Shah Rukh Khan-Deepika Padukone: 24 ಲಕ್ಷದ ಕಾರು ಖರೀದಿಸಿ, ಶಾರುಖ್-ದೀಪಿಕಾ ಪಡುಕೋಣೆ ಮೇಲೆ ಕೇಸ್! ವಕೀಲನಿಂದ ಕಾನೂನು ಹೋರಾಟ | | ACTPnews

ಶಾರುಖ್-ದೀಪಿಕಾ ಮೇಲೆ ಕೇಸ್!


Last Updated:

Shah Rukh Khan-Deepika Padukone: ವಕೀಲರೊಬ್ಬರು ಬರೋಬ್ಬರಿ 24 ಲಕ್ಷ ರೂಪಾಯಿ ಕೊಟ್ಟು ಹ್ಯುಂಡೈ ಕಂಪನಿಯ ಕಾರು ಖರೀದಿಸಿದ್ದಾರೆ. ಆದರೆ ಸ್ವಲ್ಪ ದಿನದಲ್ಲೇ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಹಾಗೂ ಖ್ಯಾತ ನಟಿ ದೀಪಿಕಾ ಪಡುಕೋಣೆ ಮೇಲೆ ಕೇಸ್ ಹಾಕಿದ್ದಾರಂತೆ!

ಶಾರುಖ್-ದೀಪಿಕಾ ಮೇಲೆ ಕೇಸ್!
ಶಾರುಖ್-ದೀಪಿಕಾ ಮೇಲೆ ಕೇಸ್!

ರಾಜಸ್ಥಾನ: ವಕೀಲರೊಬ್ಬರು (lawyer) ಬರೋಬ್ಬರಿ 24 ಲಕ್ಷ ರೂಪಾಯಿ ಕೊಟ್ಟು ಹ್ಯುಂಡೈ ಕಂಪನಿಯ ಕಾರು (Hyundai car) ಖರೀದಿಸಿದ್ದಾರೆ. ಆದರೆ ಸ್ವಲ್ಪ ದಿನದಲ್ಲೇ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ (Shah Rukh Khan) ಹಾಗೂ ಖ್ಯಾತ ನಟಿ ದೀಪಿಕಾ ಪಡುಕೋಣೆ (Deepika Padukone) ಮೇಲೆ ಕೇಸ್ ಹಾಕಿದ್ದಾರಂತೆ! ಜೊತೆಗೆ ಹ್ಯುಂಡೈ ಕಂಪನಿ ಮೇಲೂ ವಕೀಲರು ಕೇಸ್ ಜಡಿದಿದ್ದಾರೆ. ಸದ್ಯ ರಾಜಸ್ಥಾನದಲ್ಲಿ (Rajasthan) ಈ ಪ್ರಕರಣ ನಡೆದಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೈರಲ್ ಆಗಿದೆ. ಈ ಬಗ್ಗೆ ಜನರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.

24 ಲಕ್ಷ ಕೊಟ್ಟು ಖರೀದಿಸಿದ ಕಾರ್‌ನಲ್ಲಿ ಸಮಸ್ಯೆ

ರಾಜಸ್ಥಾನದಲ್ಲಿ ವಕೀಲರಾಗಿರುವ ಕೀರ್ತಿ ಸಿಂಗ್ ಎಂಬುವರು ಸುಮಾರು 24 ಲಕ್ಷ ರೂಪಾಯಿ ಬೆಲೆಯ ಹ್ಯುಂಡೈ ಅಲ್ಕಝಾರ್ ಎಸ್‌ಯುವಿ ಕಾರು ಒಂದನ್ನು ಖರೀದಿ ಮಾಡಿದ್ದಾರೆ. ಆದರೆ ಹೊಸ ಕಾರು ತಂದ ನಂತರ ಅವರಿಗೆ ಬಹಳ ತೊಂದರೆಗಳು ಎದುರಾದವು. ಕಾರಿನ ಎಂಜಿನ್‌ನಲ್ಲಿ ವೈಬ್ರೇಷನ್ ಇತ್ತು. ವೇಗವಾಗಿ ಓಡಿಸುವಾಗ ಪವರ್ ಕಡಿಮೆಯಾಗುತ್ತಿತ್ತು. ಇತರ ಕಾರುಗಳನ್ನು ಓವರ್‌ಟೇಕ್ ಮಾಡುವಾಗ ಸಹ ಸಮಸ್ಯೆಗಳು ಬರುತ್ತಿದ್ದವು. ಇದರಿಂದಾಗಿ ರಸ್ತೆಯಲ್ಲಿ ಅಪಾಯವಾಗಬಹುದು ಎಂದು ಅವರು ಭಾವಿಸಿದ್ದಾರೆ.

ಕೇಸ್‌ನಲ್ಲಿ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಹೆಸರು!

ಈ ಸಮಸ್ಯೆಗಳ ಬಗ್ಗೆ ಹ್ಯುಂಡೈ ಕಂಪನಿಗೆ ಹಲವು ಬಾರಿ ದೂರು ನೀಡಿದರು. ಆದರೆ ಕಂಪನಿಯಿಂದ ಸರಿಯಾದ ಪರಿಹಾರ ಸಿಗಲಿಲ್ಲ ಎಂದು ಆರೋಪಿಸಿದ್ದಾರೆ. ಇದರಿಂದಾಗ ಆಕ್ರೋಶಗೊಂಡ ವಕೀಲ ಕೀರ್ತಿ ಸಿಂಗ್ ಅವರು ಕಂಪನಿಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಆದರೆ ಇಲ್ಲಿ ವಿಶೇಷವಾಗಿ ಗಮನ ಸೆಳೆಯುವ ವಿಷಯವೆಂದರೆ, ಅವರು ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ನಟಿ ದೀಪಿಕಾ ಪಡುಕೋಣೆ ಅವರನ್ನೂ ಕೇಸಿನಲ್ಲಿ ಸೇರಿಸಿದ್ದಾರೆ.
ಕಾರಿನ ಬಗ್ಗೆ ಪ್ರಚಾರ ಮಾಡಿದ್ದ ಶಾರುಖ್, ದೀಪಿಕಾ

ಏಕೆಂದರೆ ಈ ಇಬ್ಬರು ಬಾಲಿವುಡ್ ನಟ, ನಟಿಯರು ಈ ಹ್ಯುಂಡೈ ಕಾರಿನ ಬ್ರ್ಯಾಂಡ್ ಅಂಬಾಸಡರ್‌ಗಳಾಗಿದ್ದಾರೆ. ಪ್ರಖ್ಯಾತಿ ಪಡೆದ ಜಾಹೀರಾತುಗಳಲ್ಲಿ ಅವರು ಕಾರಿನ ಬಗ್ಗೆ ಪ್ರಚಾರ ಮಾಡಿದ್ದಾರೆ. ಹೀಗಾಗಿ ಹ್ಯುಂಡೈ ಕಂಪನಿ ಜೊತೆ ಇವರಿಬ್ಬರನ್ನೂ ಈ ಕೇಸ್‌ನಲ್ಲಿ ಸೇರಿಸಿ, ವಕೀಲ ಕೀರ್ತಿ ಸಿಂಗ್ ದೂರು ನೀಡಿದ್ದಾರೆ ಅಂತ ನ್ಯೂಸ್18 ಇಂಗ್ಲಿಷ್ ವರದಿ ಮಾಡಿದೆ.

ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್

ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಷಯ ಬಹಳ ಚರ್ಚೆಗೆ ಒಳಗಾಗಿದೆ. ಒಬ್ಬ ಯೂಸರ್ ಪ್ರತಿಕ್ರಿಯಿಸುತ್ತಾ, “ಬ್ರ್ಯಾಂಡ್ ಅಂಬಾಸಡರ್‌ಗಳ ಮೇಲೆ ಕೇಸು ಹಾಕುವುದು ಒಳ್ಳೆಯ ಐಡಿಯಾ ಆದರೆ, ಕೋರ್ಟ್ ಅದನ್ನು ಅಂಗೀಕರಿಸುತ್ತದೆಯೋ ಇಲ್ಲವೋ ಅನುಮಾನ” ಎಂದು ಹೇಳಿದ್ದಾರೆ. ಮತ್ತೊಬ್ಬರು, “ಕಾರು ಕೊಂಡು ಶಾರುಖ್ ಖಾನ್ ಮತ್ತು ದೀಪಿಕಾ ಅವರೊಂದಿಗೆ ಕಾನೂನು ಹೋರಾಟಕ್ಕೆ ಇಳಿಯುವುದು? ಇದು ಓನರ್ ಮ್ಯಾನುವಲ್‌ನಲ್ಲಿ ಇಲ್ಲ!” ಎಂದು ಹಾಸ್ಯ ಮಾಡಿದ್ದಾರೆ.

ವಕೀಲರು ಯಾರ ಮೇಲಾದರೂ ಕೇಸ್ ಹಾಕ್ತಾರೆ

ಕೆಲವರು ಈ ಕ್ರಮವನ್ನು ಕಂಪನಿಯ ಮೇಲೆ ಒತ್ತಡ ಹೇರಲು ಮಾಡಿದ್ದು ಎಂದು ಹೇಳಿದ್ದಾರೆ. ಕೆಲವೊಮ್ಮೆ ಸರಳವಾಗಿ ಪರಿಹಾರ ಸಿಗದಿದ್ದರೆ, ತಿರುಗು ಬಾಣ ಬಳಸಬೇಕು ಎಂದು ಕೆಲವರು ಸಮರ್ಥನೆ ನೀಡಿದ್ದಾರೆ. ಆದರೆ ಕೆಲವರು ಈ ಆರೋಪಗಳನ್ನು ಸುಳ್ಳು ಎಂದು ಟೀಕಿಸುತ್ತಿದ್ದಾರೆ. “ಎಂಜಿನ್ ವೈಬ್ರೇಷನ್ ಮತ್ತು ಪವರ್ ಲಾಸ್ ಇದು ಕಾರಿನ ಸಮಸ್ಯೆಗಳು. ವಕೀಲರಿಗೆ ಕೇಸುಗಳು ಇಲ್ಲದಿದ್ದರೆ ಯಾರ ಮೇಲಾದರೂ ಕೇಸು ಹಾಕುತ್ತಾರೆ” ಎಂದು ಕೆಲವರು ವ್ಯಂಗ್ಯವಾಡುತ್ತಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed