ಕಾಣುವ ಎಲ್ಲರಿಗೂ ಸ್ಫೂರ್ತಿಯಾಗಿದೆ. ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಮೂಲಕ ಯಾವುದೇ ಗುರಿಯನ್ನು ಸಾಧಿಸುವುದು ಸಾಧ್ಯ ಎಂದು ಈ ಕಥೆ ತೋರಿಸುತ್ತದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed