Last Updated:
ಬಾಲಿವುಡ್ನ ಖ್ಯಾತ ನಟಿ ಮಾಧುರಿ ದೀಕ್ಷಿತ್ (Madhuri Dixit) ಹಾಗೂ ಅವರ ಪತಿ ಡಾ. ಶ್ರೀರಾಮ್ ನೆನೆ (Dr. Sriram Nene) ಸೋಮಾವತಿ ಅಮವಾಸ್ಯೆಯಂತಹ ಪವಿತ್ರ ದಿನದಂದು ಬೆಂಗಳೂರಿನ ಪ್ರಸಿದ್ಧ ಮುನೇಶ್ವರ ಸ್ವಾಮಿ ದೇವಸ್ಥಾನಕ್ಕೆ (Muneshwara Swamy Temple) ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಬಾಲಿವುಡ್ನ ಖ್ಯಾತ ನಟಿ ಮಾಧುರಿ ದೀಕ್ಷಿತ್ (Madhuri Dixit) ಹಾಗೂ ಅವರ ಪತಿ ಡಾ. ಶ್ರೀರಾಮ್ ನೆನೆ (Dr. Sriram Nene) ಮತ್ತೊಮ್ಮೆ ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದಾರೆ. ಸೋಮಾವತಿ ಅಮವಾಸ್ಯೆಯಂತಹ ಪವಿತ್ರ ದಿನದಂದು ದಂಪತಿ ಬೆಂಗಳೂರಿನ ಪ್ರಸಿದ್ಧ ಮುನೇಶ್ವರ ಸ್ವಾಮಿ ದೇವಸ್ಥಾನಕ್ಕೆ (Muneshwara Swamy Temple) ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕುಟುಂಬದೊಂದಿಗೆ ಹಾಗೂ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ದೇವರ ಆಶೀರ್ವಾದ ಪಡೆದು ಪ್ರಾರ್ಥನೆ ಸಲ್ಲಿಸಿದ್ದಾರೆ.
ಇನ್ನು ಬಾಲಿವುಡ್ನ ‘ಧಕ್ ಧಕ್’ ಬೆಡಗಿ ಮಾಧುರಿ ದೀಕ್ಷಿತ್ಗೆ ಬೆಂಗಳೂರಿನೊಂದಿಗೆ ವಿಶೇಷ ನಂಟಿದೆ. ಅವರು ತಮ್ಮ ಪತಿ ಡಾ. ಶ್ರೀರಾಮ್ ನೆನೆ ಮತ್ತು ಕುಟುಂಬದವರೊಂದಿಗೆ ಆಗಾಗ್ಗೆ ಬೆಂಗಳೂರಿಗೆ ಭೇಟಿ ನೀಡುತ್ತಲೇ ಇರ್ತಾರೆ. ಇಲ್ಲಿನ ಅನೇಕ ಪ್ರವಾಸಗಳಲ್ಲಿಯೂ ನಟಿ ಕಾಣಿಸಿಕೊಂಡಿದ್ದಾರೆ.
ಹಿಂದೂ ಧರ್ಮದಲ್ಲಿ ಸೋಮವಾರದಂದು ಬರುವ ಅಮವಾಸ್ಯೆಯನ್ನು ಸೋಮಾವತಿ ಅಮವಾಸ್ಯೆ ಎಂದು ಕರೆಯಲಾಗುತ್ತದೆ. ಈ ದಿನವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವುದು ಹಾಗೂ ದೇವರ ಆಶೀರ್ವಾದ ಪಡೆಯುವುದು ಭಕ್ತರಲ್ಲಿ ಸಾಮಾನ್ಯ ಸಂಪ್ರದಾಯವಾಗಿದೆ. ಅದೇ ರೀತಿ ಮಾಧುರಿ ದೀಕ್ಷಿತ್ ಹಾಗೂ ಡಾ. ಶ್ರೀರಾಮ್ ನೆನೆ ಕೂಡ ಮುನೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಮಾಧುರಿ ದೀಕ್ಷಿತ್ ಅವರನ್ನು ನೋಡಿದಾಗ ವಯಸ್ಸು ಕೇವಲ ಒಂದು ಸಂಖ್ಯೆ ಎಂಬ ಮಾತು ನೆನಪಾಗುತ್ತದೆ. 59ನೇ ವಯಸ್ಸಿನಲ್ಲಿಯೂ ಅವರು ತಮ್ಮ ಆರೋಗ್ಯ, ಫಿಟ್ನೆಸ್ ಹಾಗೂ ಸೌಂದರ್ಯವನ್ನು ಅತ್ಯುತ್ತಮವಾಗಿ ಕಾಪಾಡಿಕೊಂಡಿದ್ದಾರೆ.
ಅಮೆರಿಕ ಮೂಲದ ಹೃದಯ ಶಸ್ತ್ರಚಿಕಿತ್ಸಕರಾಗಿರುವ ಡಾ. ಶ್ರೀರಾಮ್ ನೆನೆ ಅವರನ್ನು ವಿವಾಹವಾದ ಬಳಿಕ ಮಾಧುರಿ ಕೆಲ ವರ್ಷಗಳ ಕಾಲ ವಿದೇಶದಲ್ಲಿ ನೆಲೆಸಿದ್ದರು. ನಂತರ ಮತ್ತೆ ಭಾರತಕ್ಕೆ ಮರಳಿದ್ದಾರೆ.ಇವರಿಬ್ಬರ ಪರಸ್ಪರ ಗೌರವ, ಪ್ರೀತಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿವೆ. ಮಾಧುರಿ ಮತ್ತು ಶ್ರೀರಾಮ್ ದಂಪತಿಗಳು 2003 ರಲ್ಲಿ ತಮ್ಮ ಮೊದಲ ಮಗ ಅರಿನ್ ಅವರನ್ನು ಮತ್ತು 2005 ರಲ್ಲಿ ಅವರ ಎರಡನೇ ಮಗು ರಾಯನ್ ಅವರನ್ನು ಪಡೆದರು. ಅವರು ಈಗ ಬ್ಯುಸಿನೆಸ್ ನಲ್ಲಿ ತೊಡಗಿಸಿಕೊಂಡಿದ್ದು ಉದ್ಯಮಿಗಳಾಗಿ ಬೆಳೆಯುತ್ತಿದ್ದಾರೆ.
ಒಟ್ಟಾರೆಯಾಗಿ ಸೋಮಾವತಿ ಅಮವಾಸ್ಯೆಯಂದು ಬೆಂಗಳೂರಿನ ಮುನೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿರುವ ಮಾಧುರಿ ದೀಕ್ಷಿತ್ ಮತ್ತು ಡಾ. ಶ್ರೀರಾಮ್ ನೆನೆ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
Bangalore [Bangalore],Bangalore,Karnataka













