Last Updated:
ಟೈಮ್ ನಿಯತಕಾಲಿಕೆಯ ಪಟ್ಟಿಯಲ್ಲಿ ಕ್ರೀಡಾಪಟುಗಳು, ತರಬೇತುದಾರರು, ಬೆಂಬಲಿಗರು ಮತ್ತು ಕ್ರೀಡೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಹೂಡಿಕೆದಾರರು ಸೇರಿದ್ದಾರೆ. ಮಂಧಾನ ಅವರಲ್ಲದೆ, ಪಟ್ಟಿಯಲ್ಲಿ ಅಮೇರಿಕನ್ ಬ್ಯಾಸ್ಕೆಟ್ಬಾಲ್ ದಂತಕಥೆ ಲೆಬ್ರಾನ್ ಜೇಮ್ಸ್, ಫುಟ್ಬಾಲ್ ತಾರೆಗಳಾದ ಲಿಯೋನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೊ ರೊನಾಲ್ದೊ ಸೇರಿದ್ದಾರೆ.
ಪ್ರತಿಷ್ಠಿತ ಟೈಮ್ ನಿಯತಕಾಲಿಕೆ (TIME Magazine) 2026ರ ಕ್ರೀಡಾ ಜಗತ್ತಿನ 100 ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಚ್ಚರಿ ಎಂದರೆ ನಿಯತಕಾಲಿಕೆಯು ಸೂಪರ್ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅಂತಹ ಸ್ಟಾರ್ ಕ್ರಿಕೆಟಿಗರಿಗೆ ಈ ಪಟ್ಟಿಯಲ್ಲಿ ಅವಕಾಶ ಸಿಕ್ಕಿಲ್ಲ. ಭಾರತ ಮಹಿಳಾ ತಂಡದ ಸ್ಮೃತಿ ಮಂಧಾನ (Smriti Mandhana) ಸ್ಥಾನ ಪಡೆದ ಏಕೈಕ ಭಾರತೀಯರಾಗಿದ್ದಾರೆ.
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಓಪನರ್ ಮತ್ತು ಉಪನಾಯಕಿ ಮಂಧಾನ ಅವರು ತಮ್ಮ ವೃತ್ತಿಜೀವನದಲ್ಲಿ ಅನೇಕ ಮೈಲಿಗಲ್ಲುಗಳನ್ನು ಸಾಧಿಸಿದ್ದಾರೆ. ಮಹಿಳಾ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು (34) ಬಾರಿಸಿದ ದಾಖಲೆಯನ್ನು ಅವರು ಹೊಂದಿದ್ದಾರೆ ಮತ್ತು ಈ ಸ್ವರೂಪದಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ (4,401 ರನ್) ಆಗಿದ್ದಾರೆ. ಅವರು ಏಕದಿನ ಪಂದ್ಯಗಳಲ್ಲಿ ಭಾರತದ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯೂ ಆಗಿದ್ದಾರೆ.
ಟೈಮ್ ನಿಯತಕಾಲಿಕೆಯ ಪಟ್ಟಿಯಲ್ಲಿ ಕ್ರೀಡಾಪಟುಗಳು, ತರಬೇತುದಾರರು, ಬೆಂಬಲಿಗರು ಮತ್ತು ಕ್ರೀಡೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಹೂಡಿಕೆದಾರರು ಸೇರಿದ್ದಾರೆ. ಮಂಧಾನ ಅವರಲ್ಲದೆ, ಪಟ್ಟಿಯಲ್ಲಿ ಅಮೇರಿಕನ್ ಬ್ಯಾಸ್ಕೆಟ್ಬಾಲ್ ದಂತಕಥೆ ಲೆಬ್ರಾನ್ ಜೇಮ್ಸ್, ಫುಟ್ಬಾಲ್ ತಾರೆಗಳಾದ ಲಿಯೋನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ, ಚೀನೀ-ಅಮೇರಿಕನ್ ಸ್ಕೀಯರ್ ಐಲೀನ್ ಗು, ಟೆನಿಸ್ ಸ್ಟಾರ್ ಕಾರ್ಲೋಸ್ ಅಲ್ಕರಾಜ್, ಬ್ಯಾಸ್ಕೆಟ್ಬಾಲ್ ಆಟಗಾರ ವಿಕ್ಟರ್ ವೆಂಬನ್ಯಾಮಾ, ಲೆಜೆಂಡರಿ ಗಾಲ್ಫ್ ಆಟಗಾರ ರೋರಿ ಮ್ಯಾಕ್ಲ್ರಾಯ್ ಮತ್ತು ದಕ್ಷಿಣ ಆಫ್ರಿಕಾದ ಕ್ರಿಕೆಟ್ ನಾಯಕಿ ಟೆಂಬಾ ಬವುಮಾ ಇದ್ದಾರೆ.
ದೇಶೀಯ ಏಕದಿನ ಪಂದ್ಯದಲ್ಲಿ ದ್ವಿಶತಕ ಗಳಿಸಿದ ಮೊದಲ ಭಾರತೀಯ ಮಹಿಳೆ ಮತ್ತು ಮೂರು ಅಂತರರಾಷ್ಟ್ರೀಯ ಸ್ವರೂಪಗಳಲ್ಲಿ ಶತಕ ಗಳಿಸಿದ ಮೊದಲ ಮಹಿಳೆ ಮಂಧಾನ. ಮಹಿಳಾ ಕ್ರಿಕೆಟ್ನಲ್ಲಿಅವರು 17 ಶತಕಗಳನ್ನು ಗಳಿಸಿದ್ದಾರೆ, ಇದು ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟ್ನಲ್ಲಿ ಅತ್ಯಧಿಕ ಶತಕಗಳಾಗಿವೆ. ಸ್ಮೃತಿ 2024ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಹಿಳಾ ಪ್ರೀಮಿಯರ್ ಲೀಗ್ ಪ್ರಶಸ್ತಿಗೆ ಮುನ್ನಡೆಸಿದರು ಮತ್ತು ಕಳೆದ ವರ್ಷ ODI ವಿಶ್ವಕಪ್ ಗೆದ್ದ ಭಾರತೀಯ ತಂಡದ ಉಪನಾಯಕಿಯಾಗಿದ್ದರು ಎಂದು ಟೈಮ್ಸ್ ಮ್ಯಾಗಜಿನ್ ಮಂಧಾನ ಬಗ್ಗೆ ಬರೆದುಕೊಂಡಿದೆ.
ಮಂಧಾನ 2025ರ ODI ವಿಶ್ವಕಪ್ನಲ್ಲಿ ಒಂಬತ್ತು ಪಂದ್ಯಗಳಲ್ಲಿ 54.25ರ ಸರಾಸರಿಯಲ್ಲಿ 434 ರನ್ ಗಳಿಸಿದ್ದರು. ಇದರಲ್ಲಿ ಒಂದು ಶತಕ ಮತ್ತು ಎರಡು ಅರ್ಧಶತಕಗಳು ಸೇರಿದ್ದವು. ಅವರು ಟೂರ್ನಮೆಂಟ್ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿದ್ದರು. ಈ ಮೊತ್ತವು ಪಂದ್ಯಾವಳಿಯ ಒಂದೇ ಆವೃತ್ತಿಯಲ್ಲಿ ಭಾರತೀಯ ಬ್ಯಾಟ್ಸ್ಮನ್ ಗಳಿಸಿದ ಅತಿ ಹೆಚ್ಚು ರನ್ಗಳಾಗುತ್ತು. 2017 ರ ಆವೃತ್ತಿಯಲ್ಲಿ ಮಿಥಾಲಿ ರಾಜ್ ಅವರ 409 ರನ್ಗಳ ದಾಖಲೆಯನ್ನು ಅವರು ಹಿಂದಿಕ್ಕಿದರು.
ಮಹಿಳಾ ಕ್ರಿಕೆಟ್ನ ಅತ್ಯುತ್ತಮ ಬ್ಯಾಟ್ಸ್ಮನ್ಗಳಲ್ಲಿ ಸ್ಥಾನ ಪಡೆದಿರುವ ಮಂಧಾನ ಎರಡು ಬಾರಿ ಐಸಿಸಿ ವರ್ಷದ ಮಹಿಳಾ ಕ್ರಿಕೆಟರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. 2013 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ನಂತರ, ಎಡಗೈ ಬ್ಯಾಟರ್ 167 ಟಿ20, 120 ಏಕದಿನ ಮತ್ತು 8 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.
Jun 16, 2026 10:13 PM IST
Smriti Mandhana: ಕೊಹ್ಲಿ, ರೋಹಿತ್ ಅಲ್ಲ! ಟೈಮ್ಸ್ ನಿಯತಕಾಲಿಕೆ 100 ಪ್ರಭಾವಿ ಕ್ರೀಡಾಪಟುಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಇವರು













