Tirumala: ತಿಮ್ಮಪ್ಪನ ಭಕ್ತರಿಗೆ ಸಂಪೂರ್ಣ ಉಚಿತ; ಜಸ್ಟ್ 3 ದಿನ, 3.41 ಲಕ್ಷ ಜನರಿಗೆ ಫ್ರೀ ಫ್ರೀ! | ಜ್ಯೋತಿಷ್ಯ | ACTPnews

Tirumala: ತಿಮ್ಮಪ್ಪನ ಭಕ್ತರಿಗೆ ಸಂಪೂರ್ಣ ಉಚಿತ; ಜಸ್ಟ್ 3 ದಿನ, 3.41 ಲಕ್ಷ ಜನರಿಗೆ ಫ್ರೀ ಫ್ರೀ! | ಜ್ಯೋತಿಷ್ಯ


ಏಪ್ರಿಲ್‌ ಮತ್ತು ಮೇ ತಿಂಗಳಿನಲ್ಲಿ ಲಕ್ಷಾಂತರ ಭಕ್ತರಿಂದ ಜನಜಂಗುಳಿ ಸೃಷ್ಟಿಯಾಗುತ್ತಿತ್ತು. ಅಭೂತಪೂರ್ವ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ, ಅವರ ದರ್ಶನ ವ್ಯವಸ್ಥೆಯನ್ನು ಸುಗಮವಾಗಿ ನಿರ್ವಹಿಸಲು ಟಿಟಿಡಿ (TTD) ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ವಿಶೇಷ ವ್ಯವಸ್ಥೆಯನ್ನು ರೂಪಿಸಿತು. ಇದರ ಭಾಗವಾಗಿ, ತಿರುಮಲ ಬೆಟ್ಟ ಪ್ರದೇಶ ಹಾಗೂ ಕಾಲ್ನಡಿಗೆ ಮಾರ್ಗಗಳಲ್ಲಿ ಒಟ್ಟು 66 ವಿಶೇಷ ಕೌಂಟರ್‌ಗಳನ್ನು ಸ್ಥಾಪಿಸಿ, ಭಕ್ತರಿಗೆ ವೇಗವಾಗಿ ಮತ್ತು ಸುಲಭವಾಗಿ ಸೇವೆ ಒದಗಿಸುವ ವ್ಯವಸ್ಥೆ ಮಾಡಲಾಯಿತು.

ಮೂರು ಶಿಫ್ಟ್‌ಗಳಲ್ಲಿ 345 ಸಿಬ್ಬಂದಿ 24 ಗಂಟೆಗಳೂ ಕಾರ್ಯನಿರ್ವಹಿಸಿದ ಪರಿಣಾಮ, ಅರ್ಧ ಕೋಟಿಗೂ ಹೆಚ್ಚು ಭಕ್ತರು ದರ್ಶನಕ್ಕೆ ಹೋಗುವ ಮೊದಲು ತಮ್ಮ ಬ್ಯಾಗ್‌, ಸಾಮಾನು ಮತ್ತು ಮೊಬೈಲ್‌ಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡಲು ಸಾಧ್ಯವಾಯಿತು. ಈ ಸೇವೆಯನ್ನು ಬಳಸಿದ ಭಕ್ತರ ಸಂಖ್ಯೆ ಕಳೆದ ವರ್ಷಕ್ಕಿಂತ ಈ ವರ್ಷ ಭಕ್ತಾಧಿಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ.

ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಭಕ್ತರು

ಏಪ್ರಿಲ್‌ 2026ರಲ್ಲಿ 23,15,279 ಮಂದಿ ತಮ್ಮ ಸಾಮಾನುಗಳನ್ನು ಠೇವಣಿ ಇಟ್ಟಿದ್ದು, 2025ರ ಏಪ್ರಿಲ್‌ನ 20,75,481 ಠೇವಣಿಗಳಿಗಿಂತ 2,39,798 ಹೆಚ್ಚು ದಾಖಲಾಗಿದೆ. ಮೇ 2026ರಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಿ 28,23,697ಕ್ಕೆ ತಲುಪಿದ್ದು, 2025ರ ಮೇ ತಿಂಗಳಿಗಿಂತ 4,41,075 ಹೆಚ್ಚಳ ಕಂಡಿದೆ. ಇತ್ತೀಚಿನ ಒಂದು ವಾರಾಂತ್ಯದ ಮೂರು ದಿನಗಳಲ್ಲೇ 3,41,742 ಭಕ್ತರು ಉಚಿತ ಲಗೇಜ್ ಮತ್ತು ಮೊಬೈಲ್ ಠೇವಣಿ ಸೇವೆಯನ್ನು ಬಳಸಿರುವುದು ಸೇವೆಯ ಮೇಲಿನ ಭಾರೀ ಬೇಡಿಕೆಯನ್ನು ತೋರಿಸುತ್ತದೆ.

ಕಾಲ್ನಡಿಗೆಯಲ್ಲಿ ತಿರುಮಲಕ್ಕೆ ತೆರಳುವ ಭಕ್ತರಿಗೆ ವಿಶೇಷ ಲಗೇಜ್‌ ಸೇವೆ

ಕಾಲ್ನಡಿಗೆಯಲ್ಲಿ ತಿರುಮಲಕ್ಕೆ ತೆರಳುವ ಭಕ್ತರ ಅನುಕೂಲಕ್ಕಾಗಿ ಅಲಿಪಿರಿ ಮತ್ತು ಶ್ರೀವಾರಿ ಮೆಟ್ಟು ಮಾರ್ಗಗಳಲ್ಲಿ ವಿಶೇಷ ಲಗೇಜ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಲಿಪಿರಿ ಕೇಂದ್ರದಲ್ಲಿ 5 ಕೌಂಟರ್‌ಗಳು ಮತ್ತು 45 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, 10,194 ವಸ್ತುಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಶ್ರೀವಾರಿ ಮೆಟ್ಟು ಕೇಂದ್ರದಲ್ಲಿ 2 ಕೌಂಟರ್‌ಗಳು ಮತ್ತು 10 ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದು, 3,025 ವಸ್ತುಗಳನ್ನು ಸುರಕ್ಷಿತವಾಗಿ ಸಂಗ್ರಹಿಸಬಹುದು.

ಈ ಕೇಂದ್ರಗಳಲ್ಲಿ ಠೇವಣಿ ಇಡಲಾದ ಸಾಮಾನುಗಳನ್ನು ಸುರಕ್ಷಿತವಾಗಿ ತಿರುಮಲಕ್ಕೆ ಸಾಗಿಸಲಾಗುತ್ತದೆ. ಭಕ್ತರು ತಿರುಮಲ ತಲುಪಿದ ನಂತರ ನಿಗದಿತ ವಿತರಣಾ ಕೇಂದ್ರಗಳಲ್ಲಿ ತಮ್ಮ ಸಾಮಾನುಗಳನ್ನು ಪಡೆದುಕೊಳ್ಳಬಹುದು. ಭಕ್ತರಿಗೆ ತ್ವರಿತ ಮತ್ತು ಸುಗಮ ಸೇವೆ ಒದಗಿಸಲು ತಿರುಮಲದಾದ್ಯಂತ ಠೇವಣಿ ಮತ್ತು ವಿತರಣಾ ವ್ಯವಸ್ಥೆಯನ್ನು ವ್ಯಾಪಕವಾಗಿ ವಿಸ್ತರಿಸಲಾಗಿದೆ.

ಠೇವಣಿ ಕೇಂದ್ರಗಳು: ಠೇವಣಿಗಾಗಿ ಪ್ರಮುಖ ಕೇಂದ್ರಗಳಾಗಿ ಫ್ರೀ ಹಾಲ್‌ನಲ್ಲಿ 8 ಕೌಂಟರ್‌ಗಳ ಮೂಲಕ 17,291 ಮೊಬೈಲ್‌ಗಳು ಮತ್ತು 7,793 ಲಗೇಜ್‌ಗಳನ್ನು ಸುರಕ್ಷಿತವಾಗಿ ಸ್ವೀಕರಿಸಲಾಯಿತು. ನಾರಾಯಣಗಿರಿ ಶೆಡ್‌ಗಳಲ್ಲಿ 11,941 ಮೊಬೈಲ್‌ಗಳು ಹಾಗೂ 6,749 ಲಗೇಜ್‌ಗಳನ್ನು ಠೇವಣಿಯಾಗಿ ಇಡಲಾಯಿತು. ಇದರ ಜೊತೆಗೆ ವೈಕುಂಠಂ ಕ್ಯೂ ಕಾಂಪ್ಲೆಕ್ಸ್, ಡಿಡಿ ಹಾಲ್ ಮತ್ತು 300 ರೂಪಾಯಿಯ ವಿಶೇಷ ಪ್ರವೇಶ ದರ್ಶನ ಭಕ್ತರಿಗೂ ಪ್ರತ್ಯೇಕ ಠೇವಣಿ ಸೌಲಭ್ಯಗಳನ್ನು ಒದಗಿಸಲಾಗಿದೆ.

ವಿತರಣಾ ಸೇವೆ ಘಟಕಗಳು: ಭಕ್ತರು ಠೇವಣಿ ಇಟ್ಟ ಮೊಬೈಲ್‌ಗಳು ಹಾಗೂ ಸಾಮಾನುಗಳನ್ನು ಸುಲಭವಾಗಿ ಮರಳಿ ಪಡೆಯಲು ಅಲಿಪಿರಿ ಪಾದಯಾತ್ರೆ ಮಾರ್ಗದ ವಿತರಣಾ ಕೇಂದ್ರ, ಶ್ರೀವಾರಿ ಮೆಟ್ಟು ವಿತರಣಾ ಕೇಂದ್ರ ಹಾಗೂ ಪಿಎಸಿ 1–4 ಕೌಂಟರ್‌ಗಳಂತಹ ಹೆಚ್ಚಿನ ಸಾಮರ್ಥ್ಯದ ಕೇಂದ್ರಗಳನ್ನು ವ್ಯವಸ್ಥೆ ಮಾಡಲಾಗಿದೆ. ಇವುಗಳ ಮೂಲಕ ಸಾವಿರಾರು ಮೊಬೈಲ್‌ಗಳು ಮತ್ತು ಲಗೇಜ್‌ಗಳನ್ನು ವೇಗವಾಗಿ ಹಾಗೂ ಸುರಕ್ಷಿತವಾಗಿ ವಿತರಿಸಲಾಗುತ್ತಿದೆ.

ಲಗೇಜ್‌ಗೂ ಬಂತು ಕ್ಯೂಆರ್‌ ಕೋಡ್‌

ಈ ಸೇವೆಯು ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ವಸ್ತುಗಳನ್ನು ಠೇವಣಿ ಇಡುವಾಗ ಅವುಗಳಿಗೆ ವಿಶೇಷ ಕ್ಯೂಆರ್‌ ಕೋಡ್ ಸ್ಟಿಕ್ಕರ್ ಅಂಟಿಸಲಾಗುತ್ತದೆ. ಭಕ್ತರಿಗೆ ಅದಕ್ಕೆ ಹೊಂದಾಣಿಕೆಯ ಬಾರ್‌ಕೋಡ್ ರಶೀದಿ ನೀಡಲಾಗುತ್ತದೆ. ವಸ್ತುಗಳನ್ನು ಹಿಂತಿರುಗಿ ಪಡೆಯುವಾಗ ರಶೀದಿ ತೋರಿಸಿದರೆ, ಡಿಜಿಟಲ್ ಸಂಖ್ಯೆಯ ಆಧಾರದಲ್ಲಿ ಸಿಬ್ಬಂದಿ ಸಾಮಾನ್ಯವಾಗಿ ಒಂದು ನಿಮಿಷದೊಳಗೆ ಅವುಗಳನ್ನು ಪತ್ತೆಹಚ್ಚಿ ಹಿಂತಿರುಗಿಸುತ್ತಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed