Last Updated:
ಪೂಜಾ ಸಾವಂತ್, ರಿಷಿ ಮನೋಹರ್ ಸೇರಿದಂತೆ ತಂಡ ಪುಣೆ ಸಾಂಗ್ಲಿ ಮಾರ್ಗದಲ್ಲಿ ಕಾರು ಅಪಘಾತಕ್ಕೀಡಾದರೂ ಸಣ್ಣ ಗಾಯ ಮಾತ್ರ, ಜೂನ್ 19ಕ್ಕೆ ಕಪ್ ಬಾಶಿ ಬಿಡುಗಡೆ ಮುಂದುವರಿಕೆ
ಮರಾಠಿ ಚಿತ್ರರಂಗದಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದ್ದು, ಜನಪ್ರಿಯ ನಟಿ ಪೂಜಾ ಸಾವಂತ್ (Actress Pooja Sawant) ಅಪಘಾತಕ್ಕೀಡಾಗಿದ್ದಾರೆ ಎಂಬ ಮಾಹಿತಿ ಅಭಿಮಾನಿಗಳಲ್ಲಿ ಕಳವಳ ಮೂಡಿಸಿದೆ. ಹಲವು ಯಶಸ್ವಿ ಚಿತ್ರಗಳ ಮೂಲಕ ಮರಾಠಿ ಸಿನಿಪ್ರಿಯರ ಮನಗೆದ್ದಿರುವ ಪೂಜಾ ಸಾವಂತ್, ತಮ್ಮ ಮುಂಬರುವ ಚಿತ್ರ ‘ಕಪಬಾಶಿ’ (Cup Bashi) ಯ ಪ್ರಚಾರ ಕೆಲಸಗಳಲ್ಲಿ ನಿರತರಾಗಿದ್ದ ವೇಳೆ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.
ಮಾಹಿತಿ ಪ್ರಕಾರ ನಟಿ, ತಮ್ಮ ಮುಂಬರುವ ಚಿತ್ರ ‘ಕಪ್ಬಾಶಿ’ ಪ್ರಚಾರಕ್ಕಾಗಿ ಪುಣೆಯಿಂದ ಸಾಂಗ್ಲಿ ಕಡೆಗೆ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಮೂರು ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದು ಕಾರು ಅಪಘಾತ ಸಂಭವಿಸಿದೆ. ಸತಾರಾ ಜಿಲ್ಲೆಯ ಕಾಶಿಲ್ನಲ್ಲಿ ಮೂರು ವಾಹನಗಳು ಪರಸ್ಪರ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ . ನಟಿ ಪೂಜಾ ಸಾವಂತ್, ನಟ ರಿಷಿ ಮನೋಹರ್ ಮತ್ತು ಚಿತ್ರದ ಪ್ರಚಾರ ಅಧಿಕಾರಿ ದರ್ಶನ್ ಮುಸಾಲೆ ಒಂದು ವಾಹನದಲ್ಲಿ ಪ್ರಯಾಣಿಸುತ್ತಿದ್ದರು.
ಕಪಬಾಶಿ ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡವು ವಿವಿಧ ನಗರಗಳಿಗೆ ಭೇಟಿ ನೀಡುತ್ತಿದ್ದು . ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಲು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು . ಹೀಗಾಗಿ ಈ ಸಮಯದಲ್ಲಿ ಅಪಘಾತ ಸಂಭವಿಸಿದ್ದು, ಆದಾಗ್ಯೂ, ಕಾರಿನಲ್ಲಿದ್ದ ಎಲ್ಲರೂ ಸುರಕ್ಷಿತವಾಗಿರುವುದರಿಂದ ದೊಡ್ಡ ಅನಾಹುತವೊಂದು ತಪ್ಪಿದೆ.
ಪೂಜಾ ಸಾವಂತ್ ಮತ್ತು ರಿಷಿ ಮನೋಹರ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ‘ಕಪ್ ಬಾಶಿ’ ಚಿತ್ರ ಜೂನ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ನಟಿ ನಿರ್ಮಲಾ ಸಾವಂತ್, ಪೂಜಾ ಸಾವಂತ್, ಹೊಸಬರಾದ ರಿಷಿ ಮನೋಹರ್, ನಯನಾ ಆಪ್ಟೆ, ಅನಂತ್ ಜೋಗ್, ರಾಹುಲ್ ರಾನಡೆ, ಆನಂದ್ ಇಂಗಲ್, ಆನಂದ್ ಕೇಲ್, ಚಿನ್ಮಯ್ ಶಿಂತ್ರೆ, ಉಮಾ ಸರ್ದೇಶ್ಮುಖ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
Bangalore [Bangalore],Bangalore,Karnataka













